ಕಾರಿನಲ್ಲಿ ಹೋಗುತ್ತಿದ್ದಾಗ ಹಸುವೊಂದು ಅಡ್ಡ ಬಂದಿದೆ. ಈ ವೇಳೆ ಹಸುವನ್ನು ರಕ್ಷಿಸಲು ಹೋಗಿ ಕಾರಿನಲ್ಲಿ ಚಲಿಸುತ್ತಿದ್ದ ತಂದೆ-ತಾಯಿ ಮೃತಪಟ್ಟು, ಮಗ ಗಾಯಗೊಂಡ ಘಟನೆ ನಡೆದಿದೆ.
ಅಂಕುರ್ ಅಗರ್ವಾಲ್ ಎಂಬ 27 ವರ್ಷದ ಯುವಕ ತನ್ನ ತಂದೆ ಶಯಮ್ ಲಾಲ್ ಅಗರವಾಲ್ (70) ಮತ್ತು ತಾಯಿ ಮಂಜು (60) ಪ್ರಯಾಣ ಮಾಡುತ್ತಿದ್ದು, ತಂದೆ ತಾಯಿಇಬ್ಬರು ಮೃತಪಟ್ಟಿರುವ ಈ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಝಾನ್ಸಿ-ಖಜುರಾಹೊ ರಸ್ತೆಯಲ್ಲಿ ನಡೆದಿದೆ.
ಝಾನ್ಸಿಯಿಂದ ಛತ್ತರ್‌ಪುರದ ತಮ್ಮ ಮನೆಗೆ ಅಂಕುರ್ ಅವರು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ, ಕಾರಿಗೆ ಏಕಾಏಕಿ ಹಸುವೊಂದು ಅಡ್ಡ ಬಂದಿದೆ. ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಡನ್ ಆಗಿ ಅಂಕುರ್ ಬ್ರೇಕ್ ಹಾಗಿದ್ದಾರೆ. ಕಾರು ಪಲ್ಟಿಯಾಗಿ ಬಿದ್ದುಬಿಟ್ಟಿದೆ. ಈ ಸಂದರ್ಭದಲ್ಲಿ ವೃದ್ಧ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಜಯ್ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 22 ಕಿಮೀ ದೂರದಲ್ಲಿರುವ ಬಿಲಹರಿ ಗ್ರಾಮದ ಬಳಿ ಅಪಘಾತ ಸಂಭವಿಸಿರುವುದಾಗಿ ನೌಗಾಂವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ವೇದಿಯಾ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತಪಟ್ಟವನ್ನು ಕಾರಿನಿಂದ ಹೊರತೆಗೆದು ಗಾಯಾಳು ಅಂಕುರ್ನನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.
You must log in to post a comment.