ಉರಗ ದಿನದ ವಿಶೇಷತೆ ಏನು ? ವಿಶ್ವ ಹಾವುಗಳ ದಿನದಂದು ತಿಳಿಯಲೇ ಬೇಕಾದ ಮಾಹಿತಿಗಳು

ಪ್ರತಿ ವರ್ಷ ಜುಲೈ 16ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ವಿಶ್ವ ಹಾವುಗಳ ದಿನ ಆಚರಿಸಲಾಗುತ್ತದೆ. ಹಾವಿನ ಬಗ್ಗೆ ಜನರಲ್ಲಿರುವ ಅನಗತ್ಯ ಭಯವನ್ನು ಹೋಗಲಾಡಿಸಿ, ಹಾವುಗಳ ಮಹತ್ವ, ಅದರ ವಿವಿಧ ತಳಿಗಳ ಉಳಿವಿಗಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ ಆಚರಿಸಲಾಗುತ್ತದೆ.

ಭಾರತದಲ್ಲಿ ಹಾವಿಗೆ ಪೂಜ್ಯಸ್ಥಾನವಿದೆ. ಹಾವುಗಳು ಸಾವಿರಾರು ವರ್ಷ ಗಳಿಂದ ಅಸ್ತಿತ್ವದಲ್ಲಿವೆ. ಮಾನವರ ಉಗಮಕ್ಕಿಂತ ಮುನ್ನ ಹಾವುಗಳೇ ಭೂಮಂಡಲವನ್ನು ಆಳುತ್ತಿದ್ದವು ಎಂದು ಹೇಳಲಾಗುತ್ತದೆ. ಅಂಟಾರ್ಟಿಕ ಹೊರತು ಪಡಿಸಿ ಪ್ರತಿಯೊಂದು ಖಂಡದಲ್ಲೂ ಹಾವುಗಳು ಕಂಡುಬರುತ್ತದೆ.

ಪ್ರಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಹಾವುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಅಮೆರಿಕದಲ್ಲಿ 1967 ನೇ ಇಸವಿಯಲ್ಲಿ ಸ್ನೇಕ್‌ ಫಾರ್ಮ್‌ ಎಂಬ ಸಂಸ್ಥೆ ಇಂಥದ್ದೊಂದು ದಿನಾಚರಣೆಯನ್ನು ಮೊದಲ ಬಾರಿಗೆ ಆಚರಿಸಿತು.

ಗಂಡು ನಾಗರ ಹಾವು ಸುಮಾರು 7 ಅಡಿ, ಹೆಣ್ಣು ಹಾವು 5 ಅಡಿಗಳಷ್ಟು ಉದ್ದ ಬೆಳೆಯ ಬಲ್ಲದು. ಜನಿಸಿದ ಮೂರು- ನಾಲ್ಕು ವರ್ಷ ದೊಳಗೆ‌ ಪ್ರೌಢ ವಸ್ಥೆಗೆ ಬರುತ್ತವೆ. ಹೆಣ್ಣು ಹಾವು ವರ್ಷದ ನಿರ್ದಿಷ್ಟ ಋತುವಿನಲ್ಲಿ ಮೈಥುನಕ್ಕೆ ಅಣಿಯಾಗುವುದನ್ನು ತನ್ನದೇ ‌ಪ್ರಬೇಧದ‌ಗಂಡು ಹಾವುಗಳಿಗೆ ಸೂಚಿಸಲು ಶರೀರದ ಗ್ರಂಥಿಗಳಿಂದ ವಾಸನಾದ್ರವ್ಯವನ್ನು ಸ್ರವಿಸುತ್ತದೆ. ಈ ವಾಸನೆಯನ್ನು ‌ಗಾಳಿಯ‌ಮೂಲಕ ಗ್ರಹಿಸಿ ಅದೇ ಪ್ರಬೇಧದ ಹಲವು ಗಂಡು ಹಾವುಗಳು ಹೆಣ್ಣು ಹಾವುಗಳನ್ನರಸಿ ಬಂದು ಹಲವು ದಿನಗಳವರೆಗೆ ಹೆಣ್ಣು ಹಾವನ್ನು ಸೇರುತ್ತವೆ. ಈ ಪ್ರಕ್ರಿಯೆ ಯಲ್ಲಿ ಗರ್ಭಧರಿಸಿದ ಹೆಣ್ಣು ಹಾವು ಸುಮಾರು 40 ರಿಂದ 50 ರಷ್ಟು ಮೊಟ್ಟೆಗಳನ್ನಿಡುತ್ತವೆ.

ಹಾವು ಪರಿಸರದ ಸಮತೊಲದ ಮುಖ್ಯ ಕೊಂಡಿ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಾವು ಗಳ ಸೂಕ್ತ ರಕ್ಷಣೆ ಅನಿವಾರ್ಯ ಹಾಗೂ ಅವುಗಳ ಸಂತತಿ ಉಳಿಸಿ ನಿಸರ್ಗ ಸ್ನೇಹಿ ಬದುಕನ್ನು ರೂಪಿಸಿಕೊಳ್ಳಲು ನಾವಿಂದು ದಾಪುಗಾಲು ಇಡ ಬೇಕಾಗಿದೆ.

Leave A Reply

Your email address will not be published.