‘ ಕಪ್ಪುಏಲಿಯನ್‌ ‘ ಆಗಲು ಹೊರಟ ಸುಂದರ ಯುವಕ ತನ್ನ ದೇಹಕ್ಕೆ ಸಿಕ್ಕಲೆಲ್ಲ ಕತ್ತರಿ ಹಾಕ್ದ, ಈಗ ಆತ ಹೇಗಿದ್ದಾನೆ ಎಂದು ನೀವು ನೋಡಿದ್ರೆ ಭಯಪಡ್ತೀರಾ !

ಪ್ರತಿಯೊಬ್ಬ ಮನುಷ್ಯನಿಗೂ ಚಿತ್ರ-ವಿಚಿತ್ರವಾದ ಕನಸುಗಳು ಇದ್ದೇ ಇರುತ್ತದೆ. ಆದರೆ ಕೆಲವೊಬ್ಬರ ಕನಸುಗಳು ಸಾಮಾನ್ಯವಾದರೆ, ಇನ್ನೂ ಕೆಲವರಿದ್ದು ಊಹಿಸಲು ಅಸಾಧ್ಯ ಎಂಬ ರೀತಿ ಇರುತ್ತದೆ. ಅದೇರೀತಿ ಇಲ್ಲೊಬ್ಬನ ಆಸೆ ಕಂಡರೆ, ಒಮ್ಮೆಗೆ ಬೆಚ್ಚಿ ಬೀಳುವುದರಲ್ಲಿ ಡೌಟೇ ಇಲ್ಲ ಬಿಡಿ. ಆದರೆ, ಈತನ ಈ ಹುಚ್ಚು ಕನಸಿಗೆ ಕಾರಣವೇನೋ ಗೊತ್ತಿಲ್ಲ.

ಹೌದು. ಫ್ರಾನ್ಸ್‌ ನ ಆಂಥೋನಿ ಲೋಫ್ರೆಡೊ ಎಂಬಾತನಿಗೆ ಒಂದು ವಿಚಿತ್ರ ಕನಸು. ಅದುವೇ, ಯಾರೂ ಈತನಕ ಕಾಣದೇ ಇರುವ ಕಾಲ್ಪನಿಕವಾಗಿರುವ ಏಲಿಯನ್ ನಂತೆ ಕಾಣಲ್ಪಡುವ ಬಯಕೆ. ತಾನು ಕಪ್ಪು ಏಲಿಯನ್‌ ನಂತೆ ಕಾಣಿಸಬೇಕು ಎಂಬುದು ಆತನ ಹೆಬ್ಬಯಕೆ. ಆದರೆ, ಈಗ ಈತನ ಈ ಆಸೆಯೇ ಆತನಿಗೆ ಮುಳುವಾಗಿದೆ. 34 ವರ್ಷದ ಆಂಥೋನಿ ಸುಂದರವಾದ ಹುಡುಗನಾಗಿದ್ದ, ಈಗ ಆತನ ಸ್ಥಿತಿಯನ್ನು ನೀವೇ ನೋಡಿ.

ಅಷ್ಟಕ್ಕೂ ಈತ ಕನಸು ಹೊತ್ತುಕೊಂಡು ತನ್ನನ್ನೇ ಬದಲಾಯಿಸಿದ ಪರಿ ಹೇಗೆಂದು ನೀವೇ ನೋಡಿ. ತನ್ನನ್ನು ತಾನು ʼಕಪ್ಪು ಏಲಿಯನ್ʼ ಎಂದು ಕರೆದುಕೊಳ್ಳುತ್ತಾನೆ. ತನ್ನ ದೇಹದ ತುಂಬೆಲ್ಲಾ ಟ್ಯಾಟೂ ಹಾಕಿಸಿಕೊಂಡು ಸಂಪೂರ್ಣವಾಗಿ ಏಲಿಯನ್‌ನಂತೆ ಬದಲಾಗಿದ್ದಾನೆ. ಏಲಿಯನ್‌ ಪಂಜಾದಂತೆ ಕಾಣಲು ಆತ ತನ್ನ ಎಡಗೈನ ಮೂರು ಬೆರಳುಗಳನ್ನು ಕಚಕ್ ಎಂದು ಕತ್ತರಿಸಿಕೊಂಡಿದ್ದಾನೆ. ಮೂಗಿನ ಭಾಗಗಳು ಮತ್ತು ಎರಡೂ ಕಿವಿಗಳನ್ನು ಕತ್ತರಿಸಿದ್ದಾನೆ. ನಾಲಿಗೆಯನ್ನು ಸೀಳಿಕೊಂಡು, ಕಣ್ಣುಗುಡ್ಡೆಯೊಳಗೆ ಕಪ್ಪು ಬಣ್ಣ ತುಂಬಿಕೊಂಡಿದ್ದಾನೆ. ತುಟಿಯನ್ನು ಕೂಡ ಸೀಳ್ದುಟಿಯಂತೆ ಮಾಡಿಕೊಂಡಿದ್ದಾನೆ.

ಆತನ ಈ ವಿಶಿಷ್ಟತೆಗಾಗಿಯೇ ಸೋಷಿಯಲ್‌ ಮೀಡಿಯಾದಲ್ಲಿ ಅಂಥೋಣಿಗೆ ಇದೇ ರೂಪ ದೊಡ್ಡ ಮಟ್ಟದಲ್ಲಿ ಫಾಲೋವರ್ಸ್‌ ಗಳನ್ನು ತಂದುಕೊಟ್ಟಿದೆ. ಆತ ವಿಚಿತ್ರ ಹಾವಭಾವಗಳ ವಿಡಿಯೋಗಳನ್ನು ಮೆಚ್ಚುವ ಲಕ್ಷಾಂತರ ಜನರಿದ್ದಾರೆ. ಇನ್‌‌ಸ್ಟಾಗ್ರಾಂ ನಲ್ಲಿ ಆತನಿಗೆ ಬರೋಬ್ಬರಿ 1.2 ಮಿಲಿಯನ್ ಅನುಯಾಯಿಗಳಿದ್ದಾರೆ. ಆದರೆ, ಇಷ್ಟೆಲ್ಲಾ ಅಭಿಮಾನಿ ಹೊಂದಿರುವ ಈತನಿಗೆ ಈಗ ಬದುಕಲು ಕಷ್ಟ ಎಂಬ ಪರಿಸ್ಥಿತಿ. ಹೌದು. ಅನ್ಯಗ್ರಹ ಜೀವಿಯಂತೆ ಕಾಣುವ ಈತನಿಗೆ ಯಾರೂ ಸಹ ಕೆಲಸ ನೀಡುತ್ತಿಲ್ಲವಂತೆ.

ರೂಪ ಪರಿವರ್ತನೆಯಿಂದ ಆದ ಬದಲಾವಣೆಗೆ ಬಗ್ಗೆ ಅಥೋಣಿ ಮಾತನಾಡಿದ್ದು, ತನ್ನ ವಿಶಿಷ್ಟ ನೋಟಕ್ಕೆ ಧನಾತ್ಮಕತೆಗಿಂತ ನಕಾರಾತ್ಮಕ ಪ್ರತಿಕ್ರಿಯೆಗಳೇ ಜಾಸ್ತಿ ವ್ಯಕ್ತವಾಗಿದೆ. “ನನ್ನನ್ನು ನೋಡಿದರೆ ಕೂಗಾಡುವ ಮತ್ತು ಓಡಿಹೋಗುವ ಜನರಿದ್ದಾರೆ. ನಾನೂ ಒಬ್ಬ ಮನುಷ್ಯ. ಆದರೆ ಹೆಚ್ಚಿನ ಜನರು ನನ್ನನ್ನು ಹುಚ್ಚನೆಂದು ಭಾವಿಸುತ್ತಾರೆ”. ಮತ್ತು ತನ್ನ ರೂಪ ನೋಡಿ ಯಾರೂ ಕೆಲಸ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.

ಆದರೆ, ಈತನ ಇಂದಿನ ಈ ವ್ಯಥೆಗೆ ಇವನು ಮಾಡಿದ ದೇಹದಂಡನೆಯ ಆಸೆ ಎಂಬ ಕರ್ಮವೇ ಕಾರಣವಾಗಿದೆ ಎಂದೇ ಹೇಳಬಹುದು.

https://www.instagram.com/p/CcTT08zOqOd/?utm_source=ig_web_copy_link
Leave A Reply

Your email address will not be published.