ಉಡುಪಿ: ಜಿಲ್ಲೆಯ ಕಾಪು ಪ್ರಖಂಡ ಬಜರಂಗದಳ ಸಂಚಾಲಕರೊಬ್ಬರ ಹತ್ಯೆಗೆ ಸಂಚು ನಡೆದಿದೆ ಎನ್ನುವ ಆರೋಪವೊಂದು ಕೇಳಿ ಬಂದಿದ್ದು, ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಜರಂಗದಳ ಸಂಚಾಲಕ ಸುಧೀರ್ ಸೋನು ಎಂಬವರ ಹತ್ಯೆಗೆ ಸಂಚು ನಡೆದಿದೆ ಎನ್ನುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ವತಃ ಸುಧೀರ್ ಅವರೇ ದೂರು ದಾಖಲಿಸಿದ್ದಾರೆ.ಇಂದು ಮುಂಜಾನೆ ಸುಧೀರ್ ಮನೆ ಬಾಗಿಲಿಗೆ ಬಂದಿದ್ದ ಇಬ್ಬರು ಮುಸ್ಲಿಂ ಯುವಕರು ನಗುತ್ತಲೇ ಮಾತನಾಡುತ್ತಾ, ಆಸೀಫ್ ಎಂಬಾತ ಕಾರಿನಲ್ಲಿದ್ದಾನೆ, ನೀವು ಅಲ್ಲಿಗೆ ಬನ್ನಿ ಮಾತನಾಡಲು ಇದೆ ಎಂದು ಕರೆದಿದ್ದಾರೆ. ಇದಕ್ಕೆ ಸುಧೀರ್ ಒಪ್ಪದೇ ಇದ್ದಾಗ ಆ ಇಬ್ಬರು ಇನ್ನಷ್ಟು ಒತ್ತಾಯ ನಡೆಸಿದ್ದು, ಬಳಿಕ ನಿರ್ಗಮಿಸಿದ್ದಾರೆ ಎನ್ನಲಾಗಿದೆ.
ಆ ಬಳಿಕ ಅವರ ಚಲನವಲನ ಗಮನಿಸಿದ ಸುಧೀರ್ ಅವರಿಗೆ ಆ ತಂಡದ ಬಳಿಯಲ್ಲಿ ಹರಿತವಾದ ಆಯುಧಗಳು ಇರುವುದು ಗಮನಕ್ಕೆ ಬಂದಿದ್ದು, ಕರೆದ ಕೂಡಲೇ ತೆರಳದ ಪರಿಣಾಮ ನೆತ್ತರು ಹರಿಯುವುದು ತಪ್ಪಿದೆ. ಒಂದು ವೇಳೆ ಆ ವ್ಯಕ್ತಿಗಳು ಕರೆದಾಗ ತೆರಳುತ್ತಿದ್ದರೆ ಕೊಲೆ ನಡೆಸುವ ಸಾಧ್ಯತೆ ಇತ್ತು ಎನ್ನುವ ಅನುಮಾನದಲ್ಲಿ ಸುಧೀರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದು, ಮನೆ ಬಾಗಿಲಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳ ಪತ್ತೆ ಹಚ್ಚಿ, ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
You must log in to post a comment.