ಪಶ್ಚಿಮ ಬಂಗಾಳಕ್ಕೆ ಮುಸ್ಲಿಂ ಸಮುದಾಯದ ರಾಜ್ಯಪಾಲ ಬಹುತೇಕ ಫಿಕ್ಸ್ !

ಮುಯ್ಯಿಗೆ ಮುಯ್ಯಿ, ಮುಳ್ಳಿಗೆ ಮುಳ್ಳು ತಂತ್ರವನ್ನು ಬಿಜೆಪಿ ಮತ್ತೆ ಬಳಸಲು ಹೊರಟಿದೆ. ಸದಾ ಮೋದಿ ವಿರೋಧಿಯಾಗಿದ್ದು ಕೊಂಡು ಕೇಂದ್ರವನ್ನು ಟೀಕಿಸುತ್ತಾ, ಕೇಂದ್ರದ ಯಾವುದೆ ಯೋಜನೆಗಳಿಗೆ ಸಕಾರಾತ್ಮಕ ಸ್ಪಂದಿಸದ ಪಶ್ಚಿಮ ಬಂಗಾಳಕ್ಕೆ ಮತ್ತೂಂದು ಸ್ಟ್ರೋಕ್ ರೆಡಿ ಮಾಡಿದೆ ಬಿಜೆಪಿ.

ಅದ್ರಲ್ಲಿ ಮೊದಲನೆಯದ್ದು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಮರ್ ಅವರನ್ನು ಬಿಜೆಪಿ ನೇತೃತ್ವದ NDA ಮೈತ್ರಿಕೂಟ ತನ್ನ ಉಪ
ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡ ನಂತರ ತೃಣ ಮೂಲ ಕಾಂಗ್ರೆಸ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಕೆಲವೊಂದು ತೀರ್ಮಾನಗಳಿಗೆ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಅಂಕುಶ ಹಾಕುತ್ತಿತ್ತು.

ಇದೀಗ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಶ್ ಧನ್ನರ್
ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಮಮತಾ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಮಾಸ್ಟರ್ ಸ್ಟೋಕ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮುಕ್ತಾರ್ ಅಬ್ಬಾಸ್ ನಕ್ವಿ ಅವರನ್ನು ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ನೇಮಿಸಲಾಗುತ್ತಿದೆ ವಲಯದಲ್ಲಿ ಕೇಳಿ ಬರುತ್ತಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪರಾಭವದ ಬಳಿಕ ನಡೆದ ಇತರೆ ಚುನಾವಣೆಗಳಲ್ಲೂ ಬಿಜೆಪಿ ಗಮನಾರ್ಹ ಸಾಧನೆಯನ್ನು ಮಾಡಿಲ್ಲ. ಹೀಗಾಗಿ ಉತ್ತರ ಪ್ರದೇಶದ ಪ್ರಭಾವಿ ಶಿಯಾ ಮುಸ್ಲಿಂ ಮುಖಂಡರಾಗಿರುವ ಮುಕ್ತಾರ್ ಅಬ್ಬಾಸ್ ನಕ್ವಿಯವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿಸುವ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ. ಅಲ್ಲದೆ ಮಮತಾ ಬ್ಯಾನರ್ಜಿ ಅವರ ಒಂದು ಕಾಲದ ಸಚಿವ ಸಹೋದ್ಯೋಗಿಯಾಗಿದ್ದ ಮುಕ್ತಾರ್ ಅಬ್ಬಾಸ್ ನಕ್ವಿಯವರನ್ನು ರಾಜಪಾಲರನ್ನಾಗಿಸುವುದು ಸೂಕ್ತ ಎಂಬ
ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.

Leave A Reply

Your email address will not be published.