ಬೆಂಗಳೂರು: ಸಿಲಿಕಾನ್ ಸಿಟಿ ದಿನ ಕಳೆದಂತೆ ದುಷ್ಕರ್ಮಿಗಳ ಸ್ಥಳ ಎಂದೇ ಮಾರ್ಪಡಾಗುತ್ತಿದೆ. ಯಾಕಂದ್ರೆ, ದಿನದಿಂದ ದಿನಕ್ಕೆ ಕೊಲೆ, ಹಲ್ಲೆಗಳ ಸಂಖ್ಯೆ ಏರುತ್ತಲೇ ಇದೆ. ಇದೀಗ ವ್ಯಕ್ತಿಯೊಬ್ಬ ಎಣ್ಣೆಗಾಗಿ ತನ್ನ ಸ್ನೇಹಿತನನ್ನೇ ಹೊಡೆದು ಸಾಯಿಸಿದ ಘಟನೆ ಸಿಟಿ ಮಾರ್ಕೆಟ್ ಹಿಂಬಾಗ ನಡೆದಿದೆ.
ಮೃತರು 30 ವರ್ಷದ ಪ್ರಶಾಂತ್ ಎಂದು ತಿಳಿದುಬಂದಿದೆ.
ತಡರಾತ್ರಿ ಎಣ್ಣೆ ವಿಚಾರಕ್ಕಾಗಿ ಕುಡಿತ ಅಮಲಿನಲ್ಲಿ ನಡೆದ ಜಗಳ ಸ್ನೇಹಿತನ ಮೇಲೆ ಕೈ ಮಾಡುವಂತೆ ಮಾಡಿದೆ. ಜಗಳ ಅತಿರೇಕಕ್ಕೆ ಹೋಗಿ ಎಣ್ಣೆಯ ಬಾಟಲಿನಿಂದ ಹೊಡೆದು ಸ್ನೇಹಿತನ್ನನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಪೊಲೀಸರ್ ಠಾಣೆಯಲ್ಲಿ ದೂರು ದಾಖಲಾಗಿದೆ.
You must log in to post a comment.