ಬೆಂಗಳೂರಿನಲ್ಲಿ ಇವತ್ತು ಭರ್ಜರಿ ಮಟನೋತ್ಸವ | 3000 ಕೆಜಿ ಮಟನ್, 5000 ಕೆಜಿ ಚಿಕನ್, ಬಿರಿಯಾನಿ ಸಹಿತ ಭರ್ಜರಿ ಬಾಡೂಟ ಹಾಕಿಸಿದ ಬರ್ತ್ ಡೇ ಬಾಯ್ ಶಾಸಕ ಎಸ್ ಆರ್ ವಿಶ್ವನಾಥ್ !

ಬೆಂಗಳೂರು: ಇವತ್ತು ಬೆಂಗಳೂರಿನಲ್ಲಿ ಮಟನೋತ್ಸವ. ಸಿದ್ದರಾಮೋತ್ಸವದ ನಂತರ ಇದೀಗ ಗಮನಿಸುತ್ತಿದೆ ಮಹಾ ಮಟನೋತ್ಸವ. ಯಲಹಂಕದ ಬಿಜೆಪಿ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಅವರ 60ನೇ ಜನ್ಮದಿನ. ಇವರ ಹುಟ್ಟುಹಬ್ಬ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ, ಅಲ್ಲಿ ನಡೆಯುತ್ತಿರುವ ಅದ್ಧೂರಿ ಸಮಾರಂಭ. ಯಲಹಂಕದ ರೆಸಾರ್ಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಶ್ವನಾಥ್ ಅವರು ಬಾಡೂಟ ರೆಡಿ ಮಾಡಿಸಿದ್ದಾರೆ. ಇದರ ಪ್ರಮಾಣ ಕೇಳಿದರೆ ಶಾಕ್ ಆಗುವುದು ಗ್ಯಾರೆಂಟಿ!

ಅಲ್ಲಿ ಟನ್ ಗಟ್ಟಲೆ ಮಟನ್ ಬೆಂದಿದೆ. ವಿಶೇಷವಾಗಿ ದೊಡ್ಡ ಬಾಣಸಿಗರ ತಂಡ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದೆ. ಅಲ್ಲಿ ಮೂರು ಟನ್ ಮಟನ್, ಐದು ಟನ್ ಚಿಕನ್ ತಯಾರು ಮಾಡಲಾಗಿದ್ದು, ಬಿರಿಯಾನಿ ಸಹಿತ ಥರಾವರಿ ಖಾದ್ಯಗಳನ್ನು ಬಡಿಸಲಾಗಿದೆ. ಸುಮಾರು 50 ಸಾವಿರ ಜನರಿಗೆ ಬಾಡೂಟ ಮಾಡಿಸಲಾಗಿದೆ. ಆಮೂಲಕ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರು, ಮತದಾರರು ಮತ್ತು ಅಭಿಮಾನಿಗಳಿಗೆ ಒಂದು ಒಳ್ಳೆಯ ಬಾಡೂಟ ಮಾಡಿಸಿದ್ದಾರೆ ಎಸ್ ಆರ್ ವಿಶ್ವನಾಥ್.

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ವಿ. ಸೋಮಣ್ಣ, ಕೆ. ಗೋಪಾಲಯ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಿದ್ದು, ವಿಶ್ವನಾಥ್ ಅವರಿಗೆ ಶುಭ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪನವರು ವಿಜಯೇಂದ್ರಗೆ ಬಿಟ್ಟು ಕೊಟ್ಟರೆ ನಮಗೆ ತೊಂದರೆ ಇಲ್ಲ. ಆದರೆ ಅವರು ರಾಜಕೀಯ ನಿವೃತ್ತಿ ಘೋಷಿಸಬಾರದು. ಅವರ ಆಶೀರ್ವಾದ ನಮ್ಮ ಮೇಲೆ ಇರಬೇಕು. ಯಡಿಯೂರಪ್ಪನವರಿಗಾಗಿ ನಾವು ರಾಜ್ಯದ ಯಾವುದೇ ಕ್ಷೇತ್ರವನ್ನು ಬಿಟ್ಟು ಕೊಡಲು ತಯಾರು ಇದ್ದು, ಪ್ರಾಣ ಒತ್ತೆ
ಇಟ್ಟಾದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಯಡಿಯೂರಪ್ಪನವರು ಶ್ರೀಕೃಷ್ಣನ ಹಾಗೆ, ಭೀಷ್ಮನ ರೀತಿ ನಮ್ಮ ಜತೆ ಇರಬೇಕು. ರಾಜಕೀಯ ನಿವೃತ್ತಿ ಘೋಷಣೆ ವಾಪಸ್ ಪಡೆದುಕೊಂಡರೆ ಅದೇ ನಮಗೆ ಹುಟ್ಟುಹಬ್ಬಕ್ಕೆ ಅವರು ನೀಡುವ ಗಿಫ್ಟ್ ಎಂದರು. ವಿಶ್ವನಾಥ್ ಶೀಘ್ರ ಸಚಿವ ಸಂಪುಟ ಸೇರಬೇಕು, ಈ ಬಗ್ಗೆ ಸಿಎಂಗೆ ನಾನು ಒತ್ತಾಯ ಮಾಡುತ್ತೇನೆ. ಅವರಿಗೆ ಒಳ್ಳೆಯದಾಗಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

Leave A Reply

Your email address will not be published.