ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ? ಆಯ್ಕೆ ಹೇಗೆ ? ಸಂಪೂರ್ಣ ಮಾಹಿತಿ ಇಲ್ಲಿದೆ!

ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ರಾಷ್ಟ್ರಪತಿ ಚುನಾವಣೆ ನಿರ್ಣಾಯಕ ಹಂತ ತಲುಪಿದೆ. ಜುಲೈ 24ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಜುಲೈ 25 ರಂದು ಹೊಸ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಲಿದ್ದಾರೆ.

ಆಡಳಿತರೂಡ ಬಿಜೆಪಿ ಪಕ್ಷ ಮತ್ತು ವಿಪಕ್ಷಗಳು ಈಗಾಗಲೇ ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ನೇತೃತ್ವದ ಎನ್‌ಡಿಎ, ಒಡಿಶಾ ಮೂಲದ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನ ಆಯ್ಕೆ ಮಾಡಿದೆ. ಇನ್ನೂ ವಿಪಕ್ಷಗಳು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನ ಜಂಟಿ ಅಭ್ಯರ್ಥಿಯಾಗಿ ಘೋಷಿಸಿವೆ.

ಇನ್ನೂ ರಾಷ್ಟ್ರಪತಿಗಳ ಚುನಾವಣೆ ಹೇಗೆ ನಡೆಯುತ್ತದೆ ? ರಾಷ್ಟ್ರಪತಿಗಳನ್ನು ಯಾರು ಆಯ್ಕೆ ಮಾಡುತ್ತಾರೆ? ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆಯಾಗಿರುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ ಸ್ಥಾನ ಕೂಡಾ ಇವರೇ ಆಗಿರುತ್ತಾರೆ. ರಾಷ್ಟ್ರಪತಿಗಳೂ ಸಂವಿದಾನದ ಮುಖ್ಯಸ್ಥರೂ, ಕಾರ್ಯಾಂಗದ ಮುಖ್ಯಸ್ಥರೂ, ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು, ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗ. ಅಲ್ಲದೆ ಸಂವಿಧಾನದ ರಕ್ಷಕರು ಕೂಡಾ. ಭಾರತೀಯ ಸಂವಿಧಾನದ 52ನೇ ಪರಿಚ್ಛೇದದಲ್ಲಿ ರಾಷ್ಟ್ರಪತಿ ಪದವಿಯ ಬಗ್ಗೆ ತಿಳಿಸಲಾಗಿದೆ. ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಭಾರತದ ಅಧ್ಯಕ್ಷರಾಗಿರುತ್ತಾರೆ.

ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರು ಮತದಾನ ಮಾಡಿ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ.

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವವರು ಮುಖ್ಯವಾಗಿ ಭಾರತದ ಪ್ರಜೆಯಾಗಿರಬೇಕು. ಯಾವುದೇ ಸರಕಾರಿ ಉದ್ಯೋಗದಲ್ಲಿ ಇರಬಾರದು‌ 35 ವರ್ಷ ವಯಸ್ಸು ದಾಟಿರಬೇಕು. ಲೋಕಸಭೆಗೆ ಸ್ಪರ್ಧಿಸುವ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಹಾಲಿ ರಾಷ್ಟ್ರಪತಿಗಳ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನವೇ, ಹೊಸ ರಾಷ್ಟ್ರಪತಿ ಆಯ್ಕೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಕೇಂದ್ರ ಚುನಾವಣೆ ಆಯೋಗವು ಈ ದಿನಾಂಕವನ್ನು ನಿಗದಿ ಮಾಡುತ್ತದೆ.

ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವಾಗ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ 50 ಜನರು ಮತದಾರರು ಸೂಚಕರಾಗಿ, ಇನ್ನೂ 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ. ಇನ್ನೂ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ.

ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಪ್ರಸ್ತುತ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ. ಇಲ್ಲಿ ಪ್ರತಿ ಸಂಸದರ ಮತ ಮೌಲ್ಯ 708 ಆಗಿದೆ. ಇನ್ನೂ ಶಾಸಕರ ಮತ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ?

ಮೊದಲು ಮತಗಳನ್ನು ವಿಂಗಡಿಸಲಾಗುತ್ತದೆ ಮತ್ತು ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ. ಸಂಸದರು ಅಭ್ಯರ್ಥಿಗಳಿಗೆ ತಮ್ಮ ಆದ್ಯತೆಯನ್ನು ಮತಪತ್ರದಲ್ಲಿ ಹಸಿರು ಶಾಯಿಯ ಪೆನ್ನಿನಿಂದ ಕ್ರಮಾನುಗತವಾಗಿ ಬರೆದಿರುತ್ತಾರೆ ಮತ್ತು ಶಾಸಕರು ಇದಕ್ಕಾಗಿ ಗುಲಾಬಿ ಶಾಯಿಯ ಪೆನ್ ಬಳಸಿರುತ್ತಾರೆ. ಮುರ್ಮು ಮತ್ತು ಸಿನ್ಹಾ ಅವರಿಗಾಗಿ ಎರಡು ಪ್ರತ್ಯೇಕ ಟ್ರೇಗಳನ್ನು ಇರಿಸಲಾಗುತ್ತದೆ. ಶಾಸಕರ ಮತಪತ್ರಗಳನ್ನು ಮೊದಲು ಮತ್ತು ಸಂಸದರ ಮತಪತ್ರಗಳನ್ನು ನಂತರ ವಿಂಗಡಿಸಲಾಗುತ್ತದೆ.

ಮೊದಲ ಪ್ರಾಶಸ್ತ್ರವಾಗಿ ಮುರ್ಮು ಹೆಸರನ್ನು ಬರೆದಿರುವ ಮತಪತ್ರಗಳನ್ನು ಅವರ ಟ್ರೇನಲ್ಲಿ ಇರಿಸಲಾಗುತ್ತದೆ ಮತ್ತು ಸಿನ್ಹಾ ಹೆಸರನ್ನು ಮೊದಲ ಪ್ರಾಶಸ್ತ್ರವಾಗಿ ಬರೆದಿರುವ ಮತಪತ್ರಗಳನ್ನು ಅವರ ಟ್ರೇನಲ್ಲಿ ಇರಿಸಲಾಗುತ್ತದೆ. ಪ್ರತಿ ಸಂಸದನ ಮತದ ಮೌಲ್ಯವನ್ನು 700 ಎಂದು ನಿಗದಿಗೊಳಿಸಲಾಗಿದ್ದರೆ, ಶಾಸಕರ ಮತದ ಮೌಲ್ಯವು ಅವರ ರಾಜ್ಯಗಳ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ವಿಂಗಡಣೆ ಪೂರ್ಣಗೊಂಡ ಬಳಿಕ ಮತಗಳ ಎಣಿಕೆ ಆರಂಭವಾಗುತ್ತದೆ.

ಇಲ್ಲಿ ವಿಜೇತರು ಗರಿಷ್ಠ ಮತಗಳನ್ನು ಪಡೆದಿರುವುದಿಲ್ಲ. ಆದರೆ ನಿರ್ದಿಷ್ಟ ಕೋಟಾಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುತ್ತಾರೆ. ಮಾನ್ಯವಾದ ಮತಗಳನ್ನು ಎರಡರಿಂದ ಭಾಗಿಸಿ, ಅದಕ್ಕೆ ಒಂದನ್ನು ಸೇರಿಸುವ ಮೂಲಕ ಕೋಟಾವನ್ನು ನಿರ್ಧರಿಸಲಾಗುತ್ತದೆ. ನಿಗದಿ ಕೋಟಾಕ್ಕಿಂತ ಹೆಚ್ಚಿನ ಮತಗಳನ್ನು ಪಡೆದರೆ ಮಾತ್ರ ಆ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಸಂಸತ್ ಭವನದ ಕೊಠಡಿ ಸಂಖ್ಯೆ 73ರ ಹೊರಗೆ ಮಾಧ್ಯಮಗಳಿಗಾಗಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು, ಮತಗಳ ಎಣಿಕೆ ಆರಂಭವಾದ ಬಳಿಕ ಮತದಾನದ ಟ್ರೆಂಡ್ ಕುರಿತು ಅವರಿಗೆ ಮಾಹಿತಿ ನೀಡಲಾಗುತ್ತದೆ.

Leave A Reply

Your email address will not be published.