ಮಳೆಯನ್ನು ಅಳೆಯುವ ಬಗೆ ಹೇಗೆ ? ಗ್ರೀನ್, ಆರೆಂಜ್, ಯಲ್ಲೋ, ರೆಡ್ ಅಲರ್ಟ್ ಗಳ ಅರ್ಥವೇನು ?

ಮತ್ತೆ ಮಳೆಯಾಗಿದೆ. ಹೌದು, ರಾಜ್ಯದೆಲ್ಲೆಡೆ ಕೆಲವು ಕಡೆ ಜಲಾವೃತಗೊಂಡಿದೆ. ಹೀಗಾಗುವ ಮೊದಲು ಹವಾಮಾನ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಅದೇನೆಂದರೆ ಅಪಾಯದ ಮಟ್ಟ ತಲುಪಿದ ನೀರಿನ ಮಟ್ಟವನ್ನು ಅಳೆಯುವ ರೀತಿ, ಎಷ್ಟು ಮಳೆಯಾಗಿದೆ, ಅದನ್ನ ಅಳೆಯುವುದು ಹೇಗೆ, ಅಳತೆ ಮಾಡುವವರು ಯಾರು, ಹವಾಮಾನ ಕೇಂದ್ರವು ನೀಡುವ ಹಳದಿ, ಕಿತ್ತಳೆ ಮತ್ತು ಕೆಂಪು ಎಚ್ಚರಿಕೆಗಳ ಅರ್ಥ ಏನು? ಈ ಎಲ್ಲಾ ಅಂಶಗಳ ಬಗ್ಗೆ ಒಂದು ಕಣ್ಣೋಟ.

ಜಲಚಕ್ರದಲ್ಲಿ ಮಳೆಯು ಪ್ರಮುಖ ಪಾತ್ರ ವಹಿಸುತ್ತದೆ. ಸಮುದ್ರಗಳ ನೀರು ಹಬೆಯಾಗಿ ಬದಲಾಗುತ್ತದೆ.. ಆ ತೇವಾಂಶವು ಆಕಾಶದಲ್ಲಿ ಘನೀಕರಿಸುತ್ತದೆ ಮತ್ತು ಗುಳ್ಳೆಗಳಂತೆ ರೂಪುಗೊಂಡ ಮಳೆಯು ಆಕಾಶದಲ್ಲಿ ತೇಲುತ್ತದೆ. ಕೊನೆಗೆ ಮಳೆಯಾಗಿ ನೆಲ ತಲುಪುತ್ತದೆ. ನದಿಗಳು ಮಳೆಯ ನೀರನ್ನು ಮತ್ತೆ ಸಮುದ್ರಕ್ಕೆ ಒಯ್ಯುತ್ತವೆ.


Ad Widget

Ad Widget

Ad Widget

Ad Widget

Ad Widget

Ad Widget

ಹವಾಮಾನ ಕೇಂದ್ರವು ನಿಮ್ಮ ನಗರ ಅಥವಾ ಪ್ರದೇಶದಲ್ಲಿ ಹಳದಿ, ಕಿತ್ತಳೆ ಮತ್ತು ಕೆಂಪು ಎಚ್ಚರಿಕೆಗಳನ್ನು ನೀಡುತ್ತದೆ. ಅದರ ಅರ್ಥವೇನು? ಅದನ್ನ ಹೇಗೆ ನಿರ್ಧರಿಸುತ್ತಾರೆ..? ಇಲ್ಲಿ ತಿಳಿಯೋಣ.

ಭಾರತದಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ಇಂತಹ ಎಚ್ಚರಿಕೆ/ ಅಲರ್ಟ್‌ಗಳನ್ನು ಕಾಲಕ್ಕೆ ತಕ್ಕಂತೆ ನೀಡುತ್ತದೆ. ಅದರ ಅನುಸಾರ 4 ವಿಭಿನ್ನ ಬಣ್ಣಗಳ ಕೋಡ್ ಬಳಸುತ್ತದೆ. ವಿವಿಧ ಹವಾಮಾನ ಪರಿಸ್ಥಿತಿಗಳನ್ನು ಸೂಚಿಸಲು ಮತ್ತು ಎಚ್ಚರಿಕೆಗಳನ್ನು ಒದಗಿಸಲು ಸಾಮಾನ್ಯವಾಗಿ ಬಳಸುವ ಬಣ್ಣ ಸಂಕೇತಗಳು ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು. ಇದರ ಅರ್ಥ ತಿಳಿಯೋಣ ಬನ್ನಿ.

ಗ್ರೀನ್ ಅಲರ್ಟ್ (ಹಸಿರು ಎಚ್ಚರಿಕೆ): ಹಸಿರು ಎಚ್ಚರಿಕೆ ಎಂದರೆ ಸಾಮಾನ್ಯವಾಗಿ ಹವಾಮಾನ ಪರಿಸ್ಥಿತಿಗಳು ಉತ್ತಮವಾಗಿವೆ ಎಂಬ ಅರ್ಥ. ಈ ಎಚ್ಚರಿಕೆಯ ಭಾರತೀಯ ಹವಾಮಾನ ಇಲಾಖೆ ಯಾವುದೇ ವಿಶೇಷ ಸಲಹೆ ಸೂಚನೆ ನೀಡುವುದಿಲ್ಲ.

ರೆಡ್ ಅಲರ್ಟ್: ಅಪಾಯಕಾರಿ ಸನ್ನಿವೇಶ ಎಂದರ್ಥ. 130 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ, ಭಾರೀ ಮಳೆಯಂತೆ ಚಂಡಮಾರುತದ ತೀವ್ರತೆ ಹೆಚ್ಚಾದಾಗ, ಹವಾಮಾನ ಇಲಾಖೆಯು ಚಂಡಮಾರುತದ ಪ್ರದೇಶಗಳಿಗೆ ರೆಡ್ ಅಲರ್ಟ್ ಹೇಳುತ್ತದೆ. ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗುತ್ತದೆ. ಕನಿಷ್ಠ 2 ಗಂಟೆಗಳ ಕಾಲ 30 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದಾಗ ಮಾತ್ರ ಈ ರೀತಿಯ ಹವಾಮಾನ ಇಲಾಖೆ ಈ ಎಚ್ಚರಿಕೆ ನೀಡುತ್ತದೆ. ಈ ಸಂದರ್ಭಗಳಲ್ಲಿ ಅಪಾಯದ ಪ್ರಮಾಣ ಹೆಚ್ಚಾಗುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರ ಮಾಡಲಾಗುತ್ತದೆ. ಹವಾಮಾನವು ಅಪಾಯಕಾರಿ ಮಟ್ಟಕ್ಕೆ ತಲುಪಿ, ಭಾರೀ ಹಾನಿಯ ಅಪಾಯವಿದ್ದರೆ, ನಂತರ ರೆಡ್ ಅಲರ್ಟ್ ಘೋಷಿಸಲಾಗುತ್ತದೆ.

ಹಳದಿ ಎಚ್ಚರಿಕೆ: ಜನರಿಗೆ ಎಚ್ಚರಿಕೆ ನೀಡಲು ಹವಾಮಾನ ಇಲಾಖೆ ಹಳದಿ ಎಚ್ಚರಿಕೆಯನ್ನು ಬಳಸುತ್ತದೆ. ಯಾವುದೇ ಅಪಾಯದಿಂದ ಜನರನ್ನು ಎಚ್ಚರಿಸಲು ಇದನ್ನು ಬಳಸಲಾಗುತ್ತದೆ. ಈ ಎಚ್ಚರಿಕೆಯ ಸಮಯದಲ್ಲಿ ಹವಾಮಾನ ಪರಿಸ್ಥಿತಿಯು 7.5 ರಿಂದ 15 ಮಿಮೀ ಭಾರೀ ಮಳೆಯಾಗುತ್ತದೆ. ಇದು ಮುಂದೆ 1 ಅಥವಾ 2 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆ ಇರುತ್ತದೆ. ಪ್ರವಾಹಕ್ಕೆ ಕಾರಣವಾಗಬಹುದು.

ಆರೆಂಜ್ ಅಲರ್ಟ್ (ಕಿತ್ತಳೆ ಎಚ್ಚರಿಕೆ): ಹವಾಮಾನ ಹದಗೆಡುತ್ತಿದ್ದಂತೆ ಹಳದಿ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್‌ಗೆ ಬದಲಾಯಿಸುತ್ತೆ. ಅಂದರೆ, ಚಂಡಮಾರುತ. ಇವು ಹವಾಮಾನ ಪರಿಸ್ಥಿತಿಗಳನ್ನು ಹದಗೆಡಿಸಬಹುದು. ರಸ್ತೆ ಮತ್ತು ವಾಯು ಸಾರಿಗೆಗೆ ಹಾನಿಯಾಗಬಹುದು. ಜೀವ ಮತ್ತು ಆಸ್ತಿ ನಷ್ಟವನ್ನು ಉಂಟುಮಾಡಬಹುದು. ಹಾಗಾಗಿ ಜನರು ಮನೆಯಲ್ಲೇ ಇರುವಂತೆ ಸೂಚಿಸಲಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಗಾಳಿಯ ವೇಗ ಗಂಟೆಗೆ 65 ರಿಂದ 75 ಕಿ.ಮೀ., 15ರಿಂದ 33 ಮಿ.ಮೀ. ಭಾರೀ ಮಳೆಯ ಎಚ್ಚರಿಕೆ ಇರುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಸಂತ್ರಸ್ತ ಪ್ರದೇಶದಿಂದ ಜನರನ್ನು ತಕ್ಷಣವೇ ಸ್ಥಳಾಂತರಿಸುವ ಕೆಲಸ ಮೊದಲು ಮಾಡುತ್ತಾರೆ.

ಅತಿ ಕಡಿಮೆ ಮಳೆ ಎಂದರೆ ಗಂಟೆಗೆ 1 ಮಿ ಮೀ ಗಿಂತ ಕಡಿಮೆ ಮಳೆ
ಲಘು ಮಳೆ ಎಂದರೆ ಗಂಟೆಗೆ 1 ಮಿಮೀ ಮತ್ತು 1 ಮಿಮೀ ನಡುವೆ ಮಳೆ
ಸಾಧಾರಣ ಮಳೆ ಎಂದರೆ ಗಂಟೆಗೆ 2 ಮಿಮೀ ಮತ್ತು 5 ಮಿಮೀ ನಡುವೆ ಮಳೆ
ಭಾರಿ ಮಳೆ ಎಂದರೆ ಗಂಟೆಗೆ 5 ಮಿಮೀ ನಿಂದ ಗಂಟೆಗೆ 10 ಮಿಮೀ ಮಳೆ
ಅತಿ ಭಾರಿ ಮಳೆ ಎಂದರೆ ಗಂಟೆಗೆ 10 ಮಿಮೀನಿಂದ 20 ಮಿಮೀ ನಡುವೆ
ಕುಂಭದ್ರೋಣ ಮಳೆ (ಧಾರಾಕಾರ ಮಳೆ): ಮಳೆಯು ಗಂಟೆಗೆ 20 ಮಿಮೀ ಗಿಂತ ಜಾಸ್ತಿ ಬಿದ್ದರೆ ಮಳೆಯ ಈ ಪ್ರಮಾಣ/ ಮಾದರಿಯನ್ನು ಅವಲಂಬಿಸಿ ಮಳೆಯನ್ನು ಮತ್ತೊಂದು ವಿಧದಿಂದಲೂ ಪರಿಗಣಿಸಲಾಗುತ್ತದೆ.

error: Content is protected !!
Scroll to Top
%d bloggers like this: