Day: July 25, 2022

ಪತ್ರಿಕಾಂಗ ಸತ್ಯ ಸತ್ಯತೆಯನ್ನು ಪರಿಶೀಲಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಬಿತ್ತರಿಸುವ ಕೆಲಸ ಮಾಡುತ್ತದೆ: ಮಂಜುನಾಥ ಪಂಡಿತ್

ಜಗಳೂರು :25-ಕಣ್ವಕುಪ್ಪೆ ಗವಿಮಠದ .ಶ್ರೀ. ಶ್ರೀ. ಶ್ರೀ.ಡಾ||ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಸಮ್ಮುಖದಲ್ಲಿ ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮ ಉದ್ದೇಶಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ,ಇತ್ತೀಚಿನ ಪತ್ರಿಕೆಗಳಲ್ಲಿ ಕೇವಲ ರಾಜಕೀಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಮಾತ್ರವಲ್ಲ ವಿವಿಧ ಕ್ಷೇತ್ರಗಳಿಗೂ ಒತ್ತು ಕೊಟ್ಟು ಸಮಾಜದಲ್ಲಿ ಭಿತ್ತರಿಸಿದರೆ ಬದಲಾವಣೆ ಸಾಧ್ಯ ಎಂದರು. ಜಗಳೂರಿನಲ್ಲಿ ತಾಲೂಕು ಸಂಘಕ್ಕೆ ಅವಿರೋಧವಾಗಿ …

ಪತ್ರಿಕಾಂಗ ಸತ್ಯ ಸತ್ಯತೆಯನ್ನು ಪರಿಶೀಲಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಬಿತ್ತರಿಸುವ ಕೆಲಸ ಮಾಡುತ್ತದೆ: ಮಂಜುನಾಥ ಪಂಡಿತ್ Read More »

ಕಾಡಿನಲ್ಲಿ ರೈತನೋರ್ವನಿಗೆ ದೊರೆಯಿತು “ಮೊಟ್ಟೆ” | ಆದರೆ ವಾಸ್ತವ ಅರಿತಾಗ ದಂಗಾದ ಗ್ರಾಮಸ್ಥರು

ಮೊಟ್ಟೆ ಅಂದರೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಹಾಗೇ ಕೋಳಿ ಮೊಟ್ಟೆ ಎಂದೇ ಅರ್ಥ. ಆದರೆ ಇಲ್ಲೊಂದು ಕಡೆ ಒಂದು ಮೊಟ್ಟೆಯಾಕಾರದ ಒಂದು ವಸ್ತು ರೈತನಿಗೆ ದೊರೆತಿದೆ. ಇದೊಂದು ರೀತಿಯಲ್ಲಿ ವಿಸ್ಮಯಕಾರಿ ಮೊಟ್ಟೆ ಎಂದೇ ಹೇಳಬಹುದು. ಬನ್ನಿ ಏನದು ತಿಳಿಯೋಣ. ಈ ಘಟನೆ ನಡೆದಿರುವುದು ಹಿಮಾಚಲ ಪ್ರದೇಶದಲ್ಲಿ. ಇಲ್ಲಿನ ರೈತನೊಬ್ಬನಿಗೆ ಭಾರಿ ವಿಶೇಷವಾದ ಮತ್ತು ವಿಸ್ಮಯಕಾರಿ ಮೊಟ್ಟೆಯೊಂದು ಸಿಕ್ಕಿದೆ. ಆತನಿಗೆ ತನ್ನ ಜಮೀನಿನಲ್ಲಿ ಸಿಕ್ಕ ಒಂದು ಮೊಟ್ಟೆಯ ಅದರ ವಾಸ್ತವ ತಿಳಿದು ದಂಗಾಗಿದ್ದಾನೆ. ಹೌದು, ಮಂಡಿ ಜಿಲ್ಲೆಯ ಗೋಹರ್ …

ಕಾಡಿನಲ್ಲಿ ರೈತನೋರ್ವನಿಗೆ ದೊರೆಯಿತು “ಮೊಟ್ಟೆ” | ಆದರೆ ವಾಸ್ತವ ಅರಿತಾಗ ದಂಗಾದ ಗ್ರಾಮಸ್ಥರು Read More »

ನನ್ನ ಮೂಲ ಹೆಸರು “ದ್ರೌಪದಿ” ಅಲ್ಲ | ನೂತನ ರಾಷ್ಟ್ರಪತಿಯ ಮೊದಲ “ಹೆಸರೇನು”?

ಭಾರತದ ನೂತನ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುರ್ಮು ಅವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಡೆದಿರುವ ಜೊತೆಗೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲ ಮಹಿಳೆ ಅನ್ನೋ ಕೀರ್ತಿ ಅವರಿಗಿದೆ. ಆದರೆ ನೂತನ ರಾಷ್ಟ್ರಪತಿಯ ಮೊದಲ ಹೆಸರು ಇದಲ್ಲವಂತೆ. ಅಂದರೆ ಪೋಷಕರು ಇಟ್ಟ ಹೆಸರು ದ್ರೌಪದಿ ಎಂಬುದು ಅವರ ಮೂಲ ಹೆಸರಲ್ಲ. ಶಾಲಾ ದಾಖಲಾತಿ ಸಂದರ್ಭದಲ್ಲಿ ಟೀಚರ್ ಇಟ್ಟ ಹೆಸರು ದ್ರೌಪದಿ. ಹಾಗಾದರೆ ಪೋಷಕರು ಇಟ್ಟ ಹೆಸರೇನು? …

ನನ್ನ ಮೂಲ ಹೆಸರು “ದ್ರೌಪದಿ” ಅಲ್ಲ | ನೂತನ ರಾಷ್ಟ್ರಪತಿಯ ಮೊದಲ “ಹೆಸರೇನು”? Read More »

UPSC recruitment | ಅರ್ಜಿ ಸಲ್ಲಿಸಲು ಕೊನೆ ದಿನಾಂಕ 11 ಆಗಸ್ಟ್

ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗಾಗಿ, ಕೇಂದ್ರ ಲೋಕ ಸೇವಾ ಆಯೋಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ತಾಂತ್ರಿಕ ಸಲಹೆಗಾರ ಹಾಗೂ ರೀಡರ್​ ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 11 ಆಗಿದೆ. ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ಹುದ್ದೆಗಳ ಸಂಖ್ಯೆ: 16ಉದ್ಯೋಗ ಸ್ಥಳ: ನವದೆಹಲಿ – ನಾಗ್ಪುರ …

UPSC recruitment | ಅರ್ಜಿ ಸಲ್ಲಿಸಲು ಕೊನೆ ದಿನಾಂಕ 11 ಆಗಸ್ಟ್ Read More »

ಮನೆ ಮಾಲೀಕನನ್ನೇ ಕೊಂದ ನಾಯಿಯ ಖರೀದಿಗೆ ಡಿಮ್ಯಾಂಡೋ ಡಿಮ್ಯಾಂಡ್ !

ಮನೆ ಮಗನಂತೆ ಸಾಕಿದ ನಾಯಿಯೊಂದು ತನ್ನ ಮಾಲೀಕ ಮನೆಯಿಂದ ಹೊರ ಹೋದಾಗ, ಅದೇ ಮಾಲೀಕನ ತಾಯಿಯನ್ನು ಕೊಂದ ಘಟನೆ ಹಸಿಯಾಗಿರುವಾಗಲೇ ಈಗ ಅದೇ ನಾಯಿ ಖರೀದಿಗೆ ಜನ ತಾ ಮುಂದು ನಾ ಮುಂದು ಎಂದು ಮುಂದೆ ಬಂದಿದ್ದಾರೆ. ಲಕ್ನೋದಲ್ಲಿ ಮನೆಯ ಹಿರಿಯ ಮಹಿಳೆ ಕೊಂದ ಪಿಟ್ ಬುಲ್ ನಾಯಿ ದತ್ತು ತೆಗೆದುಕೊಳ್ಳಲು ಎನ್.ಜಿ.ಒ.ಗಳು, ಜನ ಉತ್ಸುಕರಾಗಿದ್ದಾರಂತೆ. ಬೆಂಗಳೂರು, ದೆಹಲಿ, ಲಕ್ಷ್ಮೀ ಮತ್ತು ದೇಶದ ಇತರ ಭಾಗದ ಎನ್.ಜಿ.ಒ.ಗಳು ಸೇರಿದಂತೆ ಪಿಟ್ ಬುಲ್ ಅನ್ನು ದತ್ತು ಪಡೆಯಲು ಅರ್ಧ …

ಮನೆ ಮಾಲೀಕನನ್ನೇ ಕೊಂದ ನಾಯಿಯ ಖರೀದಿಗೆ ಡಿಮ್ಯಾಂಡೋ ಡಿಮ್ಯಾಂಡ್ ! Read More »

ತುಳಸಿ ಎಲೆಯಿಂದ ನಿವಾರಿಸಬಹುದಂತೆ ಈ ಐದು ಖಾಯಿಲೆ!!

ಪುರಾತನ ಕಾಲದಿಂದಲೂ ಹಿಂದೂಗಳು ತುಳಸಿ ಸಸ್ಯವನ್ನು ಪವಿತ್ರವಾದ ಅಷ್ಟ ದೇವತೆ ಇರುವ ದೇವರೆಂದು ಮತ್ತು ನಮ್ಮ ಮನೆಗೆ ಶ್ರೇಯಸ್ಸು ಕೊಡುವ ಸಸ್ಯವೆಂದು ನಂಬಿದ್ದಾರೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ ಅಲ್ಲ, ತುಳಸಿ ಗಿಡವು ಮುಂಬರುವ ಅಹಿತಕರ ಘಟನೆಯನ್ನು ಪತ್ತೆ ಮಾಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ತುಳಸಿ ಗಿಡ ಕೇವಲ ತುಳಸಿ ಕಟ್ಟೆಯಲ್ಲಿರುವ ಗಿಡವಲ್ಲದೆ, ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಪ್ರತಿದಿನ ತುಳಸಿ …

ತುಳಸಿ ಎಲೆಯಿಂದ ನಿವಾರಿಸಬಹುದಂತೆ ಈ ಐದು ಖಾಯಿಲೆ!! Read More »

ಗುರುಪೂಜೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ!!

ಸಿಪಿಎಂ ಕಾರ್ಯಕರ್ತರು ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಆರ್ ಎಸ್ ‌ಎಸ್ ಕಾರ್ಯಕರ್ತ ಅಸುನೀಗಿದ ಘಟನೆ ನಡೆದಿದೆ. ಕಣ್ಣೂರಿನ ಪಿಣರೈ ಪನುಂಡದಲ್ಲಿ ಗುರು ಪೂಜಾ ಉತ್ಸವ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆ ಜಿಮ್ಮೇಶ್ ಮತ್ತು ಅವರ ಸಹಚರರ ಮೇಲೆ ಕಮ್ಯೂನಿಸ್ಟ್ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ವಿಪರೀತರಕ್ತಸ್ರಾವವಾಗಿದೆ. ಜಿಮ್ಮೇಶ್‌ನನ್ನು ತಲಕ್ಕೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಗುರುಪೂಜಾ ಉತ್ಸವ ಮುಗಿಸಿ ಹಿಂತಿರುಗುತ್ತಿದ್ದ ಸ್ವಯಂಸೇವಕರನ್ನು ಸಿಪಿಎಂ ಕಾರ್ಯಕರ್ತರು ಥಳಿಸಿದ್ದಾರೆ.ಎ. ಆದರ್ಶ್, …

ಗುರುಪೂಜೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ!! Read More »

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸುಳ್ಯದ ಎ.ವಿ.ತೀರ್ಥರಾಮ

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ,ಬಿಜೆಪಿಯ ಹಿರಿಯ ಮುಖಂಡ,ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶಿಸಿದ್ದಾರೆ.

ಕೂಲ್ ಕ್ಯಾಪ್ಟನ್ ಧೋನಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ | ಕಾರಣ…

ಅಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಧೋನಿ 2016ರಲ್ಲಿ ಆಮ್ರಪಾಲಿ ಗ್ರೂಪ್‌ನಿಂದ ಬೇರ್ಪಟ್ಟ ನಂತರ, ತನಗೆ ಶುಲ್ಕದ ರೀತಿಯಲ್ಲಿ ಬರಬೇಕಾದ 40 ಕೋಟಿ ರೂ.ಗಳನ್ನು ಕೊಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಮ್ರಪಾಲಿ ಗ್ರೂಪ್‌ನ ವಿವಿಧ ಯೋಜನೆಗಳಲ್ಲಿ ಮನೆಗಳನ್ನು ಖರೀದಿಸಿದ ಧೋನಿ ಸೇರಿದಂತೆ 1800 ಜನರಿಗೆ ಸುಪ್ರೀಂ ಕೋರ್ಟ್‌ ನೇಮಿಸಿರುವ ರಿಸೀವರ್ ನೋಟಿಸ್ ಕಳುಹಿಸಿದ್ದಾರೆ. ಇವರೆಲ್ಲರಿಗೂ 15 ದಿನದೊಳಗೆ ಹಣ ಜಮಾ ಮಾಡುವಂತೆ ಸೂಚಿಸಲಾಗಿದೆ. ಧೋನಿ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಮಧ್ಯಸ್ಥಿಕೆಗೆ ಆದೇಶಿಸಿತ್ತು. ಅಮ್ರಪಾಲಿ …

ಕೂಲ್ ಕ್ಯಾಪ್ಟನ್ ಧೋನಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ | ಕಾರಣ… Read More »

ಮಲ್ಪೆ : ಮೀನುಗಾರನ ಬಲೆಗೆ ಬಿತ್ತು ಭಾರೀ ಅಪರೂಪದ ಮೀನುಗಳು | ಜನ ಹಾತೊರೆಯುವ ಈ ಮೀನಿಗಿದೆ ಭಾರೀ ಬೇಡಿಕೆ

ಉಡುಪಿ: ಮಳೆಗಾಲ ಪ್ರಾರಂಭ ಆದಾಗಿನಿಂದ ಮೀನಿಗೆ ಭಾರೀ ರೇಟ್ ಉಂಟಾಗಿತ್ತು.‌ ಮೀನು ತಿನ್ನುವುದೇ ಕಷ್ಟ ಎನ್ನುವ ಪರಿಸ್ಥಿತಿಯಾಗಿತ್ತು. ಆದರೆ ಈಗ ಮತ್ತೆ ಮೀನುಗಾರರು ಸಮುದ್ರಕ್ಕೆ ಇಳಿದಿದ್ದು, ಮೀನುಗಳ ಔತಣವನ್ನೇ ನಮಗೆ ನೀಡಲಿದ್ದಾರೆ. ಮಂಗಳೂರು ಮತ್ತು ಮಲ್ಪೆ ಬೀಚಿನಲ್ಲಿ ಮೀನುಗಳ ಭರಾಟೆ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಮಲ್ಪೆ ಬೀಚಿನಲ್ಲಿ ಮೀನು ಹಿಡಿದ ಮೀನುಗಾರರೊಬ್ಬರಿಗೆ ಒಂದೇ ದಿನದಲ್ಲಿ ಎರಡು ಅಪರೂಪದ ಮೀನುಗಳು ದೊರಕಿದೆ. ಹೌದು, ಈ ಮೀನುಗಳನ್ನು ಕಂಡ ಮೀನುಗಾರ ಭಾರೀ ಸಂತೋಷಗೊಂಡಿದ್ದಾರೆ. ಈ ಆಳೆತ್ತರದ ಮೀನನ್ನು ಗಾಳದ ಸಹಾಯದಿಂದ …

ಮಲ್ಪೆ : ಮೀನುಗಾರನ ಬಲೆಗೆ ಬಿತ್ತು ಭಾರೀ ಅಪರೂಪದ ಮೀನುಗಳು | ಜನ ಹಾತೊರೆಯುವ ಈ ಮೀನಿಗಿದೆ ಭಾರೀ ಬೇಡಿಕೆ Read More »

error: Content is protected !!
Scroll to Top