ಮನೆ ಮುಂದೆ ಅಲೆದಾಡುತ್ತಿರುವ ನಿಗೂಢವಾದ ಆಕೃತಿ – ಮೈ ಜುಮ್ ಎನಿಸುವ ವೀಡಿಯೋ ವೈರಲ್

ಜಗತ್ತಿನಲ್ಲಿ ಇಂದಿಗೂ ಅದೆಷ್ಟೋ ರಹಸ್ಯಮಯವಾದ ವಿಷಯಗಳು ಅಚ್ಚಳಿಯಾಗಿ ಉಳಿದಿದೆ. ಈ ಹಿಂದೆ ನಡೆದಂತಹ, ಇನ್ನು ಮುಂದಕ್ಕೆ ನಡೆಯುವಂತಹ ವಿಷಯಗಳ ಕುರಿತು ಸಂಶೋಧನ ತಂಡ ಮಾಹಿತಿ ತಿಳಿಸುತ್ತಲೇ ಇದೆ. ಆದರೆ, ಕೆಲವೊಂದು ವಿಷಯಗಳು ಇಂದಿಗೂ ತಿಳಿಯದ ಸತ್ಯವಾಗಿ ಉಳಿದಿದೆ.

ಹೌದು. ಇದರಲ್ಲಿ ಆತ್ಮ, ಪ್ರೇತ, ಭೂತ-ಪಿಶಾಚಿಯ ಬಗ್ಗೆ ಕೂಡ ಒಂದು. ಕೆಲವೊಂದಷ್ಟು ಜನ ಇಂತಹ ನಕಾರಾತ್ಮಕ ಪ್ರಭಾವ ಬೀರುವ ಭೂತಗಳು ಇಂದಿಗೂ ಇದೆ ಎಂದು ನಂಬುತ್ತಾರೆ. ಆದರೆ, ಕೆಲವೊಂದಷ್ಟು ಜನ ಇದೆಲ್ಲ ಕೇವಲ ಒಂದು ಭಾವನೆ ಅನ್ನುತ್ತಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇದರ ಕುರಿತು ವೈಜ್ಞಾನಿಕವಾಗಿ ಸಾಬೀತು ಮಾಡದೇ ಇದ್ದರೂ, ಇವುಗಳ ಇರುವಿಕೆಯ ಕುರಿತು ತಮ್ಮ ಅನುಭವಕ್ಕೆ ಬಂದಿದೆ ಎಂದು ಹೇಳುವವರೂ ಇದ್ದಾರೆ. ದೇವರ ಅಸ್ತಿತ್ವದ ಕುರಿತು ಪರ-ವಿರೋಧಗಳು ಇರುವಂತೆಯೇ ಆತ್ಮ, ಪ್ರೇತ, ಭೂತ-ಪಿಶಾಚಿಯ ಅಸ್ತಿತ್ವದ ಕುರಿತೂ ಇವೆ. ಆದರೆ, ಈ ವಿಷಯ ಮಾತ್ರ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ಇದರ ನಡುವೆ ಅಮೆರಿಕದ ಕೆಂಟುಕಿ ಮನೆಯೊಂದರಲ್ಲಿ ನಡೆದ ಘಟನೆ ಮಾತ್ರ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ಹೌದು. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ ಸ್ಥಳೀಯರು. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ನಿಗೂಢವಾಗಿರುವ ಆಕೃತಿಯೊಂದು ಮನೆಯ ಎದುರಿಗೆ ನಿಲ್ಲಿಸಿರುವ ಕಾರಿನ ಸಮೀಪ ಸುತ್ತುತ್ತಿರುವುದನ್ನು ಕಾಣಬಹುದಾಗಿದೆ.

ಮನುಷ್ಯನ ಆಕೃತಿಯನ್ನು ಹೋಲುವ ಒಂದು ಆಕೃತಿಯು ಸಂಚರಿಸುವುದನ್ನು ಕಾಣಬಹುದಾಗಿದೆ. ಇಲ್ಲಿಯ ಪ್ಯಾರಾನಾರ್ಮಲಿಟಿ ಮ್ಯಾಗಜೀನ್, ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದೆ. 33 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಸುಕಾದ, ಮಾನವನಂತಿರುವ ಆಕೃತಿ ಓಡಾಡುವುದನ್ನು ನಾವು ನೋಡಬಹುದು. ಆಡಿಯೋದಲ್ಲಿ, ಒಬ್ಬ ವ್ಯಕ್ತಿ ‘ನೀವು ಅವನ ಮುಖವನ್ನು ಸ್ಪಷ್ಟವಾಗಿ ನೋಡಬಹುದು’ ಎಂದು ಹೇಳುವುದು ಕೇಳಿಸುತ್ತದೆ.

ಇದರ ಬಗ್ಗೆ ಪರ- ವಿರೋಧಗಳ ಚರ್ಚೆ ಆರಂಭವಾಗಿದೆ. ಈ ವಿಡಿಯೋ ಯಾರೋ ಬೇಕಂತಲೇ ಮಾಡಿದಂತೆ ಕಾಣಿಸುತ್ತಿದೆ. ಏಕೆಂದರೆ ವಿಡಿಯೋ ಚಲಿಸುವಂತೆ ಕಾಣಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇನ್ನು ಹಲವರು ನಮಗೆ ಅರಿವಿಲ್ಲದ ಎಷ್ಟೋ ಸಂಗತಿಗಳು ನಡೆಯುತ್ತವೆ. ಇದು ಕೂಡ ಅಂಥದ್ದೇ ಒಂದು ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋದ ಹಿಂದೆ ಸಂಶೋಧಕರು ಬಿದ್ದಿದ್ದು, ಅಂತಿಮವಾಗಿ ಇದರ ಬಗ್ಗೆ ಯಾವ ನಿರ್ಧಾರ ತಾಳುತ್ತಾರೋ ಕಾದು ನೋಡಬೇಕಿದೆ.

error: Content is protected !!
Scroll to Top
%d bloggers like this: