‘ರಕ್ಷಾ ಬಂಧನ’ ಹಬ್ಬಕ್ಕೆ ಅಂಚೆ ಇಲಾಖೆಯಿಂದ ವಿಶೇಷ ಸೌಲಭ್ಯ!

ಅಣ್ಣ ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತ ಹಬ್ಬವೇ ರಕ್ಷಾಬಂಧನ. ಭಾರತೀಯ ಸಂಸ್ಕೃತಿಯಲ್ಲಿ ಕಂಡಬರುವ ವೈವಿಧ್ಯಮಯ ಆಚರಣೆಗಳಲ್ಲಿ ಈ ಹಬ್ಬವು ಕೂಡ ಒಂದು. ರಕ್ಷಾಬಂಧನ ಎಂದರೆ ಕೇಸರಿ ದಾರ ಕಟ್ಟಿ, ಉಡುಗೊರೆ ನೀಡುವುದಷ್ಟೆ ಅಲ್ಲ, ‘ಪ್ರೀತಿ, ಮಮತೆಯನ್ನು ತುಂಬಿ ನಾ ಬದುಕಿರುವ ತನಕ ನನ್ನ ಅಣ್ಣ ಖುಷಿಯಾಗಿರಬೇಕು, ಈ ರಕ್ಷೆ ಸದಾ ನನ್ನ ಅಣ್ಣನನ್ನು ರಕ್ಷಿಸಬೇಕು’ ಎಂಬ ಆಶಯದೊಂದಿಗೆ ತಂಗಿ ಪ್ರೀತಿಯಿಂದ ಕಟ್ಟುವ ರಕ್ಷೆ. ಅಷ್ಟೇ ಅಲ್ಲದೆ, ತಂಗಿಯ ರಕ್ಷಣೆಗೆ ನಾನಿದ್ದೇನೆ ಎಂಬ ಭರವಸೆಯನ್ನು ನೀಡುವ ದಿನ.

ಇಂತಹ ಪವಿತ್ರವಾದ ಹಬ್ಬ ಆಗಸ್ಟ್ 11 ರಂದು ಇದ್ದು, ದೂರದಲ್ಲಿರುವ ಅಣ್ಣನಿಗೆ ರಾಖಿ ಕಳುಹಿಸುವ ಚಿಂತೆಯಲ್ಲಿರುವವರಿಗೆ ಅಂಚೆ ಇಲಾಖೆ ಸಿಹಿಸುದ್ದಿ ನೀಡಿದೆ. ಹೌದು. ಈ ವರ್ಷ ರಕ್ಷಾಬಂಧನದ ಅಂಗವಾಗಿ ಅಂಚೆ ಇಲಾಖೆಯಿಂದ ‘ರಾಖಿ ಪೋಸ್ಟ್’ ವಿಶೇಷ ಸೌಲಭ್ಯ ಪರಿಚಯಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸಹೋದರಿಯರು ಆನ್ಲೈನ್ ನಲ್ಲಿ ರಾಖಿ ಬುಕ್ ಮಾಡಿ ರಾಖಿಯೊಂದಿಗೆ ಶುಭಾಶಯಗಳನ್ನು ಕಳುಹಿಸುವ ಅವಕಾಶವನ್ನು ಕರ್ನಾಟಕ ಅಂಚೆ ವಿಭಾಗ ಕಲ್ಪಿಸಿದೆ. ಅಂಚೆ ಇಲಾಖೆಯ ವೆಬ್ ಸೈಟ್ ನಲ್ಲಿ ವಿವಿಧ ವಿನ್ಯಾಸದ ರಾಖಿಗಳು ಲಭ್ಯವಿದ್ದು, ತಮಗೆ ಬೇಕಾದ ರಾಖಿಯನ್ನು ಕ್ಲಿಕ್ ಮಾಡಿ ಅದಕ್ಕೆ ಸರಿಹೊಂದುವ ಗ್ರೀಟಿಂಗ್ ಕಾರ್ಡ್ ಗಳನ್ನು ಆನ್ಲೈನ್ ನಲ್ಲಿ ಆಯ್ಕೆ ಮಾಡಬಹುದಾಗಿದೆ.

ಇದಕ್ಕಾಗಿ 120 ರೂ. ದರ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಸೈನಿಕರಿಗೆ ರಾಖಿ ಕಳುಹಿಸುವವರು ಸೈನಿಕರಿಗೆ ಸಂದೇಶ ಕ್ಲಿಕ್ ಮಾಡುವ ಮೂಲಕ ಸೈನಿಕರಿಗೆ ರಾಖಿ ಕಳುಹಿಸಬಹುದು. ಆಸಕ್ತರು https://www.Karnataka post.gov.in/rakhipost ವೆಬ್ಸೈಟ್ ಗಮನಿಸಬಹುದಾಗಿದೆ. ಒಟ್ಟಾರೆ ಅಣ್ಣಾ-ತಂಗಿಯರ ಬಾಂಧವ್ಯವನ್ನು ಸಾರುವ ಈ ಹಬ್ಬ ಅಂಚೆಯ ಹೊಸ ಸೌಲಭ್ಯದಿಂದ ಬೆಳಕು ಕಾಣಲಿ..

error: Content is protected !!
Scroll to Top
%d bloggers like this: