ಫ್ರೆಂಡ್ಸ್ ನೀಡಿದ ಗಿಫ್ಟ್ ನಿಂದ ನಾಚಿ ನೀರಾದ ವರ, ವಧು ರಿಯಾಕ್ಷನ್ ಹೇಗಿತ್ತು ಗೊತ್ತಾ? ಅಷ್ಟಕ್ಕೂ ಆ ಗಿಫ್ಟ್ ಯಾವುದು…ಇಲ್ಲಿದೆ ವೀಡಿಯೋ

ಮದುವೆ ಮಂಟಪದಲ್ಲಿ ನಡೆಯುವಂತಹ ಎಷ್ಟೋ ಮದುವೆ ಸಮಾರಂಭಗಳ ಫನ್ನಿ ವೀಡಿಯೋ ನೀವು ನೋಡಿದ್ದೀರ. ಇದು ಕೂಡಾ ಅಂತಹುದ್ದೇ ಒಂದು ವೀಡಿಯೋ. ಎಲ್ಲಾ ಮದುವೆ ವೀಡಿಯೋದಲ್ಲಿ ನಾವು ಸಾಮಾನ್ಯವಾಗಿ ಮದುಮಗಳು ಭಾವುಕಳಾಗುವ ಸನ್ನಿವೇಶಗಳನ್ನು ನೋಡಿರಬಹುದು. ಹೌದು, ಇದು ಸ್ವಲ್ಪ ಉಲ್ಟಾ. ಇಲ್ಲಿ ವರ ನಾಚಿ ನೀರಾಗಿದ್ದಾನೆ. ಬನ್ನಿ ಯಾಕೆ ಏನು ಎಂದು ತಿಳಿಯೋಣ.

ಮದುವೆ ಎಂದ ಮೇಲೆ ಸಾಕಷ್ಟು ಫನ್ ಇದ್ದೇ ಇರುತ್ತದೆ. ಅದರಲ್ಲೂ ಮದುವೆ ಹುಡುಗನ ಫ್ರೆಂಡ್ಸ್ ಮಾಡೋ ಕೀಟಲೆ, ಫನ್ ಎಂಜಾಯ್‌ಮೆಂಟ್, ತಮಾಷೆ, ಹರಟೆ ಇದೆಯಲ್ಲಾ ಅದರ ಥ್ರಿಲ್ ಬೇರೆ. ಇಲ್ಲೊಂದು ಕಡೆ ಮದುವೆಯಲ್ಲಿ ವರನಿಗೆ ಸ್ಪೆಷಲ್ ಗಿಫ್ಟ್ ಒಂದು ಸಿಕ್ಕಿದ್ದು ಆತನ ಸ್ನೇಹಿತರ ತರಲೆ ವೀಡಿಯೋ ವೈರಲ್ ಆಗಿದೆ. ವರ ಗಿಫ್ಟ್ ನೋಡಿ ತಕ್ಷಣ ಮರೆಮಾಚಿದ್ದಾನೆ. ನಂತರ ನಾಚಿ ನೀರಾಗಿದ್ದಾನೆ. ಹಾಗಾದರೆ ಆ ಗಿಫ್ಟ್ ಯಾವುದು? ಮುಂದೆ ತಿಳಿಯೋಣ.

ಮದುವೆ ಮನೆಯಲ್ಲಿ ಸ್ನೇಹಿತರಿಲ್ಲದಿದ್ದರೆ ನಡೆಯುತ್ತದಾ? ಹೇಳಿ…ಇಲ್ಲ ತಾನೇ. ಹಾಗೆನೇ ಇಲ್ಲೊಂದು ಸ್ನೇಹಿತರ ಗುಂಪೊಂದು ವರನ ಕಾಲೆಳೆದಿದ್ದಾರೆ.

ಈ ವೀಡಿಯೋದಲ್ಲಿ ವಧು ಮತ್ತು ವರರು ವೇದಿಕೆಯ ಮೇಲೆ ಕುಳಿತಿದ್ದಾರೆ. ಅವರ ಸ್ನೇಹಿತರು ಇದ್ದಕ್ಕಿದ್ದಂತೆ ಅಲ್ಲಿಗೆ ತಲುಪಿದ್ದಾರೆ. ಸ್ನೇಹಿತರು ಅತಿಥಿಗಳ ಮುಂದೆ ವರನಿಗೆ ಒಂದು ಉಡುಗೊರೆಯನ್ನು ನೀಡುತ್ತಾರೆ. ಈ ವೇಳೆ ಅಲ್ಲಿದ್ದ ವಧು ಪ್ಯಾಕೆಟ್‌ನಲ್ಲಿ ಏನಿರಬಹುದು ಕುತೂಹಲದಿಂದ ನೋಡಿದ್ದಾಳೆ. ಅದೇ ಸಮಯದಲ್ಲಿ ಅದನ್ನು ತೆರೆಯಲು ವರನನ್ನು ಸ್ನೇಹಿತರು ಹೇಳ್ತಾರೆ. ಆದರೆ ಗಿಫ್ಟ್ ನೋಡಿದ ವರ ಮೊದಲು ನಗ್ತಾನೆ. ವಧು ಕೂಡ ಆ ಪ್ಯಾಕೆಟ್ ಅನ್ನು ಬಹಳ ಆಸಕ್ತಿಯಿಂದ ನೋಡತೊಡಗುತ್ತಾಳೆ. ವರ ಈಗ ಆ ಪ್ಯಾಕೆಟ್ ಅನ್ನು ತೆರೆಯಲು ಪ್ರಾರಂಭಿಸುತ್ತಾನೆ. ಅವನ ಹತ್ತಿರ ನಿಂತ ಸ್ನೇಹಿತರು ಜೋರಾಗಿ ನಗುತ್ತಾರೆ. ವೇದಿಕೆಯಲ್ಲಿ ಕುಳಿತಿದ್ದ ವಧು ಕೂಡ ಗೊಂದಲಕ್ಕೊಳಗಾಗುತ್ತಾಳೆ. ವರನು ಪ್ಯಾಕೆಟ್ ತೆರೆದು ಒಳಗೆ ಕೈ ಹಾಕಿದ ತಕ್ಷಣ, ತನಗೆ ಉಡುಗೊರೆಯಲ್ಲಿ ಏನಿದೆ ಎಂದು ಅರ್ಥವಾಗುತ್ತದೆ. ವರ ಕವರ್ ಒಳಗಡೆಯಿಂದ ಉಡುಗೊರೆಯನ್ನು ತೆಗೆದುಕೊಂಡಿಲ್ಲ. ಈ ಸಮಯದಲ್ಲಿ ವರನ ಪಕ್ಕದಲ್ಲಿ ಕುಳಿತಿರುವ ವಧುವಿನ ನಗುತ್ತಾಳೆ‌. ಅವಳಿಗೆ ತುಂಬಾ ಆಶ್ಚರ್ಯವಾಗುತ್ತದೆ.

ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

https://www.instagram.com/reel/Cfbe0p5jNyH/?utm_source=ig_web_copy_link
Leave A Reply