ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ವಾರದ ರಜೆ!

ಎಲ್ಲಾ ಶಾಲೆಗಳಿಗೆ ಭಾನುವಾರದ ರಜೆ ಇರುತ್ತದೆ. ಆದರೆ ಈ ಒಂದು ಶಾಲೆಯಲ್ಲಿ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಘೋಷಣೆ ಮಾಡಲಾಗಿದ್ದು, ಈಗ ಈ ಘೋಷಣೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಸರ್ಕಾರದಿಂದ ವರದಿ ಕೇಳಿದೆ.

ಈ ಘಟನೆ ನಡೆದಿರಿವುದು, ಬಿಹಾರದ ಮುಸ್ಲಿಂ ಬಾಹುಳ್ಯ ಜಿಲ್ಲೆಯ ಕಿಶನ್‌ಗಂಜ್‌ನಲ್ಲಿ ಒಟ್ಟು 37 ಸರ್ಕಾರಿ ಶಾಲೆಗಳಿವೆ. ಇಲ್ಲಿ ಈಗ ಶಾಲೆಯ ವಾರದ ರಜೆಯನ್ನು ಭಾನುವಾರದ ಬದಲು ಶುಕ್ರವಾರ ನೀಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೇ, ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ಭಾನುವಾರ ವಾರದ ರಜೆ ಸಾಮಾನ್ಯ. ಆದರೆ ಈ ಒಂದು ಶಾಲೆಗೆ ಮಾತ್ರ ಶುಕ್ರವಾರ ರಜೆ ನೀಡಲಾಗಿದೆ. ಹಾಗೂ ಈ ಸುದ್ದಿ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಇಲ್ಲಿ ಶುಕ್ರವಾರ ವಾರದ ರಜೆ ನೀಡಲು ಯಾರು ಅನುಮತಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆಯ ಬಳಿಯಲ್ಲಿಯೂ ಇಲ್ಲ. ಶೇ.60ರಷ್ಟು ಮುಸ್ಲಿಂ ವಿದ್ಯಾರ್ಥಿಗಳಿರುವ ಕಾರಣದಿಂದಾಗಿ ಈ ಶಾಲೆಗಳಿಗೆ ಶುಕ್ರವಾರ ರಜೆ ನೀಡಿದ್ದಾರೆ ಎನ್ನಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದು ಸುಲಭ ಮಾಡಲು ಶುಕ್ರವಾರ ರಜೆ ನೀಡಲಾಗಿದೆಯಂತೆ. ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯ ಈ ಶಾಲೆಗಳಲ್ಲಿ ಹಲವು ವರ್ಷಗಳಿಂದ ಇದೆಯಂತೆ. ಇದೀಗ ಈ ಸಂಪ್ರದಾಯವು ವ್ಯವಸ್ಥೆಯ ವಿರುದ್ಧ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತೊಂದೆಡೆ, ಮೊದಲಿನಿಂದಲೂ ಈ ಜಿಲ್ಲೆಯ ಶಾಲೆಗೆ ಶುಕ್ರವಾರದ ದಿನವೇ ರಜೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಮುಖ್ಯೋಪಾಧ್ಯಾಯರೊಬ್ಬರು ನೀಡಿದ್ದಾರೆ. ಇದಕ್ಕೆ ಸರಕಾರದ ಅನುಮತಿ ಇದೆಯೇ ಎಂಬ ಮಾತಿಗೆ ಅವರಲ್ಲಿ ಉತ್ತರ ಇಲ್ಲ.

ಅಂದ ಹಾಗೆ ಗಮನಿಸಬೇಕಾದ ವಿಷಯವೇನೆಂದರೆ ಪೋಥಿಯಾ ಬ್ಲಾಕ್ ಏಷ್ಯಾದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ಬ್ಲಾಕ್ ಆಗಿದೆ. ಭಾನುವಾರ ಶಾಲೆಗೆ ಹೋಗುವ ಶಿಕ್ಷಕರು ತಮ್ಮ ಕುಟುಂಬ ಮತ್ತು ಮಕ್ಕಳ ಜೊತೆ ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈಗ ವಾರದ ರಜೆಯನ್ನು ಆಚರಿಸುವ ಕುರಿತು ಉನ್ನತ ಮಕ್ಕಳ ಹಕ್ಕುಗಳ ಸಂಸ್ಥೆ NCPCR ಬುಧವಾರ ಬಿಹಾರ ಸರ್ಕಾರದಿಂದ ವಿವರಣೆಯನ್ನು ಕೇಳಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ 10 ದಿನಗಳಲ್ಲಿ ಬಿಹಾರ ಸರ್ಕಾರದಿಂದ ವರದಿ ಕೇಳಿದೆ.

error: Content is protected !!
Scroll to Top
%d bloggers like this: