ಸುನಾಮಿ ಕಿಟ್ಟಿಯಿಂದ ಮತ್ತೊಂದು ಗಲಾಟೆ- ಕುಡಿದ ಮತ್ತಿನಲ್ಲಿ ದಾಂಧಲೆ

ಕಿರುತೆರೆಯಲ್ಲಿ ಮಿಂಚಿದ ನಟ ಸುನಾಮಿ ಕಿಟ್ಟಿ ಹೆಸರು ನಿಮಗೆ ಗೊತ್ತಿರಬಹುದು. ಹಲವಾರು ಶೋಗಳಲ್ಲಿ ಮಿಂಚಿದ ಈ ಯುವಕ ಬಹಳ ಬೇಗ ಲೈಮ್ ಲೈಟ್ ನಲ್ಲಿ ಸುದ್ದಿ ಮಾಡಿದವರು. ಆದರೆ ಇತ್ತೀಚೆಗೆ ಸುನಾಮಿ ಕಿಟ್ಟಿ ಪಬ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಪಬ್ ನಲ್ಲಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತರು ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಶೋಕ್ ನಗರದಲ್ಲಿ ಇರುವ ಮಿರಾಜ್ ಪಬ್ ನಲ್ಲಿ ಜುಲೈ 24 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಟೇಬಲ್ ಮೇಲೆ ಶಾಂಪೇನ್ ಬಿದ್ದಿದೆ. ಈ ಸಂಬಂಧ ಶಿವಮೊಗ್ಗದ ಉದ್ಯಮಿ ಶ್ರೀನಿವಾಸ್ ಹಾಗೂ ಸ್ನೇಹಿತರು ಪ್ರಶ್ನೆ ಮಾಡಿದ್ದಕ್ಕೆ ಕಿಟ್ಟಿ ಹಾಗೂ ಅವರ ಸ್ನೇಹಿತ ಚೇತನ್ ಗೌಡರಿಂದ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪಬ್ ಸಿಬ್ಬಂದಿ ಸಮಾಧಾನ ಮಾಡಿ ಪರಿಸ್ಥಿತಿ ಸುಧಾರಿಸಿದರು.

ಈ ಸಂಬಂಧ ಕಿಟ್ಟಿ ಸ್ನೇಹಿತ ಚೇತನ್ ಗೌಡ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀನಿವಾಸ್ ಅವರು ನಾನು ಶಿವಮೊಗ್ಗದ ರೌಡಿ ಎಂದು ಧಮ್ಮಿ ಹಾಕಿ, ಅವರ ಸ್ನೇಹಿತರಾದ ಪ್ರಶಾಂತ್ ಕಡೆಯವರು ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಸೂಕ್ತ ತನಿಖೆ ಕೈಗೊಳ್ಳುವಂತೆ ದೂರಿನಲ್ಲಿ ಚೇತನ್ ಗೌಡ ಉಲ್ಲೇಖಿಸಿದ್ದಾರೆ. ಇನ್ನೂ ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top
%d bloggers like this: