ಪುರುಷರೇ ನೀವು ರಾತ್ರಿ ಹೊತ್ತು “ಬೆತ್ತಲಾಗಿ” ಮಲಗುತ್ತೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ !

ಎಷ್ಟೋ ವರ್ಷಗಳ ಹಿಂದೆ ಮೈಮೇಲೆ ಬಟ್ಟೆ ಇಲ್ಲದೆನೇ ಮನುಷ್ಯ ಓಡಾಡುತ್ತಿದ್ದ. ನಂತರ, ಬರುಬರುತ್ತಾ ನಾಗರಿಕನಾಗಿ, ಮೈ ಮೇಲೆ ಬಟ್ಟೆ ಹಾಕಿಕೊಂಡು ಜೀವನ ಮಾಡಲು ಕಲಿತ. ಆದರೆ ಇಲ್ಲೊಂದು ಸಂಶೋಧನೆಯ ಪ್ರಕಾರ ಮನುಷ್ಯ ತನ್ನ ಹಳೇ ಪದ್ಧತಿಗೆ ವಾಪಾಸು ಹೋಗೋ ಹಾಗೇ ಮಾಡುತ್ತದೆ ಎಂದೆನಿಸುತ್ತದೆ. ಏಕೆಂದರೆ ಸಂಶೋಧನೆಗಳು ಹೇಳುವ ಪ್ರಕಾರ, ಮನುಷ್ಯ ಅದರಲ್ಲೂ ಪುರುಷರು, ಮಲಗಬೇಕಿದ್ದರೆ, ಬೆತ್ತಲಾಗಿ ಮಲಗಬೇಕಂತೆ. ಗಂಡಸರು ಮಾತ್ರವಾ ?, ಅವಳೂ ಪಕ್ಕದಲ್ಲಿ….? ಎಂಬ ಪೋಲಿ ಪ್ರಶ್ನೆ ಕೇಳೊ ಮೊದ್ಲು ಈ ಪೋಸ್ಟ್ ಓದಿ !

ಒಂದು ಸಂಶೋಧನೆ ಹೇಳುವ ಪ್ರಕಾರ ಪುರುಷರು ರಾತ್ರಿ ಹೊತ್ತು ಮಲಗುವಾಗ ಬೆತ್ತಲೆ ಮಲಗಿ ಕೊಳ್ಳುವುದರಿಂದ ಕೆಲವೊಂದು ವಿಶೇಷವಾದ ಆರೋಗ್ಯ ಪ್ರಯೋಜನಗಳು ಆತನಿಗೆ ಸಿಗುತ್ತವೆ. ಇಲ್ಲಿ ಅವುಗಳು ಯಾವುದು ಎಂಬ ಲಿಸ್ಟ್ ಇದೆ.

ಬಟ್ಟೆ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡುತ್ತದೆ ನಿಜ. ಆದರೆ ಅತಿಯಾದ ತಾಪಮಾನದಿಂದ ನಮಗೆ ನಿದ್ರೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಬಟ್ಟೆ ಇಲ್ಲದೆ ಮಲಗುವುದರಿಂದ ದೇಹದ ತಾಪಮಾನ ಸಹಜವಾಗಿ ಕಡಿಮೆಯಾಗುತ್ತದೆ. ದೇಹಕ್ಕೆ ತಂಪಾದ ವಾತಾವರಣ ನಿರ್ಮಾಣವಾಗಿ ಒಳ್ಳೆಯ ನಿದ್ರೆ ಬರುತ್ತದೆ.

ಹೆಚ್ಚಾಗಿ ಪುರುಷರಿಗೆ ರಾತ್ರಿಯ ಹೊತ್ತು ಆಗಾಗ ನಿದ್ರೆಯಿಂದ ಪದೇ ಪದೇ ಎಚ್ಚರವಾಗುವುದು, ನಿದ್ದೆ ಬಾರದೇ ಇರುವ ಸಮಸ್ಯೆ ಕಾಡುತ್ತದೆ. ಸಂಶೋಧನೆಗಳ ಪ್ರಕಾರ ಹಾಕಿಕೊಳ್ಳುವ ಬಟ್ಟೆ ಕೂಡ ಇದಕ್ಕೆ ಒಂದು ಕಾರಣವಂತೆ. ಹೀಗಾಗಿ ಪುರುಷರು ಬೆತ್ತಲೆಯಾಗಿ ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.

ಮನುಷ್ಯನಿಗೆ ಸರಿಯಾಗಿ ನಿದ್ರೆ ಬರದಿದ್ದರೆ, ಮಾನಸಿಕವಾಗಿ ತುಂಬಾ ತೊಂದರೆಗೊಳಗಾಗುತ್ತಾನೆ. ಮಾನಸಿಕ ಒತ್ತಡಕ್ಕೆ ದಾರಿ ಮಾಡಿದ ಹಾಗೆ. ಇದನ್ನು ಹೀಗೇ ಬಿಟ್ಟರೆ ದೈಹಿಕ ಆರೋಗ್ಯಕ್ಕೆ ಹಾನಿ. ಹಾಗಾಗಿ ಬೆತ್ತಲೆ ಮಲಗಿದರೆ ಉತ್ತಮ.

ರಾತ್ರಿಯ ಹೊತ್ತು ನೆಮ್ಮದಿಯಾಗಿ ಮಲಗಿ ನಿದ್ರೆ ಮಾಡುವಾಗ, ನಮ್ಮ ಮೆದುಳು ಕೆಲಸ ಮಾಡುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಇದು ನಮ್ಮ ದೇಹದಿಂದ ಕೆಟ್ಟ ಅಂಶಗಳನ್ನು ಸಂಸ್ಕರಿಸಿ ಹೊರಹಾಕುತ್ತದೆ. ಇದೆಲ್ಲ ಸಾಧ್ಯವಾಗುವುದು ಸರಿಯಾದ ನಿದ್ದೆ ಮಾಡಿದಾಗ. ಸರಿಯಾದ ನಿದ್ರೆ ಇಲ್ಲದೆ ಹೋದರೆ ನಮ್ಮ ದೇಹದಲ್ಲಿ ವಿಷಕಾರಿ ತ್ಯಾಜ್ಯಗಳು ಹಾಗೇ ಉಳಿಯುತ್ತವೆ. ಇವುಗಳು ಕ್ರಮೇಣವಾಗಿ ನಮ್ಮ ದೇಹದ ಆರೋಗ್ಯವನ್ನು ಹಾಳುಮಾಡುತ್ತವೆ. ಹೀಗಾಗಿ ರಾತ್ರಿಯ ಸಮಯದಲ್ಲಿ ಉತ್ತಮ ನಿದ್ರೆ ಬಹಳ ಅವಶ್ಯಕ. ಹೀಗಾಗಿ ಬೆತ್ತಲಾಗಿ ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಮಾನಸಿಕ ಒತ್ತಡ ಮತ್ತು ಖಿನ್ನತೆ ದೂರವಾಗುತ್ತದೆ.

ಪುರುಷರ ಟೆಸ್ಟಿಕಲ್ ಭಾಗದಲ್ಲಿ ಉತ್ತಮ ತಾಪಮಾನ ಇದ್ದರೆ ಆರೋಗ್ಯಕ್ಕೆ ಉತ್ತಮ. ಇದು ಉತ್ತಮ ಮತ್ತು ಆರೋಗ್ಯಕರವಾದ ಅಂದರೆ ಫಲವತ್ತತೆಯ ವೀರ್ಯಾಣುಗಳನ್ನು ಉತ್ಪತ್ತಿ ಮಾಡಲು ಸಹಾಯವಾಗುತ್ತದೆ. ಬಿಗಿಯಾದ ಉಡುಪು ಹಾಕಿಕೊಂಡು ಮಲಗಿದರೆ ಟೆಸ್ಟಿಕಲ್ ಭಾಗದಲ್ಲಿ ತಾಪಮಾನ ಬಹಳ ಹೆಚ್ಚಾಗುವುದರಿಂದ ವೀರ್ಯಾಣುಗಳು ನಶಿಸಿ ಹೋಗುತ್ತವೆ ಮತ್ತು ಇದ್ದರೂ ಕೂಡ ಉತ್ತಮ ಗುಣಮಟ್ಟವನ್ನು ಹೊಂದಿರುವುದಿಲ್ಲ.
ಇದು ಪುರುಷತ್ವದ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ರಾತ್ರಿ ಹೊತ್ತು ಬೆತ್ತಲಾಗಿ ಮಲಗುವುದರಿಂದ, ಆರೋಗ್ಯಕರವಾದ ಮತ್ತು ಉತ್ತಮ ಗುಣಮಟ್ಟದ ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗುತ್ತದೆ.

ರಾತ್ರಿ ಹೊತ್ತು ಬೆತ್ತಲಾಗಿ ಮಲಗುವುದರಿಂದ ನಿಮ್ಮ ಯೌವನ ಹಾಗೆ ಉಳಿಯುತ್ತದೆ ಎಂದು ಒಂದು ವಿಶೇಷ ಸಂಶೋಧನೆಯ ಮೂಲ ಹೇಳುತ್ತದೆ. ಏಕೆಂದರೆ
ಚರ್ಮದ ಭಾಗದಲ್ಲಿ ತಾಪಮಾನ ಕಡಿಮೆಯಾದರೆ ಮೆಲಟೋನಿನ್ ಮತ್ತು ಹಾರ್ಮೋನ್ ಸಮತೋಲನವಾಗುತ್ತದೆ ಮತ್ತು ಇದರಿಂದ ಜೀವಕೋಶಗಳು ಅಭಿವೃದ್ಧಿಯಾಗುತ್ತವೆ. ಸತ್ತ ಜೀವಕೋಶಗಳು ನಾಶವಾಗುತ್ತವೆ. ಹಾಗಾಗಿ ಪುರುಷರು ಸದಾಕಾಲ ಯೌವನದಿಂದ ಇರಲು ಬೆತ್ತಲೆ ಮಲಗುವಿಕೆ ಸಹಾಯ ಮಾಡುತ್ತದೆ.

ಬೆತ್ತಲೆಯಾಗಿ ಮಲಗುವ ಮೂಲಕ, ವೇಗವಾಗಿ ನಿದ್ರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಹೊತ್ತು ಮಲಗಬಹುದು, ಇದು ಆರೋಗ್ಯದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಹಾಗಾಗಿ ಗಂಡಸರೇ, ಇನ್ಮುಂದೆ ಕಾಲುಚಾಚಿ ಬೆತ್ತಲಾಗಿ ಮಲಗಿ, ಮತ್ತು ಬೆತ್ತಲಾಗಿಯೇ ನಿದ್ರಿಸಿ ! ನಿಮ್ಮ ಮಾನದ ಸುರಕ್ಷತೆಗಾಗಿ ಕತ್ತಲು ಸುತ್ತಲೂ ಇರುವಂತೆ ನೋಡ್ಕೊಳ್ಳಿ!!!

Leave A Reply