ತಂದೆ ತಾಯಿಯಿಂದ 13 ತಿಂಗಳ ಕಂದನನ್ನು ಬೇರೆ ವಿಮಾನಕ್ಕೆ ಶಿಫ್ಟ್ ಮಾಡಿದ ಏರ್ ಲೈನ್ಸ್ ಕಂಪನಿ | ಕಾರಣ ತಿಳಿದು ದಂಗಾದ ದಂಪತಿ!!!

ಏರೋಪ್ಲೇನ್ ಪ್ರಯಾಣ ಯಾರಿಗೆ ಇಷ್ಟ ಇಲ್ಲ ಹೇಳಿ. ದುಬಾರಿಯಾದರೂ ಒಂದಲ್ಲ ಒಂದು ಸಲ ವಿಮಾನ ಹತ್ತಬೇಕೆನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈ
ಏರ್‌ಲೈನ್ ಸಂಸ್ಥೆಗಳು ಕೆಲವೊಮ್ಮೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಸುಖಪ್ರಯಾಣ ಎನ್ನುವುದು ಕೆಲವೊಮ್ಮೆ ಎಷ್ಟೇ ದುಡ್ಡು ಕೊಟ್ಟರೂ ಸಿಗುವುದಿಲ್ಲ. ಏಕೆಂದರೆ ಕೆಲವೊಮ್ಮೆ ಏರ್ ಲೈನ್ಸ್ ಮಾಡುವ ಅವಾಂತರ ಅಷ್ಟಿಷ್ಟಲ್ಲ.

ದುಬಾರಿ ಪ್ರಯಾಣದ ವೆಚ್ಚ ನೀಡಿದ ನಂತರವೂ ಕೆಲವು ವಿಮಾನಗಳಲ್ಲಿ ಸುಖ ಪ್ರಯಾಣ ಮರೀಚಿಕೆಯಾಗಿರುತ್ತದೆ. ಇತ್ತೀಚೆಗಷ್ಟೇ ಇಂಡಿಗೋ ಏರ್‌ಲೈನ್ಸ್ ವಿಶೇಷಚೇತನ ಮಗುವಿರುವ ದಂಪತಿಯನ್ನು ವಿಮಾನದಲ್ಲಿ ಪ್ರಯಾಣಿಸಲು ಬಿಡದೇ ಭಾರೀ ವಿವಾದ ಉಂಟು ಮಾಡಿತ್ತು. ಈಗ ಅಂಥದ್ದೇ ಒಂದು ಘಟನೆ, ಆಸ್ಟ್ರೇಲಿಯಾದ ಜೋಡಿಗೆ ಆಗಿದೆ. ವಿಮಾನ ಯಾನ ಸಂಸ್ಥೆಯ ಅವ್ಯವಸ್ಥೆಯಿಂದ ಈ ದಂಪತಿ ಸಿಟ್ಟುಗೊಂಡಿದ್ದಾರೆ. ಹಾಗೂ ಈ ಜೋಡಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಟೆಫನಿ ಮತ್ತು ಆಂಡ್ರ ಬ್ರಹಾಮ್ ದಂಪತಿ ತಮ್ಮ 13 ತಿಂಗಳ ಮಗುವಿನೊಂದಿಗೆ ಯುರೋಪಿನ ಮೂಲಕ ಪ್ರಯಾಣ ಬೆಳೆಸುತ್ತಿದ್ದರು. ಕ್ವಾಂಟಾಸ್ ಏರ್‌ಲೈನ್‌ನಿಂದ ಆಸ್ಟ್ರೇಲಿಯಾಕ್ಕೆ ಅವರ ಪ್ರಯಾಣವನ್ನು ಮತ್ತೆ ನಿಗದಿಪಡಿಸುವ ಮೊದಲು ದಂಪತಿ ತಮ್ಮ ಕಂದನೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ಕ್ವಾಂಟಾಸ್ ಏರ್‌ಲೈನ್‌ನಿಂದ ಅವರ ಪ್ರಯಾಣ ಮರು ನಿಗದಿಯಾದಾಗ ವಿಮಾನಯಾನ ಸಂಸ್ಥೆ ಅವರ 13 ತಿಂಗಳ ಮಗುವಿಗೆ ಬೇರೆಯದೇ ವಿಮಾನದಲ್ಲಿ ಸೀಟು ಬುಕ್ ಮಾಡಿದೆ. ಇದನ್ನು ನೋಡಿ ದಂಪತಿಗಳು ದಂಗಾಗಿದ್ದಾರೆ.

ಹೆತ್ತವರಿಂದ 13 ತಿಂಗಳ ಹೆಣ್ಣು ಮಗುವಿನ ಜೊತೆ ಪೋಷಕರು ಬುಕ್ ಮಾಡಿದ್ದ ವಿಮಾನದ ಬದಲು ಬೇರೆ ವಿಮಾನದಲ್ಲಿ ಮಗುವಿಗೆ ಸೀಟು ಕಾಯ್ದಿರಿಸಲಾಗಿತ್ತು. ಇದು ತಿಳಿಯುತಿದ್ದಂತೆ ಮಗುವಿನ ಪೋಷಕರು ಸಿಟ್ಟುಗೊಂಡರು. ಮಗುವನ್ನು ಬೇರೆ ವಿಮಾನದಲ್ಲಿ ಕಳಿಸಲು ಅವರು ಒಪ್ಪಲಿಲ್ಲ. ಹಾಗಾಗಿ ಅವರನ್ನು 21 ಗಂಟೆಗಳ ಕಾಲ ಅಲ್ಲೇ ನಿಲ್ಲಿಸಲಾಯಿತು. ಜೊತೆಗೆ ಕ್ವಾಂಟಾಸ್‌ನ ಕಸ್ಟಮರ್ ಸಪೋರ್ಟ್ ತಂಡಕ್ಕೆ 55 ಬಾರಿ ಕರೆ ಮಾಡಿದರೂ ಸಮಸ್ಯೆ ಮಾತ್ರ ಪರಿಹಾರವಾಗಲಿಲ್ಲ. ಅಲ್ಲದೇ ಅವರು ನಾವು ಏನೂ ತಪ್ಪು ಮಾಡಿಲ್ಲ. ನಾವು ಆಕೆಗೆ ಟಿಕೆಟ್ ಬುಕ್ ಮಾಡಿದ್ದೇವೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಯತ್ನಿಸಿದರೆ ಹೊರತು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ. ಅಷ್ಟು ಮಾತ್ರವಲ್ಲದೇ ಸಮಸ್ಯೆಯ ಹೊಣೆ ಹೊತ್ತಲು ಕೂಡಾ ಅವರು ತಯಾರಿರಲಿಲ್ಲ. ಇದರಿಂದಾಗಿ ನಾವು ಬಹುತೇಕ 20 ಗಂಟೆಗೂ ಹೆಚ್ವು ಕಾಲ ಅಲ್ಲೇ ಕಳೆದೆವು.

55 ಪ್ರತ್ಯೇಕ ಫೋನ್ ಕರೆಗಳ ನಂತರ ಅವರು ಅಂತಿಮವಾಗಿ ನಮಗೆ ತೆರಳಲು ಹೊಸ ವಿಮಾನಗಳನ್ನು ಕಾಯ್ದಿರಿಸಿದರು. ಆದರೆ ನಾವು ನಮ್ಮ ಮನೆಗೆ ತೆರಳಬೇಕಿದ್ದ ನಿಗದಿತ ದಿನಕ್ಕಿಂತ 12 ದಿನಗಳ ನಂತರ ಅವರು ನಮಗೆ ಬೇರೆ ವಿಮಾನದ ಟಿಕೆಟ್ ಬುಕ್ ಮಾಡಿದರು. ಇದರಿಂದ ನಾವು ರೋಮ್‌ನಲ್ಲಿ ಎರಡು ವಾರಗಳ ಉಳಿಯಲು ತುಂಬಾ ಖರ್ಚು ಮಾಡಬೇಕಾಯಿತು ಎಂದು ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಡೈಲಿ ಮೇಲ್ ಆಸ್ಟ್ರೇಲಿಯಾ ವರದಿ ಮಾಡಿದ್ದು, ನಂತರ ತನ್ನ ತಪ್ಪಿನ ಅರಿವಾಗಿ Qantas ಏರ್‌ಲೈನ್ಸ್ ಕ್ಷಮೆಯಾಚಿಸಿದೆ. ಅಲ್ಲದೇ ಕುಟುಂಬಕ್ಕೆ ಹಣ ಮರು ಪಾವತಿ ಮಾಡುತ್ತೇವೆ ಎಂದು ಕೂಡಾ ಹೇಳಿದೆ.

Leave A Reply

Your email address will not be published.