ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!

ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು ಬದಲಾಯಿಸಿಕೊಂಡು, ಅದೇ ರೀತಿ ಕಾರ್ಯನಿರ್ವಹಿಸುವ ತಂತ್ರಾಂಶಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ವರದಿ ಸ್ವೀಕರಿಸಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

2009 ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅನುಸಾರ ಎಂಇಐಟಿ ಕೆಲವು ಆಪ್‌ಗಳನ್ನು ನಿರ್ಬಂಧಿಸಿತ್ತು. ಅದರಂತೆ, ಐಟಿ ಕಾಯಿದೆ 2000 ರ ಸೆಕ್ಷನ್ 69A ಅಡಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವ ಬಗ್ಗೆ ಗೂಗಲ್​ ಪ್ಲೇ ಸ್ಟೋರ್​ ಮತ್ತು ಆಪಲ್​ ಸ್ಟೋರ್​ ಸೇರಿದಂತೆ ಹಲವು ಅಪ್ಲಿಕೇಶನ್ ಸ್ಟೋರ್‌ಗಳಿಗೆ ನಿರ್ಬಂಧಿಸುವ ನಿರ್ದೇಶನಗಳನ್ನು ಸಹ ನೀಡಲಾಯಿತು.

ಆದರೆ ಇತ್ತೀಚೆಗೆ ಒಂದು ಮಾಧ್ಯಮ ವರದಿಯಲ್ಲಿ ಪಬ್ಜಿ ಗೇಮಿಂಗ್​ಗಾಗಿ ತಾಯಿಯನ್ನು ಕೊಂದ ಸುದ್ದಿ ಪ್ರಸಾರವಾಗಿತ್ತು. ಇದರ ಬಗ್ಗೆ ತನಿಖೆಯನ್ನೂ ಕೈಗೊಳ್ಳಲಾಗಿದೆ. ಆದರೆ, ಪಬ್ಜಿ ಗೇಮಿಂಗ್ ಅಪ್ಲಿಕೇಶನ್ ಅನ್ನು 2020 ರಲ್ಲಿ ಎಂಇಐಟಿ ನಿರ್ಬಂಧಿಸಿದೆ. ಅಂದಿನಿಂದ ಪಬ್ಜಿ ಗೇಮ್ ಭಾರತದಲ್ಲಿ ಲಭ್ಯವಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ. ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವರು ಈ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದಿದ್ದಾರೆ.

Leave A Reply

Your email address will not be published.