Day: July 23, 2022

ICF railway recruitment-2022 | ಒಟ್ಟು ಹುದ್ದೆ 876, ಅರ್ಜಿ ಸಲ್ಲಿಸಲು ಕೊನೆದಿನ ಜು.26

ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF), ಚೆನ್ನೈ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಮತ್ತು ತರಬೇತಿಯು ಅಪ್ರೆಂಟಿಸ್ ಕಾಯಿದೆ, 1961 ರ ನಿಬಂಧನೆಗಳಿಗೆ ಕಟ್ಟುನಿಟ್ಟಾಗಿ ಅನುಸರಣೆಯಾಗಿದ್ದು, ಪೂರ್ಣಗೊಳಿಸಿದ ನಂತರ ಅಪ್ರೆಂಟಿಸ್‌ಗಳಿಗೆ ಯಾವುದೇ ಉದ್ಯೋಗವನ್ನು ಖಾತರಿ ಇರುವುದಿಲ್ಲ ಎಂಬುದನ್ನು ಗಮನಿಸಬೇಕು. ಹುದ್ದೆಯ ವಿವರ :ಫ್ರೆಶರ್ಸ್: 276 ಪೋಸ್ಟ್‌ಗಳುಕಾರ್ಪೆಂಟರ್: 37 ಹುದ್ದೆಗಳುಎಲೆಕ್ಟ್ರಿಷಿಯನ್: 32 ಹುದ್ದೆಗಳುಫಿಟ್ಟರ್: 65 ಪೋಸ್ಟ್‌ಗಳುಯಂತ್ರಶಾಸ್ತ್ರಜ್ಞ: 34 ಪೋಸ್ಟ್‌ಗಳುಪೇಂಟರ್: 33 ಹುದ್ದೆಗಳುವೆಲ್ಡರ್: 75 ಪೋಸ್ಟ್ಗಳುಪಾಸಾ: 0 ಪೋಸ್ಟ್ Ex-ಐಟಿಐ: …

ICF railway recruitment-2022 | ಒಟ್ಟು ಹುದ್ದೆ 876, ಅರ್ಜಿ ಸಲ್ಲಿಸಲು ಕೊನೆದಿನ ಜು.26 Read More »

ಖ್ಯಾತ ನಟ ಅರ್ಜುನ್ ಸರ್ಜಾ ತಾಯಿ ನಿಧನ

ಖ್ಯಾತ ನಟ ಧ್ರುವ ಸರ್ಜಾ ಅವರ ಅಜ್ಜಿ, ಅರ್ಜುನ್ ಸರ್ಜಾರ ತಾಯಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀ ದೇವಿ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 84 ವರ್ಷಗಳಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನ ಕಳೆದ 22 ದಿನಗಳಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು 22 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಮ್ಮನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅರ್ಜುನ್ …

ಖ್ಯಾತ ನಟ ಅರ್ಜುನ್ ಸರ್ಜಾ ತಾಯಿ ನಿಧನ Read More »

ಹೃದ್ರೋಗ ಅಪಾಯ ತಪ್ಪಿಸಿಕೊಳ್ಳಲು ಕೇವಲ ಹೀಗೆ ಮಾಡಿದರೆ ಸಾಕು : ಸಂಶೋಧನೆಯಲ್ಲಿ ʻ ಸ್ಪೋಟಕ ಮಾಹಿತಿ ʼ ಬಹಿರಂಗ

ಇತ್ತೀಚಿನ ದಿನಗಳಲ್ಲಿ ಹೃದ್ರೋಗಗಳ ಅಪಾಯವು ತುಂಬಾ ಹೆಚ್ಚಾಗಿದೆ, ಇದರಲ್ಲಿ ಹೃದಯಾಘಾತ, ಹೃದಯ ಸ್ತಂಭನದಂತಹ ಪರಿಸ್ಥಿತಿಗಳು ಮಾರಣಾಂತಿಕವಾಗಬಹುದು. ಡಬ್ಲ್ಯುಎಚ್ಒ ಪ್ರಕಾರ, ವಿವಿಧ ಹೃದ್ರೋಗಗಳು ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಸಾವುಗಳಿಗೆ ಕಾರಣವಾಗಿವೆ. ಆದರೆ ಸಂಶೋಧನೆಯ ಪ್ರಕಾರ, ಪ್ರತಿದಿನ ಕೇವಲ 21 ನಿಮಿಷಗಳ ಕಾಲ ನಡೆಯುವ ಮೂಲಕ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ವಾಕಿಂಗ್ ನ ಪ್ರಯೋಜನಗಳು ಮತ್ತು ಹೃದ್ರೋಗಗಳ ಅಪಾಯದ ನಡುವಿನ ಸಂಬಂಧದ ಬಗ್ಗೆ ಈ ಸಂಶೋಧನೆಯು ಏನು ಹೇಳುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ (ಹೃದ್ರೋಗದ ಅಪಾಯವನ್ನು …

ಹೃದ್ರೋಗ ಅಪಾಯ ತಪ್ಪಿಸಿಕೊಳ್ಳಲು ಕೇವಲ ಹೀಗೆ ಮಾಡಿದರೆ ಸಾಕು : ಸಂಶೋಧನೆಯಲ್ಲಿ ʻ ಸ್ಪೋಟಕ ಮಾಹಿತಿ ʼ ಬಹಿರಂಗ Read More »

ಸಾಫ್ಟ್ ಮಾತಿನ ಸಾಫ್ಟ್ ವೆರ್ ಇಂಜಿನಿಯರ್!! ಬಂಟ್ವಾಳದ ಯುವತಿಯ ಫೇಸ್ಬುಕ್ ಪ್ರೇಮದಲ್ಲಿ ನಡೆಯಿತು ಮಹಾಮೋಸ

ಬಂಟ್ವಾಳ:ಫೇಸ್ಬುಕ್ ಬುಕ್ ಪ್ರೇಮವೊಂದು ಕೈಕೊಟ್ಟು,ಯುವತಿ ಕಂಗಾಲಾದ ಘಟನೆಯೊಂದು ಜಿಲ್ಲೆಯ ಬಂಟ್ವಾಳದಿಂದ ವರದಿಯಾಗಿದೆ.ಇಲ್ಲಿನ ಯುವತಿಯೋರ್ವಳು ಕಳೆದ ಕೆಲ ವರ್ಷಗಳಿಂದ ಫೇಸ್ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿದ್ದು,ಸದ್ಯ ಆಕೆಯ ಪ್ರಿಯಕರನ ನಿಜಬಣ್ಣ ಬಯಲಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಹೌದು, ಕಳೆದ ಕೆಲ ವರ್ಷಗಳ ಹಿಂದೆ ಇಲ್ಲಿನ ಯುವತಿಗೆ ಫೇಸ್ಬುಕ್ ನಲ್ಲಿ ಪರಿಚಯವಾದ ಮಂಗಳಮುಖಿಯು ಗಂಡಸಿನ ಧ್ವನಿಯಲ್ಲಿ ಮಾತನಾಡಿ ಪ್ರೀತಿಯ ನಾಟಕವಾಡಿದ್ದ.ತಾನು ಸಾಫ್ಟ್ ವೆರ್ ಇಂಜಿನಿಯರ್ ಎನ್ನುತ್ತಾ ಮಾತನಾಡುತ್ತಿದ್ದ ಮಂಗಳಮುಖಿ ಹಾಗೂ ಯುವತಿಯ ನಡುವೆ ಚಾಟಿಂಗ್, ದೂರವಾಣಿ ಕರೆಗಳು ಮಾಮೂಲಾಗಿತ್ತು. ಹೀಗೆ ಮುಂದುವರಿದ …

ಸಾಫ್ಟ್ ಮಾತಿನ ಸಾಫ್ಟ್ ವೆರ್ ಇಂಜಿನಿಯರ್!! ಬಂಟ್ವಾಳದ ಯುವತಿಯ ಫೇಸ್ಬುಕ್ ಪ್ರೇಮದಲ್ಲಿ ನಡೆಯಿತು ಮಹಾಮೋಸ Read More »

ನೆಲ್ಯಾಡಿಯ ಉಪನ್ಯಾಸಕ ನೇಣುಬಿಗಿದು ಆತ್ಮಹತ್ಯೆ

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ನೆಕ್ಕರೆ ನಿವಾಸಿ ಆನಂದ ಗೌಡ(33ವ.)ಎಂಬವರು ಹೆಬ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.23ರಂದು ನಡೆದಿದೆ. ಹೆಬ್ರಿಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಆನಂದ ಗೌಡರವರಿಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಅವರು ವಾಸವಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ.

ಮಂಗಳೂರು: ಕಂಕನಾಡಿಯಲ್ಲಿ ಮಧ್ಯರಾತ್ರಿ ನಡೆದ ಘಟನೆ | ಹಳಿ ತಪ್ಪಿದ ರೈಲು-ಕಂಬಕ್ಕೆ ಡಿಕ್ಕಿ!!!

ಮಂಗಳೂರು:ಹಳಿ ತಪ್ಪಿದ ಗೂಡ್ಸ್ ರೈಲೊಂದು ಕಂಬಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ಕಳೆದ ತಡ ರಾತ್ರಿ ಮಂಗಳೂರಿನ ಕಂಕನಾಡಿ ರೈಲು ನಿಲ್ದಾಣದ ಬಳಿಯಲ್ಲೇ ನಡೆದಿದೆ. ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಪರಿಣಾಮ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಹಳಿಯನ್ನು ಸಂಚಾರಕ್ಕೆ ಮುಕ್ತವಾಗಿಸಲಾಗಿದೆ.

ಪುತ್ತೂರು : ವರದಕ್ಷಿಣೆ ರಹಿತ ವಿವಾಹವಾಗಿದ್ದೇನೆ ಎಂದು ಪ್ರಚಾರ ಮಾಡಿ ವರದಕ್ಷಿಣೆ ಪಡೆದ ಭೂಪ | ಮತ್ತಷ್ಟು ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ

ಪುತ್ತೂರು:ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಪ್ರಚಾರಗಿಟ್ಟಿಸಿ ಬಳಿಕ ವರದಕ್ಷಿಣೆ ಪಡೆದು ಮದುವೆಯಾಗಿರುವ ವ್ಯಕ್ತಿಯೋರ್ವ ಇದೀಗ ಮತ್ತಷ್ಟು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದು,ಹಲ್ಲೆಗೊಳಗಾದ ಆತನ ಪತ್ನಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ರಾಮಕುಂಜ ಆತೂರು ಪೆರ್ಜಿ ನಿವಾಸಿ ಪಿ.ಹುಸೈನ್ ಮತ್ತು ಮೈಮುನಾ ದಂಪತಿ ಪುತ್ರಿ ಸೆಮೀಮಾ(28ವ.) ಎಂಬವರೇ ಹಲ್ಲೆಗೊಳಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾದವರು. 2013ರ ಜೂ.15ಕ್ಕೆ ನನ್ನ ವಿವಾಹವು ಹಾಸನದ ಚಿಕ್ಕನನಾಡು ಟಿ.ಎಚ್.ಇಬ್ರಾನ್ ಅವರೊಂದಿಗೆ ನಡೆದಿತ್ತು.ಇಬ್ರಾನ್ ವಧು ನೋಡಲು ಬಂದ ವೇಳೆ, ವರದಕ್ಷಿಣೆ ರಹಿತ ವಿವಾಹವಾಗುವುದಾಗಿ …

ಪುತ್ತೂರು : ವರದಕ್ಷಿಣೆ ರಹಿತ ವಿವಾಹವಾಗಿದ್ದೇನೆ ಎಂದು ಪ್ರಚಾರ ಮಾಡಿ ವರದಕ್ಷಿಣೆ ಪಡೆದ ಭೂಪ | ಮತ್ತಷ್ಟು ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ Read More »

ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ ಪ್ರಿಯಕರ!

ಪ್ರೀತಿ ಅಮರ ಅನ್ನೋ ಮಾತಿದೆ. ಆದ್ರೆ ಕೆಲವೊಂದು ಬಾರಿ ಅದು ಸುಳ್ಳದಾಗ, ‘ಪ್ರೀತಿ’ಯೇ ದ್ವೇಷವಾಗಿ ಹುಟ್ಟಿಕೊಂಡು ಅದೆಷ್ಟೋ ಜೀವಗಳೇ ಹೋಗಿದೆ. ತಾನು ಪ್ರೀತಿಸಿದಾಕೆ ಕೈ ಕೊಟ್ಟಳೆಂಬ ಕಾರಣಕ್ಕೊ, ಅಥವಾ ಬೇರೆ ಮದುವೆಯಾದಳೆಂಬ ಕಾರಣಕ್ಕೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗುತ್ತಲೇ ಇದೆ. ಇದೀಗ ಅದೇ ರೀತಿಯ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ವರದಿಯಾಗಿದೆ. ಹೌದು. ಪ್ರೀತಿಸಿದ ಯುವತಿ ಮದುವೆ ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯನ್ನು ಕೊಂದು, ಬಳಿಕ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತರು ಬೆಳಗಾವಿಯ ಬಸವಕಾಲೋನಿಯ ರೇಣುಕಾ ಹಾಗೂ …

ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ ಪ್ರಿಯಕರ! Read More »

ಮದುವೆಯಾಗಲು ರೆಡಿಯಾದ ಸ್ಯಾಂಡಲ್ ವುಡ್ ನ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ…ಮದುವೆ ಯಾವಾಗ? ಹುಡುಗಿ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ನ ಹಾಸ್ಯ ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ತುಂಬಾ ಗಾಸಿಪ್ ಗಳು ಬಂದಿದೆ. ನಿರೂಪಕಿ ಅನುಶ್ರೀಯಿಂದ ಹಿಡಿದು ನಾನಾ ನಟಿಯರ ಹೆಸರಿನ ಅವರ ಮದುವೆಯ ಮಾತು ಬಂದಿದೆ‌. ಆದರೆ ಅವೆಲ್ಲ ಸುಳ್ಳು ಸುದ್ದಿಯಾಗಿತ್ತು. ಆದರೆ ಈ ಬಾರಿ ನಿಜ ವಿಷಯವೊಂದು ತೇಲಿ ಬಂದಿದೆ. ಮುಂದಿನ ವರ್ಷ ಚಿಕ್ಕಣ್ಣ ಪಕ್ಕಾ ಮದುವೆಯಾಗಲಿದ್ದಾರಂತೆ. ಅದಕ್ಕೆ ಕಾರಣ ಅವರ ಕುಟುಂಬದ ಒತ್ತಡವಂತೆ. ಚಿಕ್ಕಣ್ಣ ಮದುವೆ ಆಗುತ್ತಿರುವ ಹುಡುಗಿ ಯಾರು? ಅವರು ಸಿನಿಮಾ ರಂಗದವರಾ ಅಥವಾ ತನ್ನ ಕುಟುಂಬ ಮಂದಿ …

ಮದುವೆಯಾಗಲು ರೆಡಿಯಾದ ಸ್ಯಾಂಡಲ್ ವುಡ್ ನ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ…ಮದುವೆ ಯಾವಾಗ? ಹುಡುಗಿ ಯಾರು ಗೊತ್ತೇ ? Read More »

BIGG NEWS । ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಲು ಕಾಯುತ್ತಿರುವ ಇನ್ನೊಬ್ಬ ಅಭ್ಯರ್ಥಿ ಯಾರು ಗೊತ್ತಾ ?

ಮೈಸೂರು : ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಯಾರೆಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಹಲವು ವರ್ಷಗಳಿಂದ ಕೈತಪ್ಪಿ ಹೋಗುತ್ತಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಲು ಒಂದು ಹೆಜ್ಜೆ ಇಟ್ಟಿದ್ದಾರೆ ಖರ್ಗೆ. ಹೀಗಾಗಿ ಸಿದ್ದರಾಮಯ್ಯ, ಡಿಕೆಶಿ, ಶಾಮನೂರು ಜತೆಗೆ ಖರ್ಗೆ ಸ್ಪರ್ಧೆಯಲ್ಲಿ ಸೇರಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಫಲಿತಾಂಶಕ್ಕೂ ಮುನ್ನ ಸಿಎಂ ಅಭ್ಯರ್ಥಿ ಯಾರೆಂದು ಹೇಳುವುದಿಲ್ಲ. ನಾನು …

BIGG NEWS । ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಲು ಕಾಯುತ್ತಿರುವ ಇನ್ನೊಬ್ಬ ಅಭ್ಯರ್ಥಿ ಯಾರು ಗೊತ್ತಾ ? Read More »

error: Content is protected !!
Scroll to Top