ನನ್ನ ಮೂಲ ಹೆಸರು “ದ್ರೌಪದಿ” ಅಲ್ಲ | ನೂತನ ರಾಷ್ಟ್ರಪತಿಯ ಮೊದಲ “ಹೆಸರೇನು”?

ಭಾರತದ ನೂತನ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುರ್ಮು ಅವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಡೆದಿರುವ ಜೊತೆಗೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲ ಮಹಿಳೆ ಅನ್ನೋ ಕೀರ್ತಿ ಅವರಿಗಿದೆ.

ಆದರೆ ನೂತನ ರಾಷ್ಟ್ರಪತಿಯ ಮೊದಲ ಹೆಸರು ಇದಲ್ಲವಂತೆ. ಅಂದರೆ ಪೋಷಕರು ಇಟ್ಟ ಹೆಸರು ದ್ರೌಪದಿ ಎಂಬುದು ಅವರ ಮೂಲ ಹೆಸರಲ್ಲ. ಶಾಲಾ ದಾಖಲಾತಿ ಸಂದರ್ಭದಲ್ಲಿ ಟೀಚರ್ ಇಟ್ಟ ಹೆಸರು ದ್ರೌಪದಿ. ಹಾಗಾದರೆ ಪೋಷಕರು ಇಟ್ಟ ಹೆಸರೇನು? ಈ ಕುರಿತು ದ್ರೌಪದಿ ಮರ್ಮು ಅವರು ಒಡಿಯಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ನೂತನ ರಾಷ್ಟ್ರಪತಿಯ ಮೂಲ ಹೆಸರು ಪುತಿ. ಆದರೆ ಶಾಲಾ ದಾಖಲಾತಿ ವೇಳೆ ಟೀಚರ್, ಮಹಾಭಾರತದಿಂದ ದ್ರೌಪದಿ ಎಂಬ ಹೆಸರು ಆಯ್ಕೆ ಮಾಡಿಕೊಂಡು ಇಟ್ಟಿದ್ದಾರೆ.

ಸಂತಲಿ ಆದಿವಾಸಿ ಸಮುದಾಯದಲ್ಲಿ ಹೆಸರು ಒಬ್ಬರಿಂದ ಒಬ್ಬರಿಗೆ ಇಡಲಾಗುತ್ತರೆ. ಅಂದರೆ ಇಲ್ಲಿ ಮಗಳು ಹುಟ್ಟಿದರೆ ಅಜ್ಜಿಯ ಹೆಸರಿಡುತ್ತಾರೆ. ಮಗ ಹುಟ್ಟಿದರೆ ಅಜ್ಜನ ಹೆಸರಿಡುತ್ತಾರೆ. ಹೀಗಾಗಿ ಒಂದು ಕುಟುಂಬದಲ್ಲಿ ಹೆಸರು ಯಾವತ್ತು ಇದ್ದೇ ಇರುತ್ತದೆ. ಹೀಗೆ ದ್ರೌಪದಿ ಮುರ್ಮುಗೆ ತಮ್ಮ ಅಜ್ಜಿಯ ಹೆಸರನ್ನು ಇಡಲಾಗಿತ್ತು. ಶಾಲಾ ದಾಖಲಾತಿ ವರೆಗೆ ಪುತಿ(Puti) ಅನ್ನೋ ಹೆಸರೇ ಇತ್ತು. ಆದರೆ ಶಾಲಾ ದಾಖಲಾತಿ ವೇಳೆ ಪುತಿ ಅನ್ನೋ ಹೆಸರಿನ ಬದಲು ದ್ರೌಪದಿ ಎಂದು ಟೀಚರ್ ಬರೆದಿದ್ದಾರೆ. ಆದರೆ ದ್ರೌಪದಿ ಹೆಸರನ್ನು ಆದಿವಾಸಿ ಸಮುದಾಯ ಉಚ್ಚಾರ ಮಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ಕುಟುಂಬಸ್ಥರು, ಸ್ಥಳೀಯರೆಲ್ಲಾ ಪುತಿ ಎಂದೇ ಕರೆಯುತ್ತಿದ್ದರು. ಕ್ರಮೇಣ ದ್ರೌಪದಿ ಹೆಸರಿಗೆ ಒಗ್ಗಿಕೊಂಡರು ಎಂದು ಮುರ್ಮು ಹೇಳಿದ್ದಾರೆ.

ಟೀಚರ್‌ಗೆ ನನ್ನ ಪುತಿ ಹೆಸರು ಹಿಡಿಸದ ಕಾರಣ ಬದಲಾಯಿಸಿದ್ದಾರೆ. ತುಡು ಸಮುದಾಯದ ಹೆಸರನ್ನೂ ಇಡಲಾಗಿತ್ತು. ಹೀಗಾಗಿ ದ್ರೌಪದಿ ತುಡು ಎಂದೇ ಶಾಲೆಯಲ್ಲಿ ದಾಖಲಾಗಿ ಮಾಡಲಾಗಿತ್ತು. ನಂತರ ಬ್ಯಾಂಕ್ ಉದ್ಯೋಗಿ ಶ್ಯಾಮ್ ಚರಣ್ ಅವರನ್ನು ಮದುವೆಯಾದ ಬಳಿಕ ಸರ್‌ನೇಮ್‌ನ್ನು ಮುರ್ಮು ಎಂದು ಬದಲಾಯಿಸಿದ್ದಾರೆ. ದ್ರೌಪದಿ ಅವರಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಕ್ಕಳು. ಅವರು ತಮ್ಮ ಪತಿ ಮತ್ತು ಇಬ್ಬರು ಗಂಡುಮಕ್ಕಳನ್ನು ಕಳೆದುಕೊಂಡಿದ್ದಾರೆ.

Leave A Reply

Your email address will not be published.