ಇಂದು ಆಷಾಢ ಅಮಾವಾಸ್ಯೆ ಎಲ್ಲೆಲ್ಲಿ ಹೇಗೆ ಆಚರಿಸಲಾಗುತ್ತದೆ

ಹಿಂದೂ ಧರ್ಮದಲ್ಲಿ ಆಷಾಢ ಅಮಾವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ಆಷಾಢ ಅಮವಾಸ್ಯೆಯನ್ನು ಒಂದೊಂದು ಕಡೆ ಒಂದೊಂದು ರೀತಿಯಯಲ್ಲಿ ಆಚರಿಸಲಾಗುವುದು. ಈ ದಿನ ಭೀಮನ ಅಮಾವಾಸ್ಯೆಯೆಂದೂ ಆಚರಿಸಲಾಗುವುದು. ಈ ದಿನ ವ್ರತ ಆಚರಿಸುವುದರಿಂದ ಕನ್ಯೆಯರಿಗೆ ಒಳ್ಳೆಯ ಸಂಬಂಧ ಕೂಡಿ ಬರುವುದು, ವಿವಾಹಿತ ಹೆಣ್ಣು ಮಕ್ಕಳ ಮುತ್ತೈದೆ ಭಾಗ್ಯ ಬಲವಾಗುವುದು.

ದಕ್ಷಿಣ ಕನ್ನಡ ಕಡೆ ಆಟಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಈ ದಿನ ಪಾಲೆ ಮರದ ತೊಗಟೆ ಕೆತ್ತಿ ತಂದು ಅದರಿಂದ ಕಷಾಯ ಮಾಡಿ ಸೇವಿಸುತ್ತಾರೆ. ಇ ಕಷಾಯ ಮಳೆಗಾಲದಲ್ಲಿ ಕಾಡುವ ರೋಗಗಳನ್ನು ತಡೆಗಟ್ಟಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ.

ಇನ್ನು ಪಿತೃದೋಷ ನಿವಾರಣೆಗೆ ಈ ದಿನ ತುಂಬಾ ಮುಖ್ಯವಾಗಿದೆ. ಈ ದಿನದಂದು ಕೆಲವರು ಪಿತೃತರ್ಪಣ ಮಾಡುತ್ತಾರೆ, ಈ ಮೂಲಕ ತಮ್ಮ ಹಿರಿಯರಿಗೆ ಮೋಕ್ಷ ನೀಡಿ ಪುಣ್ಯದ ಫಲ ಪಡೆಯುತ್ತಾರೆ.

ನಂಬಿಕೆಯ ಪ್ರಕಾರ, ಆಷಾಢ ಅಮವಾಸ್ಯೆಯಂದು ಕೃಷಿ ಉಪಕರಣಗಳನ್ನು ಪೂಜಿಸಲಾಗುತ್ತದೆ. ಮಳೆಗಾಲದ ಆರಂಭವಾಗಿರುವುದರಿಂದ ಈ ರೀತಿ ಮಾಡುವುದರಿಂದ ಹಣ್ಣುಗಳು ಮತ್ತು ಧಾನ್ಯಗಳ ಉತ್ಪಾದನೆ ಉತ್ತಮವಾಗಿರುತ್ತದೆ, ಇದರಿಂದ ಮನೆಯ ಸಂಪತ್ತು  ಹೆಚ್ಚಾಗುತ್ತದೆ.

Leave A Reply

Your email address will not be published.