ಒಂದನೇ ತರಗತಿ ದಾಖಲಾತಿಗೆ ಮಕ್ಕಳ ವಯೋಮಿತಿ ಹೆಚ್ಚಿಸಿದ ಸರ್ಕಾರ | ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಿದ್ದಾರೆ – ಕಾಂಗ್ರೆಸ್ ಆರೋಪ

ಬೆಂಗಳೂರು: 1ನೇ ತರಗತಿಗೆ ಸೇರುವ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಆದೇಶವನ್ನು ಕಾಂಗ್ರೆಸ್ ಆರೋಪಿಸಿದೆ.

ಈಗ ಶಿಕ್ಷಣ ಇಲಾಖೆ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಿದ್ದು, ಪೋಷಕರನ್ನು ಗೊಂದಲಕ್ಕೆ ದೂಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು 2012 ರ ಕಡ್ಡಾಯ ಶಿಕ್ಷಣ ನಿಯಮಗಳ ಅನ್ವಯ ಶಿಕ್ಷಣ ಇಲಾಖೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. 6 ವರ್ಷವಾಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುವುದು ಎಂದು ಸರ್ಕಾರ ಆದೇಶಿಸಿತ್ತು. ಆದರೆ, ರಾಜ್ಯದೆಲ್ಲೆಡೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಸ್ತುತ ಇರುವ ಕಾನೂನಿನಂತೆ 5 ವರ್ಷ 5 ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಶಿಕ್ಷಣ ಇಲಾಖೆ ಮೇ ತಿಂಗಳಿನಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷ ಘೋಷಿಸಿದ್ದು, ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯವಾಗಿದೆ.

ಈ ನಡುವೆ ಇಂತಹ ಆದೇಶವನ್ನು ಸರ್ಕಾರ ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ ಈ ಹೊಸ ನಿಯಮ ಈ ವರ್ಷವೇ ಅನ್ವಯವಾಗುವುದೋ, ಮುಂದಿನ ವರ್ಷ ಜಾರಿಯಾಗುತ್ತದಾ ಎಂಬ ಸ್ಪಷ್ಟನೆಯನ್ನೂ ನೀಡಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

https://www.kooapp.com/koo/inckarnataka/8798694e-f80e-4ddd-b3e2-d8708bec555c
Leave A Reply

Your email address will not be published.