ಗರ್ಭಿಣಿ ಅಕ್ಕನ ಬಯಕೆ ಈಡೇರಿಸಲು ಬಿರಿಯಾನಿ ತರಲು ಮುಸ್ಲಿಂ ಸ್ನೇಹಿತೆಯ ಮನೆಗೆ ಹೋದ ಹಿಂದು ಯುವತಿ | ಬೆದರಿಕೆ ಹಾಕಿದ್ದ ಹಿಂದೂ ಯುವಕರ ಮೇಲೆ ಕೇಸ್

ಮಂಗಳೂರು : ಮುಸ್ಲಿಂ ಸ್ನೇಹಿತೆಯೋರ್ವಳ ಮನೆಗೆ ತನ್ನ ಗರ್ಭಿಣಿ ಸಹೋದರಿಗೆ ಬಿರಿಯಾನಿ ತಿನ್ನುವ ಆಸೆಯಾಗಿದೆ ಎಂದು ಸ್ನೇಹಿತೆಯೋರ್ವಳು ತನ್ನ ಅಕ್ಕನ ಜೊತೆ ಆಕೆಯ ಮನೆಗೆ ಬಂದಿದ್ದನ್ನೇ ಕೆಲವರು ದೊಡ್ಡ ವಿವಾದ ಮಾಡಿದ್ದಾರೆ. ಗರ್ಭಿಣಿ ಬಯಕೆ ಎಂದು ಮುಸ್ಲಿಂ ಸ್ನೇಹಿತೆಯ ಮನೆಗೆ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ದ ಹಿಂದೂ ಯುವತಿ ಮೇಲೆ ನೈತಿಕ ಪೊಲೀಸರು ಮುಗಿಬಿದ್ದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಗ್ರಾಮದಲ್ಲಿ ನಡೆದಿದೆ. ನೈತಿಕ ಪೊಲೀಸ್ ಗಿರಿ ನಡೆಸಿದ ಹಿಂದೂ ಕಾರ್ಯಕರ್ತರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

ಈ ಘಟನೆ ಜುಲೈ 12ರಂದು ಕೊಯಿಲಾದಲ್ಲಿ ನಡೆದಿದೆ. ತನ್ನ ಮುಸ್ಲಿಂ ಸ್ನೇಹಿತೆ ಮನೆಗೆ ಹಿಂದೂ ಯುವತಿಯೊಬ್ಬಳು ತೆರಳಿದ್ದು, ಇದನ್ನ ಗಮನಿಸಿದ ಹಿಂದೂ ಕಾರ್ಯಕರ್ತರು ಹಿಂಬಾಲಿಸಿಕೊಂಡು ಸಾಗಿ ಅಡ್ಡ ಹಾಕಿ ನೈತಿಕ ಪೊಲೀಸ್ ಗಿರಿ ತೋರಿದ್ದರು.

ಸಂಶೀನಾ ಎಂಬಾಕೆ ಮನೆಗೆ ಆಕೆಯ ಸ್ನೇಹಿತೆ ಕಾವ್ಯ ಆಟೋದಲ್ಲಿ ಹೋಗಿದ್ದಾಳೆ. ಈ ವೇಳೆ ಬೈಕ್ ಮತ್ತು ಕಾರುಗಳಲ್ಲಿ ಹಿಂಬಾಲಿಸಿ ಬಂದಿದ್ದ ಹಿಂದೂ ಕಾರ್ಯಕರ್ತರು, ಸಂಶೀನಾ ಮನೆ ಬಳಿ ಬಂದು ಅವಾಚ್ಯವಾಗಿ ನಿಂದಿಸಿ ನೈತಿಕ ಪೊಲೀಸ್ ಗಿರಿ ಮಾಡಿದ್ದರು. ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿನಿತ್ಯ ಒಂದಲ್ಲ ಒಂದು ಕಡೆ ನೈತಿಕ ಪೊಲೀಸ್ ಗಿರಿ ನಡೆಯುತ್ತಲೇ ಇದೆ. ಇದಕ್ಕೆ ಮಂಗಳೂರು ಪೊಲೀಸರು ಕಡಿವಾಣ ಬೇಗನೇ ಹಾಕಬೇಕಾಗಿದೆ.

ಸಂಶೀನಾ ನೀಡಿದ ದೂರಿನ ಪ್ರಕಾರ, ಸ್ನೇಹಿತೆ ಕಾವ್ಯಳ ಅಕ್ಕ ಗರ್ಬಿಣಿಯಾಗಿದ್ದು, ಹಾಗಾಗಿ ಬಿರಿಯಾನಿ ತಿನ್ನುವ ಆಸೆ ಇದ್ದ ಕಾರಣ ಕಾವ್ಯ ಮತ್ತು ನಾನು ಬಿರಿಯಾನಿ ಕೊಂಡು ಹೋಗಲೆಂದು ಜುಲೈ 12ರಂದು ಆಟೋರಿಕ್ಷಾದಲ್ಲಿ ಮನೆಗೆ ಬಂದಾಗ, ಈ ಸಂದರ್ಭದಲ್ಲಿ ಸುದರ್ಶನ್ ಗೆಲ್ಲೋಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಹಾಗೂ ಇತರರು ಕಾರು ಮತ್ತು ಬೈಕ್‌ನಲ್ಲಿ ನಮ್ಮನ್ನು ಹಿಂಬಾಲಿಸಿ ,ನಮ್ಮ ಮನೆಯ ಮುಂದೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆವೊಡ್ಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.