LPG ಗ್ರಾಹಕರಿಗೆ ಗುಡ್ ನ್ಯೂಸ್ ; ಸಿಲಿಂಡರ್ ದರ ಇಳಿಕೆ

ನವದೆಹಲಿ: ದುಬಾರಿ ದುನಿಯಾದಲ್ಲಿ ಬೆಲೆ ಏರಿಕೆಯ ಕಾರಣದಿಂದ ಬೇಸತ್ತು ಹೋಗಿದ್ದ ಗ್ರಾಹಕರಿಗೆ, ಎಲ್ ಪಿಜಿ ಸಿಲಿಂಡರ್ ದರ ಕಡಿಮೆ ಮಾಡುವ ಮೂಲಕ ಗುಡ್ ನ್ಯೂಸ್ ನೀಡಿದೆ.

ಹೌದು. ಎಲ್ ಪಿಜಿ ಹೊಸ ದರಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಇಂದಿನಿಂದ, ಎಲ್ ಪಿಜಿ ಸಿಲಿಂಡರ್ ಗಳು ಅಗ್ಗವಾಗಿವೆ. ಇಂಡಿಯನ್ ಆಯಿಲ್ ಆಗಸ್ಟ್ 1 ರಂದು ಬಿಡುಗಡೆ ಮಾಡಿದ ಹೊಸ ದರದ ಪ್ರಕಾರ, ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 36 ರೂ.ಗಳಷ್ಟು ಕಡಿಮೆ ಮಾಡಲಾಗಿದೆ.

ವಾಣಿಜ್ಯ ಸಿಲಿಂಡರ್ ಗಳು ಅಗ್ಗವಾಗಿದ್ದರೂ, 14.2 ಕೆಜಿ ದೇಶೀಯ ಎಲ್ ಪಿಜಿ ಸಿಲಿಂಡರ್ ಗಳ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸಬ್ಸಿಡಿ ರಹಿತ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ  ಬೆಲೆ ಕಳೆದ ಎರಡು ವರ್ಷಗಳಲ್ಲಿ  ಹೆಚ್ಚಾಗಿದೆ. ಆದರೆ ಹೊಸ ದರದ ಪ್ರಕಾರ, ಇಂದು ದುಬಾರಿ ಅಥವಾ ಅಗ್ಗವಾಗಿಲ್ಲ.

ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆಯ ಪಟ್ಟಿ:

*19 ಕೆಜಿ ಎಲ್ ಪಿಜಿ ಸಿಲಿಂಡರ್ ದೆಹಲಿಯಲ್ಲಿ 2012.50 ರೂ.ಗೆ ಬದಲಾಗಿ 1976.50 ರೂ.ಗೆ ಲಭ್ಯವಾಗಲಿದೆ.

*ಕೋಲ್ಕತ್ತಾದಲ್ಲಿ, ಈ ಮೊದಲು ಇದು 2132.00 ರೂ.ಗೆ ಲಭ್ಯವಿತ್ತು, ಆದರೆ ಇಂದಿನಿಂದ 2095.50 ರೂ.ಗೆ ಲಭ್ಯವಿದೆ.
*ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ ಮುಂಬೈನಲ್ಲಿ 1936.50 ರೂ.ಗೆ ಮತ್ತು ಚೆನ್ನೈನಲ್ಲಿ 2141 ರೂ.ಗೆ ಇಳಿದಿದೆ.

Leave A Reply

Your email address will not be published.