ದೂರದ ಅಮೆರಿಕದಿಂದ ಫೇಸ್ಬುಕ್ ಫ್ರೆಂಡ್ ನ ಭೇಟಿಯಾಗಲು ಬಂದಳೊಬ್ಬಳು ಸುಂದರಿ| ಬಂದ ನಂತರ ಆ ಸ್ನೇಹಿತರೇನು ಮಾಡಿದರು ಗೊತ್ತೇ?

21 ವರ್ಷದ ಅಮೆರಿಕದ ಟಿಕ್ ಟಾಕರ್ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾ ಫ್ರೆಂಡ್ ನನ್ನು ಭೇಟಿಯಾಗಲು ಬಂದಿದ್ದಳು. ಆದರೆ ಆಕೆ ಬಂದ ನಂತರ ನಡೆದದ್ದೇ ಬೇರೆ. ಯಾವ ಉತ್ಸಾಹದಿಂದ ತನ್ನ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದಳೋ, ಆದರೆ ಈಗ ಪಶ್ಚಾತ್ತಾಪ ಪಡುವಂತಹ ಪರಿಸ್ಥಿತಿ ತಂದಿದ್ದಾಳೆ.

ಅಮೆರಿಕದ ಟಿಕ್‌ಟಾಕರ್ ಸೋಶಿಯಲ್ ಮೀಡಿಯಾ ಫ್ರೆಂಡ್ ಭೇಟಿಯಾಗಲು ಬಂದಿದ್ದರು, ಆದರೆ ಅದೇ ಸ್ನೇಹಿತರೆಲ್ಲಾ ಸೇರಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಲಾಹೋರ್‌ನಿಂದ ಸುಮಾರು 500 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಪ್ರಕರಣವು ಜುಲೈ 17 ರಂದು ನಡೆದಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಮಾಹಿತಿಯ ಪ್ರಕಾರ, ಸಂತ್ರಸ್ತೆ ಅಮೇರಿಕನ್ ಮಹಿಳೆ ಬ್ಲಾಗರ್ ಮತ್ತು ಟಿಕ್ ಟಾಕರ್. ಫೇಸ್‌ಬುಕ್‌ನಲ್ಲಿ ಪೇಜ್ ಒಂದನ್ನೂ ನೋಡಿಕೊಳ್ಳುವ ಕೆಲಸ ಮಾಡುತ್ತಾಳೆ. ಸೋಷಿಯಲ್ ಮೀಡಿಯಾದ ಮೂಲಕ ಆಕೆ ಪಾಕಿಸ್ತಾನದ ಮುಜ್ಜಿಲ್ ಮತ್ತು ಅಜಾನ್ ರ ಪರಿಚಯದಿಂದ ಸ್ನೇಹಿತರಾಗುತ್ತಾರೆ. ಎಲ್ಲರೂ ಒಟ್ಟಿಗೆ ಬ್ಲಾಗ್ ಮಾಡಲು ಒಂದು ಸ್ಥಳದಲ್ಲಿ ಭೇಟಿಯಾಗಲು ಪ್ಲ್ಯಾನ್ ಮಾಡುತ್ತಾರೆ.

ನಂತರ, ಫೋರ್ಟ್ ಮುನ್ನೋದಲ್ಲಿ ಚಿತ್ರೀಕರಣದ ಯೋಜನೆಯನ್ನು ಪಾಕಿಸ್ತಾನಿ ಸ್ನೇಹಿತರಿಬ್ಬರ ಕರೆಯ ಮೇರೆಗೆ ಯೋಜನೆ ರೂಪಿಸಲಾಗುತ್ತದೆ. ಅಮೆರಿಕದ ಈ ಮಹಿಳೆ ಕಳೆದ 7 ತಿಂಗಳಿಂದ ಪ್ರವಾಸಿ ವೀಸಾದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದ್ದಾಳೆ.

ಅಮೆರಿಕದ ಮಹಿಳೆ ಮತ್ತು ಆಕೆಯ ಇಬ್ಬರು ಸ್ನೇಹಿತರು ಭಾನುವಾರ ಭೇಟಿಯಾಗಿ ಫೋರ್ಟ್ ಮನ್ರೋಗೆ ತೆರಳಿದ್ದರು ಎಂದು ಪೊಲೀಸ್ ವರದಿ ಹೇಳುತ್ತದೆ. ಅಲ್ಲಿ ಮೂವರೂ ಸೇರಿ ಬ್ಲಾಗ್ ಮಾಡಿ, ವಿಡಿಯೋ ಶೂಟ್ ಮಾಡಿದ್ದಾರೆ. ನಂತರ ಎಲ್ಲರೂ ಫೋರ್ಟ್ ಮನ್ರೋದಲ್ಲಿನ ಹೋಟೆಲ್‌ನಲ್ಲಿ ತಂಗಿದ್ದಾರೆ. ಮಹಿಳೆಯ ಪ್ರಕಾರ, ಇಬ್ಬರೂ ಅಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಲು ಘಟನೆಯ ಸಂಪೂರ್ಣ ವಿಡಿಯೋ ಕೂಡ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಮತ್ತೊಬ್ಬರನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ.

ಪೊಲೀಸರು ಅಮೆರಿಕದ ಮಹಿಳೆಯ ವೈದ್ಯಕೀಯ ತಪಾಸಣೆಯನ್ನೂ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಹಮ್ಹಾ ಶಹಬಾಜ್ ಅವರು ಘಟನೆಯ ಕುರಿತು ಮೇಲ್ವಿಚಾರಣೆ ಮಾಡಲು ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆರೋಪಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಹಾಗೂ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

error: Content is protected !!
Scroll to Top
%d bloggers like this: