UPSC recruitment | ಅರ್ಜಿ ಸಲ್ಲಿಸಲು ಕೊನೆ ದಿನಾಂಕ 11 ಆಗಸ್ಟ್

ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗಾಗಿ, ಕೇಂದ್ರ ಲೋಕ ಸೇವಾ ಆಯೋಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ತಾಂತ್ರಿಕ ಸಲಹೆಗಾರ ಹಾಗೂ ರೀಡರ್​ ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 11 ಆಗಿದೆ.

ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
ಹುದ್ದೆಗಳ ಸಂಖ್ಯೆ: 16
ಉದ್ಯೋಗ ಸ್ಥಳ: ನವದೆಹಲಿ – ನಾಗ್ಪುರ – ಚಂಡೀಗಢ – ಅಖಿಲ ಭಾರತ
ಹುದ್ದೆಯ ಹೆಸರು: ತಾಂತ್ರಿಕ ಸಲಹೆಗಾರ, ರೀಡರ್
ಸಂಬಳ: UPSC ನಿಯಮಗಳ ಪ್ರಕಾರ

ಹುದ್ದೆ, ಹದ್ದೆ ಸಂಖ್ಯೆ , ವಿದ್ಯಾರ್ಹತೆ, ವಯೋಮಿತಿ:
ತಾಂತ್ರಿಕ ಸಲಹೆಗಾರ, 1, ಮೆಕ್ಯಾನಿಕಲ್​ ಇಂಜಿನಿಯರಿಂಗ್​​ನಲ್ಲಿ ಪದವಿ, 50 ವರ್ಷ
ಸಹಾಯಕ ನಿರ್ದೇಶಕ, 11, ಪದವಿ,35 ವರ್ಷ
ಸಹಾಯಕ ಮಳಿಗೆ ಅಧಿಕಾರಿ, 1 ಅರ್ಥಶಾಸ್ತ್ರ/ವಾಣಿಜ್ಯ/ಸಂಖ್ಯಾಶಾಸ್ತ್ರ/ವ್ಯಾಪಾರ ಅಧ್ಯಯನ/ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ 30 ವರ್ಷ
ರೀಡರ್​,1,ಜವಳಿ ಸಂಸ್ಕರಣೆ/ಜವಳಿ ರಸಾಯನಶಾಸ್ತ್ರ/ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ, 40 ವರ್ಷ
ಹಿರಿಯ ಉಪನ್ಯಾಸಕರು,(ಮೂಳೆರೋಗ) 1 ಆರ್ಥೋಪೆಡಿಕ್ಸ್‌ನಲ್ಲಿ ಎಂ.ಎಸ್ 50 ವರ್ಷ
ಹಿರಿಯ ಉಪನ್ಯಾಸಕರು (ರೇಡಿಯೋ ಡಯಾಗ್ನೋಸಿಸ್) 11 ರೇಡಿಯೊಡಯಾಗ್ನೋಸಿಸ್, ರೇಡಿಯಾಲಜಿಯಲ್ಲಿ ಎಂ.ಡಿ, ರೇಡಿಯಾಲಜಿಯಲ್ಲಿ ಎಂ.ಎಸ್, 50 ವರ್ಷ
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್: 1 ಅಭ್ಯರ್ಥಿಗಳು ಇಂಡೆಂಟಿಂಗ್, ಟೆಕ್ನಿಕಲ್ ಸ್ಟೋರ್ಸ್ ಮತ್ತು ಸ್ಟೋರ್ಸ್ ಅಕೌಂಟ್ ಅಥವಾ ಮೆಟೀರಿಯಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ 1-2 ವರ್ಷಗಳ ಅನುಭವವನ್ನು ಹೊಂದಿರಬೇಕು .

ವಯೋಮಿತಿ ಸಡಿಲಿಕೆ:
ಕೇಂದ್ರ ಲೋಕಸೇವಾ ಆಯೋಗದ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ:
ಪ. ಜಾ, ಪ. ಪಂ, ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ/ಒಬಿಸಿ, ಪುರುಷ ಅಭ್ಯರ್ಥಿಗಳು: 25 ರೂ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಜುಲೈ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಆಗಸ್ಟ್ 2022
ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 12 ಆಗಸ್ಟ್ 2022

ಅರ್ಜಿ ಸಲ್ಲಿಕೆ ವಿಧಾನ:

*ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.
*ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
*ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ.

ಅಧಿಕೃತ ವೆಬ್‌ಸೈಟ್: upsc.gov.in

Leave A Reply

Your email address will not be published.