ಮೋದಿ ಉದ್ಘಾಟನೆ ಮಾಡಿದ ಒಂದೇ ವಾರದಲ್ಲಿ ಕುಸಿದ ಹೆದ್ದಾರಿ | ಹರಿಹಾಯ್ದ ಪ್ರತಿಪಕ್ಷಗಳು

ಸರಕಾರ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂಬುದಕ್ಕೆ ಇದೊಂದು ಹೊಸ ನಿದರ್ಶನ. ಹೌದು ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಹೆದ್ದಾರಿಯೊಂದು ಕುಸಿದು ಬಿದ್ದಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಇದು.

ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಈ ಹೆದ್ದಾರಿಯು ಜಾಲ್‌ನ್ ತೆಹಸೀಲ್‌ಗೆ ಸೇರಿದ ಚಿರಿಯಾ ಸಾಲೆಮ್‌ಪುರ್ ಎಂಬಲ್ಲಿ ಕುಸಿದಿದೆ. ಈ ಸಂಬಂಧ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ವಿಡಿಯೋ ಟ್ವೀಟ್ ಮಾಡಿ, ಹಾಳಾಗಿರುವ ರಸ್ತೆಯ ಭಾಗವನ್ನು ಜೆಸಿಬಿ ಬಳಸಿ ರಿಪೇರಿ ಕೆಲಸ ನಡೆಸುತ್ತಿರುವುದನ್ನು ಜನತೆಗೆ ತೋರಿಸಿದೆ. ‘ಬುಂದೇಲ್ ಖಂಡ್ ಎಕ್ಸ್‌ಪ್ರೆಸ್‌ ಗುಣಮಟ್ಟ ಎಂಥದ್ದು ಎನ್ನುವುದನ್ನು ಮಳೆ ತೋರಿಸಿಕೊಟ್ಟಿದೆ. ಬಿಜೆಪಿ ಜನರನ್ನು ದಿಕ್ಕುತಪ್ಪಿಸುತ್ತಿದೆ’ ಎಂದು ಸಮಾಜವಾದಿ ಪಕ್ಷ ಕಠುವಾಗಿ ಟ್ವೀಟ್ ಮಾಡಿದೆ.

ಜುಲೈ 16ರಂದು ಪ್ರಧಾನಿ ನರೇಂದ್ರ ಮೋದಿ ‘ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌’ಗೆ ಚಾಲನೆ ನೀಡಿದ್ದರು. ಫೆಬ್ರುವರಿ 29, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕೇವಲ 28 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. 296 ಕಿಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉ ಪ್ರದೇಶದ 7 ಜಿಲ್ಲೆಗಳನ್ನು ಹಾದು ಹೋಗುತ್ತದೆ. ಚಿತ್ರಕೂಟ, ಬಂಡಾ, ಮಹೋಬಾ, ಹಮೀರ್‌ಪು‌, ಜಲೌನ್, ಔರಿಯಾ ಮತ್ತು ಇಟಾ ಜಿಲ್ಲೆಗಳಿಗೆ ಈ ಹೆದ್ದಾರಿಯು ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿಯನ್ನು ತ 14,850 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ರಸ್ತೆ ಕುಸಿದಿರುವ ಬಗ್ಗೆ ವ್ಯಂಗ್ಯವಾಡಿರುವ ಆಮ್ ‘ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿಗೆ ಈ ಹೆದ್ದಾರಿ ಕನ್ನಡಿ ಹಿಡಿದಿದೆ. ಒಂದು ವಾರ ಕೂಡಾ ಈ ರಸ್ತೆ ಸುಸ್ಥಿತಿಯಲ್ಲಿ ಇರಲಿಲ್ಲ’ ಎಂದು ಹೇಳಿದೆ. ಹಾಳಾಗಿರುವ ರಸ್ತೆಯಲ್ಲಿ ಕಾರ್ ಒಂದು ಸಿಲುಕಿ, ಜಖಂಗೊಂಡ ಕುರಿತು ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಈ ನಡುವೆ ಬುಂದೇಲ್‌ಖಂಡ್ ಹೆದ್ದಾರಿ ಕುಸಿದಿರುವ ದೃಶ್ಯಗಳವಿರುವ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Leave A Reply

Your email address will not be published.