ಪ್ರವೀಣ್ ನೆಟ್ಟಾರು ಶವಯಾತ್ರೆ : ಸಾವಿರಾರು ಕಾರ್ಯಕರ್ತರಿಂದ ಅಂತಿಮ ದರ್ಶನ

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಖಂಡಿಸಿ ಪುತ್ತೂರಿನಾದ್ಯಂತ ಉದ್ವಿಗ್ನ ಸ್ಥಿತಿ ಉಂಟಾಗಿದೆ. ದುಷ್ಕರ್ಮಿಗಳು ಪ್ರವೀಣ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಿನ್ನೆಲೆ ಇದೀಗ ಬೆಳ್ಳಾರೆಯಿಂದ ನೆಟ್ಟಾರ್‌ವರೆಗೆ ಮೆರವಣೆಗೆ ಮೂಲಕ ಪಾರ್ಥಿವ ಶರೀರವನ್ನು ಸಾಗಿಸಲಾಗುತ್ತಿದೆ. ಬೆಳ್ಳಾರೆ ಪ್ರಮುಖ ಮಾರ್ಗದಲ್ಲಿ ಅಂತಿಮ ಯಾತ್ರೆ ನಡೆಸಲಾಗುತ್ತಿದೆ. ಪುತ್ತೂರಿನಿಂದ ಬೆಳಗ್ಗೆ ಶವಯಾತ್ರೆ ಆರಂಭವಾಗಿದ್ದು ಪುತ್ತೂರಿನಲ್ಲಿ ಬೃಹತ್ ಯಾತ್ರೆ ನಡೆದಿದೆ. ಸಾವಿರಾರು ಜನರು ಈ ಯುವ ನಾಯಕನ ಶವಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಬೆಳ್ಳಾರೆ ಪ್ರಮುಖ ಪೇಟೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಪೆಂಡಲ್ ಹಾಕಿ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಾರೆಯ ಪ್ರಮುಖ ಮಾರ್ಗಗಳ ಮೂಲಕ ಸಾಗಿ ಮೃತ ದೇಹ ಸಾಗಲಿದೆ. ರಸ್ತೆಯುದ್ದಕ್ಕೂ ಜನಸಾಗರವೇ ಸೇರಿಕೊಂಡಿದೆ. ಕಡಬ ಪುತ್ತೂರು ಸುಳ್ಯದಲ್ಲಿ ಈಗಾಗಲೇ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ.

ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಸುಳ್ಯ, ಪುತ್ತೂರು, ಕಡಬದಲ್ಲಿ ಸ್ವಯಂಪ್ರೇರಿತ ಬಂದ್ ನಡೆದಿದೆ. ಸುಳ್ಯದಲ್ಲಿ ಘಟನೆ ಖಂಡಿಸಿ ನಡೆದ ಪ್ರತಿಭಟನೆ ಹಾಗೂ ಟಯರ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ವೇಳೆ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

Leave A Reply

Your email address will not be published.