ಪ್ರೀತಿಸಿ ಮದುವೆಯಾದಾಕೆ ಗಂಡನ ಮನೆಯಲ್ಲೇ ಶವವಾಗಿ ಪತ್ತೆ | ಸಾವಿನ ಸುತ್ತ ಅನುಮಾನದ ಹುತ್ತ!

ಪ್ರೀತಿಸಿ ಮದುವೆ ಆಗಿ ಆರು ತಿಂಗಳು ಕಳೆಯುವಷ್ಟರಲ್ಲೇ ಗಂಡನ ಮನೆಯಲ್ಲಿ ಯುವತಿ ಹೆಣವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ.

ಮೃತ ಯುವತಿ ಭಾಗ್ಯ (19) ಎಂದು ತಿಳಿದುಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈಕೆ ಕೋಯಿಕ್ಕೋಡ್​ನ ಎಲಥೂರ್​ ನಿವಾಸಿ ಅನಂತು ಎಂಬಾತನ ಜೊತೆ ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು. ಅಲ್ಲದೆ ಭಾಗ್ಯ ಗರ್ಭಿಣಿ ಕೂಡ ಆಗಿದ್ದಳು. ಆದರೆ, ಭಾಗ್ಯನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗಂಡನ ಮನೆಯಲ್ಲಿ ಪತ್ತೆಯಾಗಿದ್ದಾಳೆ.

ಭಾಗ್ಯ ಹಾಗೂ ಅನಂತು ಬಹಳ ಹಿಂದಿನಿಂದಲೂ ಪರಸ್ಪರ ಪ್ರೀತಿ ಮಾಡುತ್ತಿದ್ದು, ಎರಡು ವರ್ಷಗಳ ಹಿಂದೆ ಭಾಗ್ಯಳನ್ನು ಅಪಹರಿಸಿದ್ದ. ಆಕೆಯನ್ನು ಅಪ್ರಾಪ್ತ ವಯಸ್ಸಿನಲ್ಲಿ ಅಪಹರಿಸಿದ ಆರೋಪದಲ್ಲಿ ಆತನ ಮೇಲೆ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಭಾಗ್ಯಳಿಗೆ 18 ವರ್ಷ ತುಂಬಿದ ಮೇಲೆ ಪ್ರಕರಣವನ್ನು ಇತ್ಯರ್ಥ ಮಾಡಿ ಇಬ್ಬರಿಗೆ ಮದುವೆ ಮಾಡಲಾಗಿತ್ತು.

ಆದರೆ, ಈಗ ಅನುಮಾನಾಸ್ಪದ ರೀತಿಯಲ್ಲಿ ಭಾಗ್ಯ ಮೃತಪಟ್ಟಿದ್ದಾಳೆ. ಆಕೆಯ ತಾಯಿ ‘ಸಾವಿನ ಸುತ್ತು ನಿಗೂಢ ಅಡಗಿದೆ ಎಂದು ಹೇಳಿದ್ದು, ಅನಂತು ಭಾಗ್ಯಗೆ ಕಿರುಕುಳ ನೀಡುತ್ತಿದ್ದನು’ ಎಂದು ತಾಯಿ ಆರೋಪಿಸಿ ದೂರು ದಾಖಲಿಸಿದ್ದಾರೆ.

error: Content is protected !!
Scroll to Top
%d bloggers like this: