ತಾನು ದುಡಿದ ಸಂಬಳ ಕೇಳಿದ ವೃದ್ಧೆಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಬಾರಿಸಿದ ನೀಚ ಮಾಲೀಕ

0 8

ತಾನು ದುಡಿದ ಸಂಬಳವನ್ನು ಕೇಳಿದ್ದಕ್ಕೆ, ಮಾಲೀಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃದ್ಧೆಯೋರ್ವರಿಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಬಾರಿಸಿದ ಘಟನೆಯೊಂದು ನಡೆದಿದೆ. ಆಕೆ ತನ್ನ ತಾಯಿಯ ಸಮಾನವಾದ ವೃದ್ಧೆ ಸಂಬಳ ಕೇಳಿದಳು ಎಂಬ ಕಾರಣಕ್ಕೆ ಸ್ಪಾ ಮಾಲೀಕನೊಬ್ಬ ಈ ಕೃತ್ಯ ಮಾಡಿದ್ದಾನೆ.

ಮನೋಜ್ ಎಂಬಾತ ನಡೆಸುತ್ತಿದ್ದ ಸ್ಪಾನಲ್ಲಿ ಲಕ್ಷ್ಮಮ್ಮ ಎನ್ನುವವರು ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆ ಇದ್ದ ಕಾರಣ ಕುಮಾರಸ್ವಾಮಿ ಲೇಔಟ್ ಬಳಿಯಿರುವ ಮನೋಜ್ ಮನೆ ಬಳಿ ತೆರಳಿ ಸಾರ್ ನನಗೆ ಸ್ವಲ್ಪ ದುಡ್ಡು ಬೇಕು, ದಯವಿಟ್ಟು ಕೊಡಿ ಸಾರ್ ಎಂದು ಕೇಳಿದ್ದಾರೆ. ಆಗ ಮನೋಜ್ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಲಕ್ಷ್ಮಮ್ಮ ಮನೋಜ್ ಬಳಿ ಹಣ ಕೇಳಿದಾಗ ಮನೋಜ್ ಏಕಾಏಕಿ ಲಕ್ಷ್ಮಮ್ಮನವರಿಗೆ ಕಾಲಿನಿಂದ ಒದ್ದು ಕಪಾಳಕ್ಕೆ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ವೃದ್ಧೆ ಲಕ್ಷ್ಮಮ್ಮ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸರು ಆರೋಪಿ ಮನೋಜನನ್ನು ಬಂಧಿಸಲು ಮುಂದಾಗಿದ್ದಾರೆ.

Leave A Reply