ಭೀಕರ ಕಾರು ಅಪಘಾತದಲ್ಲಿ ದುರಂತ ಸಾವು ಕಂಡ ಕಾಂಗ್ರೆಸ್​ ನಾಯಕನ ಮಗಳು

ಹೈದರಾಬಾದ್​: ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ನಾಯಕನ ಮಗಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಮುಂಜಾನೆ ಹೈದರಾಬಾದ್​​ ಹೊರವಲಯದ ಶಂಶಾಬಾದ್​ನಲ್ಲಿ ನಡೆದಿದೆ.

ಮೃತಳನ್ನು ಕಾಂಗ್ರೆಸ್​ ನಾಯಕ ಮೊಹಮ್ಮದ್​ ಫಿರೋಜ್ ಖಾನ್​ ಅವರ ಮಗಳು ತಾನ್ಯಾ ಕಾಕಡೆ (25) ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಫ್ರೆಂಡ್ಸ್​ ಜೊತೆ ಕಾರಿನಲ್ಲಿ ಪ್ರಯಾಣ ಮಾಡುವಾಗ ನಿಯಂತ್ರಣ ತಪ್ಪಿ  ಡಿವೈಡರ್​ಗೆ ಡಿಕ್ಕಿ ಹೊಡೆದು, ಪಲ್ಟಿ ಹೊಡೆದು ದುರಂತ ಸಂಭವಿಸಿದೆ. ಪೊಲೀಸರ ಪ್ರಕಾರ ತಾನ್ಯಾ, ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದರು. ಕಾರು ಚಲಾಯಿಸುತ್ತಿದ್ದ ಮಿರ್ಜಾ ಅಲಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಜಖಂಗೊಂಡಿದೆ.

ಈ ವೇಳೆ ಆಕೆಯೊಂದಿಗೆ ಇನ್ನಿಬ್ಬರು ಸ್ನೇಹಿತರು ಸಹ ಇದ್ದರು. ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಾನ್ಯಾಳ ಮೃತದೇಹವನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆರ್‌ಜಿಐ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಂದಹಾಗೆ ಮೃತ ತಾನ್ಯಾಳ ತಂದೆ ಫಿರೋಜ್ ಖಾನ್, ಹೈದರಾಬಾದ್​ನ ನಾಂಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದು, 2019 ರಲ್ಲಿ ಹೈದರಾಬಾದ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದಾರೆ.ಮೃತ ತಾನ್ಯಾ ವೃತ್ತಿಯಲ್ಲಿ ಬ್ಯೂಟಿಷಿಯನ್​ ಆಗಿದ್ದರು.

error: Content is protected !!
Scroll to Top
%d bloggers like this: