ಪೇಟಿಎಂನಲ್ಲಿ ಗ್ಯಾಸ್ ಬುಕ್ ಮಾಡಿ, ಈ ಕ್ಯಾಶ್ ಬ್ಯಾಕ್ ಆಫರ್ ನಿಮ್ಮದಾಗಿಸಿಕೊಳ್ಳಿ

ಇಂದು ಯಾವುದೇ ಒಂದು ಪೇಮೆಂಟ್ ಗಳನ್ನು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಇದಕ್ಕೆಲ್ಲ ಕಾರಣ ಆನ್ಲೈನ್ ಟೆಕ್ನಾಲಜಿ. ಹೌದು. ಗೂಗಲ್ ಪೇ, ಫೋನ್ ಪೇ , ಪೇಟಿಎಂ ನಂತಹ ಅಪ್ಲಿಕೇಶನ್‌ಗಳಿಂದಲೂ ವಿವಿಧ ಬಿಲ್‌ಗಳನ್ನು ಪಾವತಿಸಬಹುದು. ಇದೀಗ ಒಂದು ಹೆಜ್ಜೆ ಮುಂದೆ ಎನ್ನುವಂತೆ ಪೇಟಿಎಂ ಹೊಸ ಕೊಡುಗೆಯನ್ನು ಪ್ರಾರಂಭಿಸಿದೆ.

ಹೌದು. ಈ ಆಪ್ ಗಳ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. ಪೇಟಿಎಂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಈ ಅಪ್ಲಿಕೇಶನ್‌ಗಳು ವಿವಿಧ ಕೊಡುಗೆಗಳನ್ನು ಪರಿಚಯಿಸುತ್ತಿವೆ. ಕ್ಯಾಶ್ ಬ್ಯಾಕ್ ಕೊಡುಗೆಗಳ ಜೊತೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ. Paytm ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ಬಂಪರ್​​ ಆಫರ್ ಘೋಷಿಸಿದೆ. ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ 100 ಪ್ರತಿಶತ ಕ್ಯಾಶ್​ಬ್ಯಾಕ್ ನೀಡಲಾಗುವುದು ಎಂದು ಹೇಳಲಾಗಿದೆ.

ಗ್ಯಾಸ್ ಬುಕ್ ಮಾಡುವಾಗ ಗ್ರಾಹಕರು FREEGAS ಪ್ರೋಮೋ ಕೋಡ್ ಅನ್ನು ಅನ್ವಯಿಸುವ ಮೂಲಕ ಈ ಕೊಡುಗೆಯನ್ನು ಪಡೆಯಬಹುದು. ಆದರೆ ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಎಲ್ಲಾ ಗ್ರಾಹಕರಿಗೆ ಈ ಆಫರ್ ಲಭ್ಯವಿರುವುದಿಲ್ಲ. ಬುಕ್ಕಿಂಗ್ ಮಾಡುವ ಪ್ರತಿ 500ನೇ ಗ್ರಾಹಕರು ಈ ಕೊಡುಗೆಯನ್ನು ಪಡೆಯುತ್ತಾರೆ ಎಂದು Paytm ಸ್ಪಷ್ಟಪಡಿಸಿದೆ. Paytm ನಲ್ಲಿ ಮತ್ತೊಂದು ಆಫರ್ ಕೂಡ ಲಭ್ಯವಿದೆ. ಪ್ರೋಮೋ ಕೋಡ್ GAS1000 ಅನ್ನು ಅನ್ವಯಿಸುವ ಮೂಲಕ ನೀವು ಗ್ಯಾಸ್ ಬುಕಿಂಗ್‌ನಲ್ಲಿ ರೂ.10-ರೂ.1000 ಕ್ಯಾಶ್‌ಬ್ಯಾಕ್ ಪಡೆಯಬಹುದು.

ಪೇಟಿಎಂ ಮೂಲಕ ಗ್ಯಾಸ್ ಬುಕ್ ಮಾಡಲು ಗ್ರಾಹಕರು ಅನುಸರಿಸಬೇಕಾದ ಹಂತಗಳು:
ಹಂತ 1: ಮೊದಲು Paytm ಅಪ್ಲಿಕೇಶನ್ ತೆರೆಯಿರಿ.
ಹಂತ 2: ಅದರ ನಂತರ ರೀಚಾರ್ಜ್ ಮತ್ತು ಬಿಲ್ ಪಾವತಿಗಳ ವಿಭಾಗದಲ್ಲಿ ಬುಕ್ ಗ್ಯಾಸ್ ಸಿಲಿಂಡರ್ ಆಯ್ಕೆಯನ್ನು ಆಯ್ಕೆಮಾಡಿ.
ಹಂತ 3: ಮುಂದೆ ನಿಮ್ಮ ಗ್ಯಾಸ್ ಪೂರೈಕೆದಾರರನ್ನು ಆಯ್ಕೆ ಮಾಡಿ. ಅಂದರೆ ಭಾರತ್‌ಗ್ಯಾಸ್, ಎಚ್‌ಪಿ ಗ್ಯಾಸ್, ಇಂಡೇನ್ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬೇಕು. ಹಂತ 4: ನಂತರ ನಿಮ್ಮ LPG ID ಅನ್ನು ನಮೂದಿಸಿ ಅಥವಾ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಮತ್ತು ಮುಂದುವರೆಯಿರಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5: ಅದರ ನಂತರ ನೀವು ಪಾವತಿಸಬೇಕಾದ ಮೊತ್ತವನ್ನು ನೀವು ನೋಡುತ್ತೀರಿ. ಪರದೆಯ ಕೆಳಭಾಗದಲ್ಲಿ ನೀವು ಕ್ಯಾಶ್‌ಬ್ಯಾಕ್ ಆಫರ್ ಅನ್ನು ಅನ್ವಯಿಸು ಎಂಬ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ತಿಳಿಸಿದ ಪ್ರೋಮೋ ಕೋಡ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆಮಾಡಿ.
ಹಂತ 6: ಅದರ ನಂತರ Proceed ಮೇಲೆ ಕ್ಲಿಕ್ ಮಾಡಿ ಮತ್ತು ಹಣವನ್ನು ಪಾವತಿಸಿ.

Leave A Reply

Your email address will not be published.