ಶೌಚಾಲಯದ ಗುಂಡಿಯಲ್ಲಿ ಚಿನ್ನ ಪತ್ತೆ | ಪೊಲೀಸರಿಂದ ಮುಚ್ಚಿಟ್ಟರು ಮನೆಮಂದಿ ಈ ವಿಷಯ…ನಂತರ ನಡೆದಿದ್ದೇನು?

ಈ ಅದೃಷ್ಟ ಎನ್ನುವುದು ಎಲ್ಲೆಲ್ಲಿ ಅಡಗಿ ಕೂತಿದೆ ಎಂದು ನಮಗೆ ಗೊತ್ತಿಲ್ಲ. ಹೌದು, ಶೌಚಾಲಯದ ಗುಂಡಿ ಅಗೆಯುವಾಗ ಬಂಗಾರದ ಚಿನ್ನದ ನಾಣ್ಯಗಳೇ ದೊರಕಿದ್ದು ನಿಜಕ್ಕೂ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಈ ಘಟನೆ ನಡೆದಿರುವುದು ಚೌನ್‌ಪುರದ ಕೊತ್ವಾಲಿ ಪ್ರದೇಶದಲ್ಲಿ. ಮಹಿಳೆಯೊಬ್ಬರ ಮನೆಯೊಳಗೆ ಶೌಚಾಲಯದ ಗುಂಡಿಯನ್ನು ಅಗೆಯುವಾಗ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಣ್ಯ ಕಳೆದವಾರ ಪತ್ತೆಯಾಗಿದೆ.

ಮಹಿಳೆ ನೂರ್ ಜಹಾನ್ ಅವರ ಕುಟುಂಬ ಸದಸ್ಯರು ಮತ್ತು ಕಾರ್ಮಿಕರು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ವಾರಾಂತ್ಯದಲ್ಲಿ ಪೊಲೀಸರು ಮಾಹಿತಿ ಪಡೆದು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ನಾಣ್ಯಗಳು (1889-1912 ರ ನಡುವೆ) ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿವೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಕಾರ್ಮಿಕರನ್ನು ವಿಚಾರಣೆ ನಡೆಸುತ್ತಿದ್ದು, ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇಮಾಮ್ ಅಲಿ ರೈನಿ ಅವರ ಪತ್ನಿ ನೂರ್ ಜಹಾನ್ ಅವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಕಂದಕವನ್ನು ಅಗೆಯುತ್ತಿದ್ದರು. ಅಗೆಯುವ ಸಮಯದಲ್ಲಿ ತಾಮ್ರದ ಪಾತ್ರೆಯಲ್ಲಿ ಹಲವಾರು ನಾಣ್ಯಗಳು ಪತ್ತೆಯಾಗಿವೆ. ಈ ವಿಷಯವಾಗಿ ಕಾರ್ಮಿಕರ ನಡುವೆ ಜಗಳವಾಗಿದೆ. ಮರುದಿನ ಮತ್ತೆ ಬಂದ ಕಾರ್ಮಿಕರು ಮತ್ತೆ ಅಗೆಯಲು ಪ್ರಾರಂಭಿಸಿದರು. ಈ ವೇಳೆ ಕಾರ್ಮಿಕನೊಬ್ಬನಿಗೆ ಸಿಕ್ಕ ಒಂದು ಚಿನ್ನದ ನಾಣ್ಯವನ್ನು ರೈನಿ ಮಗನಿಗೆ ನೀಡಿದರು.

ಘಟನಾ ಸ್ಥಳಕ್ಕೆ ಆಗಮಿಸಿದ ಇನ್ಸ್ ಪೆಕ್ಟರ್ ವಿಚಾರಣೆ ಆರಂಭಿಸಿದರು. ಈ ವೇಳೆ ಕೂಲಿಕಾರನ್ನು ವಿಚಾರಿಸಿದಾಗ, ಅಂತಹ ಯಾವುದೇ ಘಟನೆ ಇಲ್ಲಿ ನಡೆದಿಲ್ಲ ಎಂದು ಕಾರ್ಮಿಕರು ಮೊದಲು ನಿರಾಕರಿಸಿದರು. ನಂರ ತನಿಖೆಯನ್ನು ತೀವ್ರಗೊಳಿಸಿದಾಗ ಚಿನ್ನದ ನಾಣ್ಯ ಪತ್ತೆಯಾಗಿರುವ ಸಂಗತಿ ಹೊರಬಿದ್ದಿದೆ. ಬಳಿಕ ಚಿನ್ನದ ನಾಣ್ಯಗಳನ್ನು ಕಾರ್ಮಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಮ್ರದ ಪಾತ್ರೆಯಲ್ಲಿ ಎಷ್ಟು ನಾಣ್ಯಗಳಿದ್ದವು ಎಂದು ಇನ್ನೂ ತಾಮ್ರದ ಪಾತ್ರೆಯಲ್ಲಿ ಎಷ್ಟು ನಾಣ್ಯಗಳಿದ್ದವು ಎಂದು ಇನ್ನೂ ಸ್ಪಷ್ಟವಾಗಿಲ್ಲ. ಕಾರ್ಮಿಕರನ್ನು ಪೊಲೀಸರು ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.