ಮಂಗಳೂರು:ಬ್ಯಾಂಕ್ ಮ್ಯಾನೇಜರ್ ಎನ್ನುತ್ತಾ ಫೋನ್ ಕಾಲ್!! ಮೊಬೈಲ್ ಸ್ವಿಚ್ ಆಫ್ ಆಗಿ ತಪ್ಪಿತು ಲಕ್ಷ ಕಬಳಿಸುವ ಖತರ್ನಾಕ್ ಪ್ಲಾನ್

ಕಳೆದ ಕೆಲ ಸಮಯಗಳ ಹಿಂದೆ ಚಾಲ್ತಿಯಲ್ಲಿದ್ದ ಹುಸಿ ಫೋನ್ ಕರೆಗಳು ಮತ್ತೆ ತನ್ನ ಇರುವಿಕೆಯನ್ನು ಮತ್ತೆ ಗುರುತಿಸಿಕೊಂಡಂತಿದೆ. ಸಿಕ್ಕ ಸಿಕ್ಕ ಮೊಬೈಲ್ ನಂಬರ್ ಗಳಿಗೆ ಬ್ಯಾಂಕ್ ಮ್ಯಾನೇಜರ್, ಬ್ಯಾಂಕ್ ಸಿಬ್ಬಂದಿ ಎಂದು ಹೇಳುತ್ತಾ ಕರೆ ಮಾಡುವ ಖದೀಮರು ಬ್ಯಾಂಕ್ ಅಕೌಂಟ್ ನ ವಿವರಗಳನ್ನು ಪಡೆದು ಹಣ ವಂಚಿಸಲು ಮುಂದಾಗಿರುವುದು ತಿಳಿದು ಬಂದಿದೆ.

ಹೌದು, ಕಳೆದ ಸಂಜೆ ಮಂಗಳೂರು ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರಿಗೆ ಹೀಗೊಂದು ಫೋನ್ ಕರೆ ಬಂದಿದ್ದು, ಅತ್ತ ಕಡೆಯಿಂದ ನಯವಾದ ದನಿಯಿಂದ ಓರ್ವ “ನಾನು ಬ್ಯಾಂಕ್ ಮ್ಯಾನೇಜರ್ “ಎನ್ನುತ್ತಾ ಮಾತು ಪ್ರಾರಂಭಿಸಿದ್ದಾನೆ. ಬಳಿಕ ಹೀಗೇ ಮಾತು ಮುಂದುವರಿಸಿದ ಅನಾಮಿಕ, ಬ್ಯಾಂಕ್ ಅಕೌಂಟ್ ಬಗ್ಗೆ ಮಾತನಾಡುತ್ತಾ ಎ.ಟಿ.ಎಂ ವಿವರಗಳನ್ನು ಪಡೆಯಲು ಮುಂದಾಗಿದ್ದಾನೆ.
ಕರೆ ಸ್ವೀಕರಿಸಿದ್ದ ವ್ಯಕ್ತಿ ಅದ್ಯಾವುದೋ ಗ್ಯಾನದಲ್ಲಿ ಕೆಲವು ಡೀಟೇಲ್ಸ್ ನೀಡಿದ್ದು, ಇನ್ನೇನು ಓಟಿಪಿ ಶೇರ್ ಮಾಡಬೇಕು ಅನ್ನುವಷ್ಟರಲ್ಲಿ ಅದೃಷ್ಟವಶಾತ್ ಫೋನ್ ಬ್ಯಾಟರಿ ಸತ್ತು ಸ್ವಿಚ್ ಆಫ್ ಆಗಿದೆ. ಆನಂತರ ಕೆಲ ಗಂಟೆಗಳ ನಂತರ ಮತ್ತೆ   ಫೋನ್ ಆನ್ ಬಳಿಕ ಬ್ಯಾಂಕಿನ ವ್ಯಕ್ತಿ ಕರೆ ಮಾಡಿದ್ದ.  ಆ ಅಮಾಯಕ ವ್ಯಕ್ತಿಯ ಬಳಿ ಅವರ ಗೆಳೆಯರೊಬ್ಬರು ಇದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ ಇದೊಂದು ವಂಚನೆಯ ಫೋನ್ ಕರೆ ಎನ್ನುವುದು ಅರಿವಿಗೆ ಬಂದಿದೆ. ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ. ಕಾರಣ, ಇತ್ತೀಚೆಗೆ ತಾನೆ ಆಡಿಕೆ ಮಾರಿ ಬ್ಯಾಂಕ್ನಲ್ಲಿ ಇಟ್ಟಿದ್ದ ಲಕ್ಷಾಂತರ ದುಡ್ಡು ಪಾರಾಯಿ ಪಾಲಾಗೋದು ಕ್ಷಣಗಳಲ್ಲಿ ತಪ್ಪಿದೆ.

ಕರೆ ಮಾಡಿದ್ದ ಅನಾಮಿಕನಿಗೆ ಬ್ಯಾಂಕ್ ಬಗೆಗಿನ ಕೆಲವೊಂದು ಪ್ರಶ್ನೆಗಳನ್ನು ಇಟ್ಟಾಗ ಆತನ ನಿಜಬಣ್ಣ ಬಯಲಾಗಿತ್ತು. ಎಲ್ಲೋ ಒಂದೆಡೆ ಕುಳಿತು ಈ ರೀತಿಯ ಮೋಸದ ಗುಂಡಿ ತೋಡುವ ಖದೀಮರಿಗೆ ಸರಿಯಾಗಿ ಮಂಗಳಾರತಿ ಮಾಡಿಲಾಗಿದ್ದು,ಬಳಿಕ ಕರೆಯ ಬಗ್ಗೆ ಎಲ್ಲೆಡೆ ಪ್ರಚಾರ ಮಾಡಲಾಗಿದೆ.

ಹೌದು,ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಾರದೆ ಉಳಿದುಕೊಂಡಿದೆ.ಬ್ಯಾಂಕ್ ಸಿಬ್ಬಂದಿ ಎನ್ನುತ್ತಾ ಕರೆ ಮಾಡುವ ವ್ಯಕ್ತಿಗಳಿಗೆ ಅಕೌಂಟ್ ಡೀಟೇಲ್ಸ್ ಕೊಟ್ಟು ಮೋಸ ಹೋದ ಹಣ ಕಳೆದುಕೊಂಡ ಅಮಾಯಕರಲ್ಲಿ ಕೆಲವರು ಮಾತ್ರ ಪೊಲೀಸ್ ಠಾಣಾ ಮೆಟ್ಟಿಲೇರುತ್ತಿದ್ದು, ಇನ್ನೂ ಕೆಲ ಪ್ರಾಯದ ವ್ಯಕ್ತಿಗಳಿಗೆ ಹಣ ಕಳೆದುಕೊಂಡ ವಿಚಾರ ಗಮನಕ್ಕೆ ಬಾರದೆಯೇ ಉಳಿದಿದೆ. ಅಕೌಂಟ್ ಡೀಟೇಲ್ಸ್ ಕೇಳುವ ಮೋಸದ ಕರೆಗಳು ನಿಮ್ಮೂರಿಗೂ ಕಾಲಿಡುವ ಮುನ್ನ ಎಚ್ಚರವಿರಲಿ.

Leave A Reply

Your email address will not be published.