BIG NEWS | ಫಿಲ್ಮ್ ಸೆಟ್‌ನಲ್ಲಿ ಭಾರೀ ಬೆಂಕಿ, ನಾಯಕ ನಟ ನಟಿಯರಿದ್ದಾಗ ನಡೆದ ಘಟನೆ

ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಫಿಲ್ಮ್ ಸ್ಟುಡಿಯೊದಲ್ಲಿ ಶುಕ್ರವಾರ ಭಾರಿಕವಿದಿವೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿನ ಮಹಾಲಕ್ಷ್ಮಿ ಎಸ್ಟೇಟ್ ಹಿಂಭಾಗದ ಚಿತ್ರಕೂಟ ಮೈದಾನದಲ್ಲಿ ಸ್ಥಾಪಿಸಲಾದ ಫಿಲ್ಮ್ ಸೆಟ್‌ನಲ್ಲಿ ಕಪ್ಪು ಹೊಗೆಯ ಕಾರ್ಮೋಡಗಳು ಕವಿದಿವೆ. ಭಾರೀ ದಟ್ಟ ಹೊಗೆ ಆವರಿಸಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಮೂಲಗಳ ಪ್ರಕಾರ, ಚಿತ್ರದ ಸೆಟ್ ಚಿತ್ರ ನಿರ್ದೇಶಕ ಲವ್ ರಂಜನ್ ಅವರದ್ದಾಗಿತ್ತು. ನಟ ಸನ್ನಿ ಡಿಯೋಲ್ ಅವರ ಪುತ್ರ ರಾಜ್‌ವೀರ್ ಪಕ್ಕದ ಸೆಟ್‌ನಲ್ಲಿದ್ದರು. ಮತ್ತು ಅವರನ್ನು ಭದ್ರತಾ ತಂಡವು ಸ್ಥಳಾಂತರಿಸಿತು.


Ad Widget

Ad Widget

Ad Widget

Ad Widget

Ad Widget

Ad Widget

ಅಗ್ನಿಶಾಮಕ ದಳಕ್ಕೆ ಸಂಜೆ 4:28 ಕ್ಕೆ ಬೆಂಕಿಯ ಕರೆ ಬಂದಿದ್ದು, 10 ಅಗ್ನಿಶಾಮಕ ವಾಹನಗಳನ್ನು ಈಗ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಇದು ಲೆವೆಲ್ 2 ಬೆಂಕಿ ಎಂದು ಗೊತ್ತಾಗಿದೆ. ಬೆಂಕಿಯು ಅಂಧೇರಿ ಪಶ್ಚಿಮ ಪ್ರದೇಶದಲ್ಲಿ, ಸಂಪರ್ಕ ರಸ್ತೆಯ ಸ್ಟಾರ್ ಬಜಾರ್ ಬಳಿ ವರದಿಯಾಗಿದೆ. ಮೊದಲು ಆ ಪ್ರದೇಶದ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಅದು ಪಕ್ಕಕ್ಕೆ ಹಬ್ಬಿದೆ. ಆದರೆ ನಂತರ ಅದು ಫಿಲ್ಮ್ ಸೆಟ್‌ನಲ್ಲಿ ಪಸರಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: