ಶೀಘ್ರದಲ್ಲೇ ಮಸೂದ್, ಫಾಝಿಲ್ ಮನೆಗೆ ಭೇಟಿ ನೀಡುತ್ತೇನೆ : ಸಿಎಂ ಬಸವರಾಜ್ ಬೊಮ್ಮಾಯಿ

ಕರಾವಳಿ ನಿಧಾನಕ್ಕೆ ಚೇತರಿಸಿತ್ತಿದೆ. ಆದರೂ ಜನರಿಗೆ ಭಯ ಇನ್ನೂ ಹೋಗಿಲ್ಲ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಿಸಿ ಆರುವ ಮೊದಲೇ ಫಾಝಿಲ್ ಎನ್ನುವ ಯುವಕನ ಬರ್ಬರ ಕೊಲೆಯಾಗುತ್ತೆ. ಈ ಎಲ್ಲಾ ಹತ್ಯೆಗಳ ಪ್ರಕರಣ ತನಿಖೆಯಲ್ಲಿದೆ.

ರಾಜ್ಯದ ಮಾನ್ಯಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ನಂತರ ಈ ಹತ್ಯೆಯ ತನಿಖೆಯನ್ನು NIA ಗೆ ವಹಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯ ಸರಣಿ ಹತ್ಯೆ ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗ ಕೊಲೆಗಡುಕರನ್ನು ಬಂಧಿಸುತ್ತೇವೆ. ಪ್ರವೀಣ್ ಹತ್ಯೆ ಪ್ರಕರಣ ಎನ್‌ಐಎಗೆ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ.
ಅದಕ್ಕೆ ಸಂಬಂಧಿಸಿದಂತೆ ಪೇಪರ್ ಕೆಲಸಗಳು ನಡೆಯುತ್ತಿದೆ. ಅನೌಪಚಾರಿಕವಾಗಿ ಎನ್‌ಐಎಗೆ ತಿಳಿಸಿದ್ದೇವೆ. ಆ ಪ್ರಕಾರ ಈಗಾಗಲೇ ಎನ್‌ಐಎ ಅಧಿಕಾರಿಗಳು ಕೇರಳ, ಮಂಗಳೂರಿನಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ‌. ಆ ಪ್ರಕಾರ ಈಗಾಗಲೇ ಎನ್‌ಐಎ ಅಧಿಕಾರಿಗಳು ಕೇರಳ, ಮಂಗಳೂರಿನಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಂಬ ಮಾಹಿತಿಯನ್ನು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹತ್ಯೆಯಾದ ಮಸೂದ್, ಫಾಝಿಲ್ ಮನೆಗೆ ಭೇಟಿ ನೀಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Leave A Reply

Your email address will not be published.