ಬೊಮ್ಮಾಯಿ ಸರ್ಕಾರದಿಂದ ಹೊಸ ಮನೆ ಖರೀದಿದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಿನ್ನೆ ನಡೆದಿದ್ದು, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ವೇಳೆ, ವಸತಿ ಯೋಜನೆ ಕುರಿತು ಮಾತನಾಡಿದ್ದು, ಗೃಹಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಲಕ್ಷ ಮನೆ ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ವಸತಿಗೃಹಗಳ ಬೆಲೆ ಒಂದು ಲಕ್ಷ ಇಳಿಕೆ ಮಾಡಲಾಗಿದೆ. ಮನೆ ಫ್ಲಾಟ್ ಗಳ ಬೆಲೆಯನ್ನು 15 ಲಕ್ಷ ರೂ.ನಿಂದ 14 ಲಕ್ಷ ರೂ.ಗೆ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.

ಈಗಾಗಲೇ 8000 ಮನೆಗಳನ್ನ ಕಟ್ಟಿದ್ದೇವೆ. 6000 ಮನೆಗಳಿಗೆ ಈಗಾಗಲೇ ಹಣ ಕಟ್ಟಿದ್ದಾರೆ. ಡಬಲ್ ಬೆಡ್ ರೂಂ ಹಣ 14 ಲಕ್ಷಕ್ಕೆ ಇಳಿಸಿದ್ದೇವೆ. ಮೊದಲು 15 ಲಕ್ಷ ಹಣ ನಿಗದಿ ಮಾಡಲಾಗಿತ್ತು ಎಂದು ಹೇಳಿದರು.

ಒಟ್ಟು 46,499 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಲಾಗುತ್ತದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಸಬ್ಸಿಡಿ ಕುರಿತು ಮಾತನಾಡಿದ ಅವರು, ಸಿಂಗಲ್ ಬೆಡ್ ರೂಂಗೆ ಸಬ್ಸಿಡಿ ಇದ್ದು, ಡಬಲ್ ಬೆಡ್ ರೂಂಗೆ ಸಬ್ಸಿಡಿ ಇಲ್ಲ ಎಂದು ಹೇಳಿದ್ದಾರೆ.

Leave A Reply