ಕಾಡಿನಲ್ಲಿ ರೈತನೋರ್ವನಿಗೆ ದೊರೆಯಿತು “ಮೊಟ್ಟೆ” | ಆದರೆ ವಾಸ್ತವ ಅರಿತಾಗ ದಂಗಾದ ಗ್ರಾಮಸ್ಥರು

ಮೊಟ್ಟೆ ಅಂದರೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಹಾಗೇ ಕೋಳಿ ಮೊಟ್ಟೆ ಎಂದೇ ಅರ್ಥ. ಆದರೆ ಇಲ್ಲೊಂದು ಕಡೆ ಒಂದು ಮೊಟ್ಟೆಯಾಕಾರದ ಒಂದು ವಸ್ತು ರೈತನಿಗೆ ದೊರೆತಿದೆ. ಇದೊಂದು ರೀತಿಯಲ್ಲಿ ವಿಸ್ಮಯಕಾರಿ ಮೊಟ್ಟೆ ಎಂದೇ ಹೇಳಬಹುದು. ಬನ್ನಿ ಏನದು ತಿಳಿಯೋಣ.

ಈ ಘಟನೆ ನಡೆದಿರುವುದು ಹಿಮಾಚಲ ಪ್ರದೇಶದಲ್ಲಿ. ಇಲ್ಲಿನ ರೈತನೊಬ್ಬನಿಗೆ ಭಾರಿ ವಿಶೇಷವಾದ ಮತ್ತು ವಿಸ್ಮಯಕಾರಿ ಮೊಟ್ಟೆಯೊಂದು ಸಿಕ್ಕಿದೆ. ಆತನಿಗೆ ತನ್ನ ಜಮೀನಿನಲ್ಲಿ ಸಿಕ್ಕ ಒಂದು ಮೊಟ್ಟೆಯ ಅದರ ವಾಸ್ತವ ತಿಳಿದು ದಂಗಾಗಿದ್ದಾನೆ.

ಹೌದು, ಮಂಡಿ ಜಿಲ್ಲೆಯ ಗೋಹರ್ ಉಪವಿಭಾಗದಲ್ಲಿರುವ ಸಾಲೋಯ್ ಗ್ರಾಮದ ನಿವಾಸಿ ಮಹೇಂದ್ರ ಕುಮಾರ್ ಅವರು ಕಾಡಿನಲ್ಲಿ ಹುಲ್ಲು ಕತ್ತರಿಸುವಾಗ ಮರದ ಮೇಲೆ ಕಲ್ಲಿನಂತೆ ಗಟ್ಟಿಯಾದ ಮೊಟ್ಟೆಯೊಂದು ಸಿಕ್ಕಿದೆ.

ಮೊದಮೊದಲು ಇದು ಸಾಮಾನ್ಯ ಹಕ್ಕಿಯ ಮೊಟ್ಟೆ ಎಂದು ಭಾವಿಸಿದ ಮಹೇಂದ್ರ, ಮರದಿಂದ ಮೊಟ್ಟೆಯನ್ನು ಕೆಳಕ್ಕೆ ಇಳಿಸಿದ್ದಾನೆ. ಈ ವೇಳೆ ಅದರ ಮೇಲೆ ಒಂದೇ ಒಂದು ಗೀರು ಇರಲಿಲ್ಲ. ಅದನ್ನು ಪರೀಕ್ಷಿಸಲು ಕಲ್ಲಿನ ಮೇಲೆ ಬಲವಾಗಿ ಹೊಡೆದಿದ್ದಾನೆ ಕೂಡಾ. ಆಗಲೂ ಅದು ಒಡೆಯಲಿಲ್ಲ. ಇದನ್ನು ನೋಡಿದ ಮಹೇಂದ್ರಕುಮಾರ್ ಆಶ್ಚರ್ಯಗೊಂಡಿದ್ದಾನೆ. ಈ ಮೊಟ್ಟೆಯ ಬಗ್ಗೆ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಹೇಳಿದ್ದಾನೆ. ಈ ಮೊಟ್ಟೆಯು ಥೇಟ್ ಕೋಳಿಯ ಮೊಟ್ಟೆಯ ಥರಾನೇ ಇತ್ತು. ‌ನಂತರ ಮಹೇಂದ್ರ ಕುಮಾರ್ ಅವರು ಮೊಟ್ಟೆಯ ಬಗ್ಗೆ ಗೋಹರ್‌ನಲ್ಲಿರುವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿ ನಂತರ ಮೊಟ್ಟೆಯೊಂದಿಗೆ ಪಶುವೈದ್ಯಕೀಯ ಆಸ್ಪತ್ರೆಗೆ ತಲುಪಿಸಿದ್ದಾನೆ.
ಈ ಮೊಟ್ಟೆಯು ದೊಡ್ಡ ಹಕ್ಕಿಯದ್ದಾಗಿರಬಹುದು ಎಂದು ಆರಂಭದಲ್ಲಿ ನಂಬಲಾಗಿತ್ತು.

ಇದನ್ನು ಪರೀಕ್ಷೆ ಮಾಡಿದ ನಂತರ ಎಲ್ಲರಿಗೂ ಅಚ್ಚರಿ ಮೂಡಿಸಿತು. ಪಶು ಆಸ್ಪತ್ರೆಗೆ ತಲುಪಿದ ಈ ಮೊಟ್ಟೆ ಮೊಟ್ಟೆಯಲ್ಲ ಸಾಲಿಗ್ರಾಮ ಎಂದು ಹೇಳಿದ್ದಾರೆ. ಈ ಯಾರೋ ಸಾಲಿಗ್ರಾಮವನ್ನು ತಮ್ಮ ಮನೆಯ ತುಳಸಿ ಗಿಡದ ಬಳಿ ಇಡಲಾಗಿತ್ತು. ಯಾವುದೋ ಹಕ್ಕಿ ಅದನ್ನು ಅಲ್ಲಿಂದ ಎತ್ತಿಕೊಂಡು ಬಂದು ಮರದ ಮೇಲೆ ಬಿಟ್ಟಿದೆ ಎಂದು ಹೇಳಿದ್ದಾರೆ. ಈ ನಿಗೂಢ ಮೊಟ್ಟೆಯ ನೈಜತೆ ತಿಳಿದು ಎಲ್ಲರೂ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

Leave A Reply

Your email address will not be published.