ರಾಷ್ಟ್ರಪತಿ …ರಾಷ್ಟ್ರಪತ್ನಿ….? ಹೆಸರಲ್ಲೇನಿದೆ ಎನ್ನುವವರಿಗೆ ಇಲ್ಲಿದೆ ಉತ್ತರ!!!

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದು ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಹಾಗಾಗಿ ಇಲ್ಲಿ ನಾವು ರಾಷ್ಟ್ರಪತಿ ಹೆಸರಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡುತ್ತೇವೆ. ರಾಷ್ಟ್ರಪತಿ ಹುದ್ದೆಯ ಯಾವ ಲಿಂಗ ಎನ್ನುವ ಬಗ್ಗೆ ಚರ್ಚೆಗೆ ಯಾವುದೇ ಸಮರ್ಥನೆ ಎಂಬುವುದು ಇಲ್ಲ. ಭಾರತದ ಸಾಂವಿಧಾನಿಕ ಯೋಜನೆಯು ರಾಷ್ಟ್ರಪತಿ ಮತ್ತು ಸ್ಪೀಕರ್‌ನಂತಹ ಪದಗಳನ್ನು ಲಿಂಗ-ತಟಸ್ಥವೆಂದು ಪರಿಗಣಿಸುತ್ತದೆ.

ಈ ಚರ್ಚೆ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾಗಿದ್ದಾಗಲೇ ನಡೆದಿತ್ತು. 2007 ರ ರಾಷ್ಟ್ರಪತಿ ಚುನಾವಣೆಯಲ್ಲಿ ರಾಜಸ್ಥಾನದ ಮಾಜಿ ಗವರ್ನರ್ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರು. ಆವಾಗ ಅವರನ್ನು ಹೇಗೆ ಕರೆಯಬೇಕು ಎನ್ನುವ ಬಗ್ಗೆ ಚರ್ಚೆಗಳು ಆಗುತ್ತಿದದವು. ರಾಷ್ಟ್ರಪತಿ ಎಂಬುದು ಪುಲ್ಲಿಂಗವೆಂದು ಅನೇಕರು ಹೇಳಿದ್ದರು.

ರಾಷ್ಟ್ರಪತಿ ಪಾಟೀಲ್ ಅವರನ್ನು ರಾಷ್ಟ್ರಪತಿ ಮಹೋದಯ್ ಎಂದು ಕರೆಯಬಹುದು ಎಂದು ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಅವರು ಸೆಳೆದಿದ್ದರು. ಭಾರತದಲ್ಲಿ ಇಬ್ಬರು ಮಹಿಳೆಯರು ಲೋಕಸಭೆ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮೀರಾ ಕುಮಾರ್ ಮತ್ತು ಸುಮಿತ್ರಾ ಮಹಾಜನ್. ಇವರಿಬ್ಬರನ್ನು ಕೂಡ ಸ್ಪೀಕರ್ ಎಂದೇ ಕರೆಯಲಾಗುತ್ತದೆ.

ಈ ಸಂದರ್ಭದಲ್ಲಿ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರು ಪ್ರತಿಭಾ ಪಾಟೀಲ್ ಅವರ ಹೆಸರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ ಅವರನ್ನು ಹೇಗೆ ಕರೆಯಬೇಕು ಎನ್ನುವ ಬಗ್ಗೆ ಚರ್ಚೆಯಾಗ್ತಿದೆ. ನನ್ನ ಪ್ರಕಾರ ರಾಷ್ಟ್ರಪತ್ನಿ ಎಂದು ಕರೆಯುವ ಅವಶ್ಯಕತೆ ಇಲ್ಲ. ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಾಧ್ಯಕ್ಷ ಎಂದು ಕರೆಯಬೇಕು ಎಂದಿದ್ದರು. ಅನಂತರ ಈ ಚರ್ಚೆ ಅಲ್ಲಿಗೇ ಮುಕ್ತಾಯಗೊಂಡಿತ್ತು. ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಜುಲೈ 2012 ರಲ್ಲಿ ತಮ್ಮ ಅಧಿಕಾರ ಕೊನೆಗೊಳಿಸುವವರೆಗೂ ಅವರನ್ನು ರಾಷ್ಟ್ರಪತಿ ಎಂದು ಉಲ್ಲೇಖಿಸಲಾಯ್ತು.

ಇತ್ತೀಚೆಗೆ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಚೌಧರಿ ಅವರು ರಾಷ್ಟ್ರಪತಿ ದೌಪದಿ ಮುರ್ಮ ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು. ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ನಾನು ತಪ್ಪಾದ ಪದ ಬಳಕೆ ಮಾಡಿದ್ದು, ಆ ಪ್ರಮಾದಕ್ಕೆ ನಾನು ಖೇದ ವ್ಯಕ್ತಪಡಿಸುತ್ತೇನೆ. ಅದು ಬಾಯ್ತಪ್ಪಿನಿಂದ ಆಗಿದೆ. ನಾನು ಆ ಬಗ್ಗೆ ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದು, ನೀವು ನನ್ನನ್ನು ಮನ್ನಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಚೌಧರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾಗ ಮಾಧ್ಯಮವೊಂದರಲ್ಲಿ ಮಾತನಾಡಿದ ಲೋಕಸಭಾ ಸಂಸದ, ಕಾಂಗ್ರೆಸ್ ನಾಯಕ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದರು.

Leave A Reply

Your email address will not be published.