ಪುರುಷರು ಸೆಕ್ಸ್ ಮಾಡಿದರೆ ಮಂಕಿಪಾಕ್ಸ್ ಖಂಡಿತ – WHO

ಮಂಕಿಪಾಕ್ಸ್ ವಿದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಇದು ಭಾರತಕ್ಕೆ ಲಗ್ಗೆ ಇಟ್ಟಿದೆ. ಮಂಗನ ಖಾಯಿಲೆ ಅಥವಾ ಸಿಡುಬು ಖಾಯಿಲೆಯ ಬಗ್ಗೆ WHO ಅಚ್ಚರಿಯ ಮಾಹಿತಿಯನ್ನು ನೀಡಿದೆ.

“ಮಂಕಿಪಾಕ್ಸ್ ನಾನಾ ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವುದರಿಂದ ಆರೋಗ್ಯ ತುರ್ತುಸ್ಥಿತಿಯಲ್ಲ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ’ ಎಂದು ಡಬ್ಲ್ಯುಎಚ್‌ಒ ಹೇಳಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ವರ್ಷ 3,200ಕ್ಕಿಂತ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಡಬ್ಲ್ಯುಎಚ್‌ಒಗೆ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಡಬ್ಲ್ಯುಎಚ್‌ಒ ಮತ್ತೊಂದು ಅಚ್ಚರಿ ಮಾಹಿತಿ ನೀಡಿದ್ದು, ಮಂಕಿಪಾಕ್ಸ್ ಕಂಡು ಬಂದಿರುವವರಲ್ಲಿ ಬಹುತೇಕರು ಮಧ್ಯವಯಸ್ಸಿನವರಾಗಿದ್ದಾರೆ. ಅಲ್ಲದೇ ಇವರಲ್ಲಿ ಬಹುತೇಕರು ಪುರುಷರು. ಇನ್ನೂ ವಿಚಿತ್ರವೆಂದರೆ ಈ ಖಾಯಿಲೆ ಕಾಣಿಸಿಕೊಂಡ ಪ್ರತಿ ಐವರಲ್ಲಿ ಮೂವರು, ಪುರುಷ ಮತ್ತು ಪುರುಷ ಲೈಂಗಿಕ ಸಂಪರ್ಕ ಮಾಡಿರುವವರು ಎಂದು ಡಬ್ಲ್ಯುಎಚ್‌ಒ ಹೇಳಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ.

ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ‘ಮಂಕಿಪಾಕ್ಸ್’ ಪ್ರಕರಣಗಳು ಮೇ ತಿಂಗಳಿನಿಂದ ಈಚೆಗೆ ಇತರ ದೇಶಗಳಲ್ಲಿಯೂ ಉಲ್ಬಣಗೊಂಡಿವೆ. ಹೆಚ್ಚಾಗಿ ಪಶ್ಚಿಮ ಯುರೋಪ್‌ನಲ್ಲಿ ಪತ್ತೆಯಾಗುತ್ತಿವೆ.

ದುಬೈಯಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ ‘ಮಂಕಿಪಾಕ್ಸ್’ ತಗುಲಿರುವುದು ಭಾರತದಲ್ಲಿ ಖಾತರಿಯಾಗಿತ್ತು. ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

error: Content is protected !!
Scroll to Top
%d bloggers like this: