Indian army recruitment 2022 | ವೇತನ-63000, ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಭಾರತೀಯ ಸೇನೆಯ ಗ್ರೂಪ್ C ವರ್ಗದ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗಾಗಿ, ಸದರ್ನ್ ಕಮಾಂಡ್ ಹೆಡ್ಕ್ವಾರ್ಟರ್ಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫಾರ್ಮ್‌ನ ಸ್ವರೂಪದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಯ ವಿವರಗಳು:

ಸ್ಟೆನೋ ಗ್ರೇಡ್ II – 1 ಹುದ್ದೆ
ಲೋವರ್ ಡಿವಿಷನ್ ಕ್ಲರ್ಕ್ – 8 ಹುದ್ದೆಗಳು
ಕುಕ್ – 1 ಹುದ್ದೆ
MTS – 22 ಹುದ್ದೆಗಳು

ವಿದ್ಯಾರ್ಹತೆ:

ಸ್ಟೆನೋ ಗ್ರೇಡ್ II – 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಇಂಗ್ಲಿಷ್/ಹಿಂದಿಯಲ್ಲಿ ಕಂಪ್ಯೂಟರ್ ಸ್ಟೆನೋಗ್ರಫಿ ಕೌಶಲ್ಯ ಹೊಂದಿರಬೇಕು.
ಲೋವರ್ ಡಿವಿಷನ್ ಕ್ಲರ್ಕ್ – 12ನೇ ತರಗತಿ ಪಾಸ್ ಆಗಿರಬೇಕು. ಇದರ ಜೊತೆ ಇಂಗ್ಲಿಷ್ ಮತ್ತು ಹಿಂದಿ ಟೈಪಿಂಗ್ ಕೌಶಲ್ಯ ಹೊಂದಿರಬೇಕು.
ಕುಕ್ – 10ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಭಾರತೀಯ ಅಡುಗೆಯ ಜ್ಞಾನವನ್ನು ಹೊಂದಿರಬೇಕಾಗುತ್ತದೆ.
MTS – 10ನೇ ತರಗತಿ ಪಾಸ್ ಆಗಿರಬೇಕು.

ವೇತನ:

ಸ್ಟೆನೋ ಗ್ರೇಡ್: 25500 ರಿಂದ 81100 ರೂ.
ಲೋವರ್ ಡಿವಿಷನ್ ಕ್ಲರ್ಕ್​ ಮತ್ತು ಕುಕ್ : 19900 ರಿಂದ 63200 ರೂ.
MTS: 18000 ರಿಂದ 56900 ರೂ.

ವಯೋಮಿತಿ:

ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ.

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 19, 2022

Leave A Reply

Your email address will not be published.