BREAKING NEWS | ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಭರ್ಜರಿ ಗೆಲುವು | ಗಿರಿ ಶಿಖರಗಳ ತಪ್ಪಲಿನಿಂದ ಆಕಾಶಕ್ಕೆ ಕೈ ಚಾಚಿ ನಿಂತ ಆದಿವಾಸಿ!

ರಾಷ್ಟ್ರಪತಿ ಚುನಾವಣೆ ಸೋಮವಾರ ನಡೆದಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಅಭೂತಪೂರ್ವ ಗೆಲುವು ಕಂಡಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಅತೀ ದೊಡ್ಡ ಹುದ್ದೆಯ ಗೌರವವನ್ನು ಹೆಚ್ಚಿಸಿಕೊಂಡಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆದಿವಾಸಿಯೊಬ್ಬರು ಪರಮೋಚ್ಛ ಸ್ಥಾನದಲ್ಲಿ ಅಲಂಕೃತರಾಗಿದ್ದಾರೆ. ಇದು ಮಹಿಳೆಯರಿಗೆ ಮತ್ತು ದಲಿತ, ಹಿಂದುಳಿದ ವರ್ಗದವರಿಗೆ ಮತ್ತಷ್ಟು ಭದ್ರತೆ ಆಶಾಭಾವನೆಯನ್ನು ಸಂವಿಧಾನ ನೀಡಿದೆ ಎಂದು ಹೇಳಬಹುದು. ರಾಷ್ಟ್ರಪತಿ ಚುನಾವಣೆ ಸೋಮವಾರ ನಡೆದಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭರ್ಜರಿ ಗೆಲುವು ಕಂಡಿದ್ದಾರೆ.

ಇಂದು ಬೆಳಿಗ್ಗೆ 11 ಕ್ಕೆ ಸಂಸತ್ ಭವನದ 63ನೇ ಕೊಠಡಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಿ.ಸಿ ಮೋದಿ ಅವರು ಮತ ಎಣಿಕೆ ಪ್ರಕ್ರಿಯೆ ಮಾಡಿದ್ದರು. ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಹಾಗೂ ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಟಿಎಂಸಿ ನಾಯಕರಾಗಿದ್ದ ಯಶವಂತ್ ಸಿನ್ಹಾ ಅವರು ಕಣದಲ್ಲಿದ್ದರು.

ದ್ರೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.

ನೋವಲ್ಲೇ ಅರಳಿದ ಕಮಲ ದ್ರೌಪದಿ ಮುರ್ಮು

ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್:
ಸಮುದಾಯದಲ್ಲಿ ಜನಿಸಿರುವ ಮುರ್ಮು 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್ ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.

64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ದ್ರೌಪದಿ ಮುರ್ಮು ಜಾರ್ಖಂಡ್‌ನ ಒಂಬತ್ತನೇ ಗವರ್ನರ್ ಆಗಿದ್ದ ಭಾರತೀಯ ರಾಜಕಾರಣಿ. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದಾರೆ.

1997 ರಲ್ಲಿ, ಅವರು ರಾಯರಂಗಪುರ ನಗರ ಪಂಚಾಯತ್‌ನಲ್ಲಿ ಮೊದಲ ಬಾರಿಗೆ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಜಯ ಕಂಡಿದ್ದರು. 2000ರಲ್ಲಿ ಶಾಸಕ ಸ್ಥಾನದ ಟಿಕೆಟ್ ಪಡೆದು ಅದರಲ್ಲೂ ಗೆಲುವು ಕಂಡ ಮಂತ್ರಿಯೂ ಆಗಿದ್ದರು. 2009ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗ್ರಾಮಕ್ಕೆ ಮರಳಿದ ದ್ರೌಪದಿ ಮುರ್ಮು ಅವರಿಗೆ ಅದಕ್ಕಿಂತ ದೊಡ್ಡ ಶಾಕ್ ಕಾದಿತ್ತು. ಹಿರಿಯ ಮಗ ಅಪಘಾತದಲ್ಲಿ ಸಾವು ಕಂಡ ಸುದ್ದಿ ಕೇಳಿ ಖಿನ್ನತೆಗೆ ಒಳಗಾಗಿದ್ದ ಅವರು. 2013ರಲ್ಲಿ ತಮ್ಮ 2ನೇ ಮಗನನ್ನೂ ಅಪಘಾತದಲ್ಲಿ ಕಳೆದುಕೊಂಡರು. ಇದರ ಬೆನ್ನಲ್ಲಿಯೇ 2014ರಲ್ಲಿ ಪತಿಯ ಸಾವನ್ನೂ ನೋಡಿದರು. ಸಂಪೂರ್ಣ ಕುಸಿದು ಹೋಗಿದ್ದ ದ್ರೌಪದಿ ಮುರ್ಮು ಬಳಿಕ ಸಮಾಜಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದರು.

ದ್ರೌಪದಿ ಮುರ್ಮು ಅವರು ಓಡಿಶಾ ಮೂಲದವರು. 1958, ಜೂನ್ 20ರಂದು ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಎಂಬ ಬುಡಕಟ್ಟು ಸಮುದಾಯದ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಮತ್ತು ಅಜ್ಜ ಪಂಚಾಯತ್ ರಾಜ್ ಯೋಜನೆಯಡಿಯಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು.

ದೌಪದಿ ಮುರ್ಮು ವಿದ್ಯಾಭ್ಯಾಸ

ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದ್ರೌಪದಿ ಮುರ್ಮು ಅವರು ಬಿಎ ಪದವಿ ಪಡೆದಿದ್ದಾರೆ. ಇವರು ಪದವಿ ನಂತರ ಸಹಾಯಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರ ಪತಿ ಶ್ಯಾಮ್ ಚರಣ್ ಮುರ್ಮು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ದುರದೃಷ್ಟವಶಾತ್ ಇಬ್ಬರೂ ಮೃತಪಟ್ಟಿದ್ದಾರೆ. ಬಳಿಕ ಪತಿಯನ್ನೂ ಕಳೆದುಕೊಂಡ ಇವರು. ಇದೀಗ ಪುತ್ರಿ ಜೊತೆ ವಾಸಿಸುತ್ತಿದ್ದಾರೆ.

Leave A Reply

Your email address will not be published.