BIG NEWS | ನಾಳೆ ಲೋಕಸಭಾ ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‍ಡಿಎ ಎದುರು ಧೂಳಿಪಟ ಆಗಲಿರುವ ಕಾಂಗ್ರೆಸ್ಸ್ !

ನವದೆಹಲಿ: ದೇಶದಲ್ಲಿ ಈ ಕೂಡಲೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‍ಡಿಎ 362 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಲಿದೆ ಎಂಬ ಸಮೀಕ್ಷಾ ವರದಿಯೊಂದು ಶಾಸ್ತ್ರ ನುಡಿದಿದೆ. ಇವತ್ತಿಗೂ ಮೋದಿಯವರು ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇಂಡಿಯಾ ಟಿವಿ ನಡೆಸಿದ ‘ವಾಯ್, ಆಫ್ ದ ನೇಷನ್’ ಸಮೀಕ್ಷೆಯಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಈಗ ತಕ್ಷಣಕ್ಕೆ ಲೋಕಸಭಾ ಚುನಾವಣೆ ನಡೆದರೆ 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 362 ಸ್ಥಾನ ಗೆಲ್ಲುವ ಮೂಲಕ ವಿರೋಧ ಪಕ್ಷಗಳನ್ನು ಬಿಜೆಪಿ ನೇತೃತ್ವದ ನ್‌ಡಿಎ ಧೂಳಿಪಟ ಮಾಡಲಿದೆ. ಯುಪಿಎ ಮೈತ್ರಿಕೂಟ 97, ಪ್ರಾದೇಶಿಕ ಪಕ್ಷಗಳು, ಪಕ್ಷೇತರರು 84 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಕರ್ನಾಟಕದಲ್ಲಿ ಇರುವ 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 23, ಕಾಂಗ್ರೆಸ್ 4 ಹಾಗೂ ಜೆಡಿಎಸ್ 1 ಸ್ಥಾನ ಗೆಲ್ಲಲಿದೆ ಎಂದು ಕ ವರದಿ ಮೂಲಕ ಬಹಿರಂಗವಾಗಿದೆ.

ಯಾರಿಗೆ ಎಷ್ಟು ಸ್ಥಾನ ಸಿಗಬಹುದು:

ಎನ್‍ಡಿಎ ಮೈತ್ರಿಕೂಟ ಎನ್‍ಡಿಎ 362 ಸ್ಥಾನ ಶೇ.41, ಯುಪಿಎ 97 – ಶೇ.28, ಇತರರು 84 – ಶೇ.31 ಮತ ಪಡೆಯಲಿದ್ದಾರೆ. ಜು.11 ರಿಂದ 24 ರ ಅವಧಿಯಲ್ಲಿ ದೇಶದ 543 ಲೋಕಾಸಭಾ ಸ್ಥಾನಗಳ ಪೈಕಿ 113 ರಲ್ಲಿ 34,000 ಜನರನ್ನು ಸಂದರ್ಶಿಸಿ ಸಮೀಕ್ಷೆಯ ವರದಿ ತಯಾರಿಸಲಾಗಿದೆ.

ಕರ್ನಾಟಕದಲ್ಲಿ ಮುಂದಿನ ಬಾರಿ ಕೂಡ ಬಿಜೆಪಿಗೆ ಜೈ ಹೇಳಲಿದ್ದಾರೆ ಮತದಾರ. ಕರ್ನಾಟಕದಲ್ಲಿ ಬಿಜೆಪಿಯು 23 ಸೀಟ್ ಪಡೆಯುವ ನಿರೀಕ್ಷೆಯಿದ್ದು ಕಳೆದ ಸಲಕ್ಕಿಂತ ಎರಡು ಸ್ಥಾನಗಳನ್ನು ಕಳಕೊಳ್ಳುವ ಸಂಭವ ಇದೆ.

ಕರ್ನಾಟಕದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೆ 28 ಸ್ಥಾನಗಳ ಪೈಕಿ ಬಿಜೆಪಿ 23, ಕಾಂಗ್ರೆಸ್ 4 ಮತ್ತು ಜೆಡಿಎಸ್ 1 ಸ್ಥಾನ ಗೆಲ್ಲಲಿದೆ.
ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 11, ಪಕ್ಷೇತರ (ಸುಮಲತಾ ಅಂಬರೀಶ್) 1 ಸ್ಥಾನ ಗೆದ್ದುಕೊಂಡಿದ್ದರು.

ಇತರ ರಾಜ್ಯಗಳಲ್ಲಿ ಎಷ್ಟು?
ಉತ್ತರ ಪ್ರದೇಶ ಒಟ್ಟು 80 ಸ್ಥಾನ
ಎನ್‍ಡಿಎ 76, ಯುಪಿಎ 2, ಇತರರು 2

ಮಹಾರಾಷ್ಟ್ರದ ಒಟ್ಟು ಸ್ಥಾನ 48
ಎನ್‍ಡಿಎ 37, ವಿಪಕ್ಷಗಳು 11

ತಮಿಳುನಾಡು ಒಟ್ಟು ಸ್ಥಾನ 39
ಡಿಎಂಕೆ ಮೈತ್ರಿಕೂಟ 38, ಎನ್‍ಡಿಎ 1

ಪಶ್ಚಿಮ ಬಂಗಾಳ ಒಟ್ಟು ಸ್ಥಾನ 42,
ಟಿಎಂಸಿ 26, ಎನ್‍ಡಿಎ 14, ಯುಪಿಎ 2

ಬಿಹಾರ ಒಟ್ಟು ಸ್ಥಾನ 40
ಎನ್‍ಡಿಎ 35, ಯುಪಿಎ 5,

ಗುಜರಾತ್ ಒಟ್ಟು ಸ್ಥಾನ 26
ಎನ್‍ಡಿಎ 26, ಯುಪಿಎ 0.

Leave A Reply

Your email address will not be published.