ಸಿನಿಮಾರಂಗಕ್ಕೆ ಮತ್ತೊಂದು ಶಾಕ್ | ಎಳೆಯ ವಯಸ್ಸಿಗೆ ಸಾವು ಕಂಡ ಪ್ರತಿಭಾವಂತ ನಟ | ಕಾರಣ ನಿಗೂಢ

ಕೊರೊನಾ ಕಾಲದಿಂದಲೇ ಮೇರು ನಟರನ್ನು ಪ್ರತಿಭಾನ್ವಿತ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ನಟಿಯರು, ಕಲಾವಿದೆಯರನ್ನು ಕಳೆದುಕೊಂಡಿರುವ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತ ಇದು ಎಂದೇ ಹೇಳಬಹುದು. ಕೇರಳದ ಜನಪ್ರಿಯ ಯುವನಟ ಶರತ್ ಚಂದ್ರನ್ ಸಾವನ್ನಪ್ಪಿದ್ದಾರೆ. ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ನಟ ಶರತ್ ಚಂದ್ರನ್
37ನೇ ವಯಸ್ಸಿಗೆ ಚಿರನಿದ್ರೆಗೆ ಜಾರಿದ್ದಾರೆ.

ನಿನ್ನೆ ರಾತ್ರಿ ಶರತ್ ಚಂದ್ರನ್ ನಿಗೂಢವಾಗಿ ಮೃತಪಟ್ಟಿದ್ದಾರೆ ಅಂತ ಕೇರಳ ಚಿತ್ರರಂಗದ ಮೂಲಗಳು ತಿಳಿಸಿವೆ. ಮಲಯಾಳಂ ಚಿತ್ರರಂಗದ ಖ್ಯಾತ ಯುವನಟ ಶರತ್ ಚಂದ್ರನ್ ಸಾವಿನ ಕಾರಣ ನಿಗೂಢವಾಗಿದೆ. ಶುಕ್ರವಾರ ರಾತ್ರಿ ಶರತ್ ಚಂದ್ರನ್ ಮೃತಪಟ್ಟಿದ್ದಾಗಿ ಮಲಯಾಳಂ ಚಿತ್ರರಂಗದ ಮೂಲಗಳು ತಿಳಿಸಿವೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಶರತ್ ಚಂದ್ರನ್ ಮಲಯಾಳಂನ ಕೆಲವೊಂದು ಸಿನಿಮಾದಲ್ಲಿ ನಟಿಸಿದರೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದರು. ಇದೀಗ 37ನೇ ವಯಸ್ಸಿನಲ್ಲೇ ಅಗಲಿ ಮಲಯಾಳಂ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಶರತ್ ಚಂದ್ರನ್ ಅವರು ತಂದೆ ಚಂದ್ರನ್, ತಾಯಿ ಲೀಲಾ ಮತ್ತು ಸಹೋದರ ಶ್ಯಾಮ್ ಅವರನ್ನು ಅಗಲಿದ್ದಾರೆ.

2017ರಲ್ಲಿ ತೆರೆಗೆ ಬಂದಿದ್ದ ‘ಒರು ಮೆಕ್ಸಿಕನ್ ಅಪರಾಥ’, 2017ರಲ್ಲಿ ರಿಲೀಸ್ ಆಗಿದ್ದ ‘ಸಿಐಎ: ಕಾಮೇಡ್ ಇನ್ ಅಮೆರಿಕಾ’, ಕೂಡೆ (2018), ಮತ್ತು ಹಾಗೂ 2021ರಲ್ಲಿ ರಿಲೀಸ್ ಆಗಿದ್ದ ಹಾಸ್ಯ ಚಿತ್ರ ಒರು ತಾತ್ವಿಕ ಅವಲೋಕನಂ ಮುಂತಾದ ಚಿತ್ರಗಳಲ್ಲಿ ಶರತ್ ಚಂದ್ರನ್ ಅಭಿನಯಿಸಿದ್ದರು.

error: Content is protected !!
Scroll to Top
%d bloggers like this: