ಅಬ್ಬಬ್ಬಾ “ಆಗಸ್ಟ್ ” ತಿಂಗಳಲ್ಲಿ ಬ್ಯಾಂಕ್ ಗಳಿಗೆ ಇಷ್ಟೊಂದು ರಜೆ | ಬ್ಯಾಂಕ್ ಗೆ ಹೋಗೋ ಮುನ್ನ ಕ್ಯಾಲೆಂಡರ್ ಚೆಕ್ ಮಾಡೋದು ಉತ್ತಮ

ಆಗಸ್ಟ್ ತಿಂಗಳು ಅಂದರೆ ಹಬ್ಬಗಳ ಸೀಸನ್. ಹಾಗಾಗಿ ಬ್ಯಾಂಕ್ ಗಳಿಗೆ ರಜೆ ಸಾಲಾಗಿ ಇರುತ್ತದೆ. ಹಾಗಾಗಿ ನಿಮ್ಮ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಯಾವುದೇ ಕೆಲಸ ಮಾಡಲು ಇದ್ದರೆ ಈ ಸುದ್ದಿ ಖಂಡಿತ ಓದಿ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ರಜಾ ಪಟ್ಟಿಯಲ್ಲಿ, ಆಗಸ್ಟ್ ತಿಂಗಳು ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಗಮನಾರ್ಹವಾಗಿ ರಜಾ ದಿನಗಳ ಪಟ್ಟಿಯನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ.

ಇದು ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದನ್ನು ಒಳಗೊಂಡಿರುತ್ತದೆ. ಅಂದರೆ, ರಾಷ್ಟ್ರೀಯ ರಜಾ ದಿನಗಳ ಜೊತೆಗೆ, ಕೆಲವು ರಾಜ್ಯಗಳ ನಿರ್ದಿಷ್ಟ ರಜಾ ದಿನಗಳೂ ಇದರಲ್ಲಿವೆ. ಇದರಲ್ಲಿ ಎಲ್ಲಾ ಭಾನುವಾರಗಳು ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಕೂಡಾ ಸೇರಿವೆ.

ಆಗಸ್ಟ್ ತಿಂಗಳಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸ್ವಾತಂತ್ರ್ಯ ದಿನ, ರಕ್ಷಾಬಂಧನ್, ಜನ್ಮಾಷ್ಟಮಿ ಇದರ ಜೊತೆಗೆ ಶನಿವಾರ ಭಾನುವಾರದ ರಜೆಯೂ ಇದರಲ್ಲಿ ಒಳಗೊಂಡಿದೆ. ಹಾಗಾಗಿ ನಿಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವುದಿದ್ದರೆ, ಮೊದಲೇ ಹಣಕಾಸಿನ ಯೋಜನೆಗಳಿಗೆ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ.

ಆಗಸ್ಟ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.

1 ಆಗಸ್ಟ್ 2022 – ದ್ರುಪಕಾ ಶೀ-ಜಿ ಹಬ್ಬ (ಗ್ಯಾಂಗ್ಟಾಕ್)
7 ಆಗಸ್ಟ್ 2022 – ಭಾನುವಾರ
8 ಆಗಸ್ಟ್ 2022 – ಮೊಹರಂ(ಜಮ್ಮು ಮತ್ತು ಶ್ರೀನಗರ)
9 ಆಗಸ್ಟ್ 2022 – ಚಂಡೀಗಢ, ಗುವಾಹಟಿ, ಇಂಫಾಲ್, ಡೆಹ್ರಾಡೂನ್, ಶಿಮ್ಲಾ, ತಿರುವನಂತಪುರಂ, ಭುವನೇಶ್ವರ್, ಜಮ್ಮು, ಪಣಜಿ, ಶಿಲ್ಲಾಂಗ್ ಹೊರತುಪಡಿಸಿ ಇಡೀ ದೇಶದಲ್ಲಿ ರಜೆ ಇರುತ್ತದೆ.
11 ಆಗಸ್ಟ್ 2022 – ರಕ್ಷಾಬಂಧನ್
13 ಆಗಸ್ಟ್ 2022 – ಎರಡನೇ ಶನಿವಾರ
14 ಆಗಸ್ಟ್ 2022-ಭಾನುವಾರ
15 ಆಗಸ್ಟ್ 2022-ಸ್ವಾತಂತ್ರ್ಯ ದಿನ
16 ಆಗಸ್ಟ್ 2022 – ಪಾರ್ಸಿ ಹೊಸ ವರ್ಷ(ಮುಂಬೈ ಮತ್ತು ನಾಗುರದಲ್ಲಿ ರಜೆ)
18 ಆಗಸ್ಟ್ 2022 – ಜನ್ಮಾಷ್ಟಮಿ
21 ಆಗಸ್ಟ್ 2022-ಭಾನುವಾರ
28 ಆಗಸ್ಟ್ 2022-ಭಾನುವಾರ
ಆಗಸ್ಟ್ 31, 2022 – ಗಣೇಶ ಚತುರ್ಥಿ(ಗುಜರಾತ್, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)

Leave A Reply

Your email address will not be published.