ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗ, ಈಗ ಪೊಲೀಸರ ಅತಿಥಿ | ಕಾರಣ ಏನು ಗೊತ್ತೇ?

ದುಡ್ಡಿಗಾಗಿ ಹೆತ್ತ ತಾಯಿಯೆಂಬುದನ್ನು ಕೂಡ ಲೆಕ್ಕಿಸದೆ, ಕೇವಲ ಹಣಕ್ಕಾಗಿ ಜಗಳ ಮಾಡಿ ತಾಯಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಇಂಥ ಮಕ್ಕಳೂ ಇದ್ದಾರಾ? ಹೆತ್ತ ತಾಯಿಯನ್ನೇ ಕೊಲ್ಲುವ ಅಷ್ಟು ಕ್ರೂರ ಜನರು ಕೂಡ ಇದ್ದಾರೆ ಎಂದರೆ ನಂಬಲು ಅಸಾಧ್ಯ. ಈಗ ಇತನು ಪೊಲೀಸರ ಅತಿಥಿ ಆಗಿರುವ ಘಟನೆ ತಾಲ್ಲೂಕಿನ ಹಚ್ಚಡ ಮನೆ ಗ್ರಾಮದಲ್ಲಿ ನಡೆದಿದೆ.

ಇವನು ತಾಯಿಯನ್ನು ಕೊಂದು ನಂತರ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅಂತ್ಯಸಂಸ್ಕಾರ ಕೂಡ ಮಾಡಿ ಕೊಲೆಯನ್ನು ಮುಚ್ಚಿ ಹಾಕುವ ಯತ್ನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿಯನ್ನು ಕೊಲೆ ಮಾಡಿದ ಆರೋಪಿ ಬಸವರಾಜು ಎಂದು ಪೊಲೀಸರು ತಿಳಿಸಿದ್ದು, ಆತನನ್ನು ಈಗಾಗಲೇ ಬಂಧಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪ್ರಕರಣದ ಹಿನ್ನೆಲೆ: ಹಚ್ಚಡಮನೆ ಎಂಬ ಗ್ರಾಮದ ಲತಾ (55) ಮತ್ತು ಅವರ ಪುತ್ರ ಬಸವರಾಜು ಅವರ ನಡುವೆ ಜುಲೈ 18ರಂದು ಮಧ್ಯಾಹ್ನ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದೆ. ಕುಡಿತದ ಚಟ ಹೊಂದಿದ್ದ ಮಗ ಬಸವರಾಜ್ ಹಣಕ್ಕಾಗಿ ಜಗಳ ಆರಂಭಿಸಿದ್ದಾನೆ.
ಕೂಲಿ ಕೆಲಸ ಮಾಡಿ ಜೀವನ ಸಾಗುತ್ತಿದ್ದ ತಾಯಿಗೆ ಒಬ್ಬನೇ ಮಗನಾದ ಈತ, ಕೆಲಸ ಮಾಡದೇ ನಿತ್ಯವೂ ಕಿರುಕುಳ ನೀಡುತ್ತಿದ್ದ. ಅಂದು ಕೂಡ ಜಗಳ ಮಾಡಿದ್ದು, ಹಣವನ್ನು ಕೊಡಲು ನಿರಾಕರಿಸಿದ ಕಾರಣ ಬಸವರಾಜು ರಾಡ್‌ನಿಂದ ಲತಾ ಅವರ ತಲೆಗೆ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.

ಈತ ಕೊಲೆ ಪ್ರಕರಣ ಮುಚ್ಚಿ ಹಾಕಲು ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲು ಡೀಸೆಲ್ ಸುರಿದು ಮನೆಯಲ್ಲೇ ತಾಯಿಗೆ ಬೆಂಕಿ ಹಚ್ಚಿದ್ದು, ಅರೆಬರೆ ಸುಟ್ಟ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಪೂರ್ಣ ಸುಟ್ಟು ಹಾಕಲಾಗಿದೆ. ಗ್ರಾಮದ ಕೆಲವರಿಗೆ ಈ ವಿಷಯ ತಿಳಿದಿದ್ದರೂ ಅವರು ಪೊಲೀಸರಿಗೆ ಮಾಹಿತಿ ನೀಡದೆ ತಾಯಿ ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂಬ ಮಗನ ನಾಟಕಕ್ಕೆ ಸಹಕಾರ ನೀಡಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಬಸವರಾಜುನನ್ನು ಬೇಲೂರು ಸಮೀಪದ ಅವರ ಸಂಬಂಧಿಕರ ಮನೆಯಲ್ಲಿ ಬಂಧಿಸಿದ್ದಾರೆ.

error: Content is protected !!
Scroll to Top
%d bloggers like this: