ಕಂಡ ಕಂಡ ವಿಕೆಟ್ ಕೆಡವಿದ ಸುಶ್ಮಿತಾ ಸೇನ್, ಐಪಿಎಲ್ ಜನಕ ಲಲಿತ್ ಮೋದಿ 12th ಬ್ಯಾಟ್ಸ್ ಮ್ಯಾನ್ !

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಗುರುವಾರ ಸಂಜೆ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಕಳೆದ ಹಲವು ದಿನಗಳಿಂದ ವದಂತಿಗಳನ್ನು ಹುಟ್ಟುಹಾಕಿದ್ದು, ಈಗ ಅವರಿಬ್ಬರೂ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅವರ ಆತ್ಮೀಯ ಕ್ಷಣಗಳನ್ನು ಪೋಸ್ಟ್ ಮಾಡಿದ ನಂತರ ಈ ಸಂಬಂಧದ ಬಗ್ಗೆ ಖಾತರಿ ಆಗಿದೆ. ವಯಸ್ಸು 58 ಆದರೂ ಸುಷ್ಮಿತಾ ಬಳಿ ಆತ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. 46 ಮಧ್ಯ ವಯಸ್ಸು ಮೀರಿದರೂ, ಈಗ ಇಬ್ಬರು ದತ್ತು ಹೆಣ್ಣುಮಕ್ಕಳ ತಾಯಿ ಆಗಿದ್ದರೂ, ಮತ್ತಷ್ಟು ಗಂಡಸರ ಜತೆ ಆಕೆ ಇನ್ನೂ ಚಿಕ್ಕ ಹುಡುಗಿಯಂತೆ ಡೇಟಿಂಗ್ ಮಾಡುತ್ತಿದ್ದಾಳೆ. ಅವರಲ್ಲಿ ಲೇಟೆಸ್ಟ್ ಫಿಗರ್ ಈ ಲಲಿತ್ ಮೋದಿ!

1994 ರಲ್ಲಿ, ಸುಶ್ಮಿತಾ ಸೇನ್ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಅಂತಹ ವಿಶ್ವ ಸುಂದರಿಯ ಹೃದಯ ಕೂಡಾ ವೈಶಾಲ್ಯತೆಯಿಂದ ತುಂಬಿದೆ. ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ನಂತರ, ಅಂದಿನಿಂದ ಇಂದಿನವರೆಗೆ ಆಕೆ ಹಲವು ಗಂಡಸರಿಗೆ ತನ್ನ ಪ್ರೀತಿಯನ್ನು ಹಂಚುತ್ತಲೇ ಬಂದಿದ್ದಾಳೆ. ಐಪಿಎಲ್ ಕ್ರಿಕೆಟ್ ನ ಜನಕ, ಲಲಿತ್ ಮೋದಿ ಈ ಪಟ್ಟಿಯಲ್ಲಿ 11 ನೆಯವರಂತೆ. ಒಂದಿಡಿ ಕ್ರಿಕೆಟ್ ಟೀಮ್ಗೆ ಆಗುವಷ್ಟು ಗಂಡಸರು ಆಕೆಯ ಜೀವನದಲ್ಲಿ ಬಂದು, ಇದ್ದು ಇದ್ದಷ್ಟು ಕಾಲ ಸುಖಭೋಗಗಳನ್ನು ಜತೆಯಾಗಿ ಅನುಭವಿಸಿ ಹೋಗಿದ್ದಾರೆ. ಅವರು ಯಾರು ಆ ಪಟ್ಟಿಯ ಬಗ್ಗೆ ಇವತ್ತು ನಾವಿಲ್ಲಿ ನಿಮಗೆ ತಿಳಿಸಲಿದ್ದೇವೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಪಟ್ಟಿಯಲ್ಲಿ ಮೊದಲನೆಯವನು ಪಾಕಿಸ್ತಾನಿ ಕ್ರಿಕೆಟರ್ ವಾಸಿಂ ಅಕ್ರಮ್. ಈಕೆಯ ಜೀವನದಲ್ಲಿ ಬಂದ ಮೊದಲನೆಯ ವ್ಯಕ್ತಿ. ಈತನೇ ಆಕೆಯ ಬಾಳಿನಲ್ಲಿ ಬಂದ ಓಪನಿಂಗ್ ಬ್ಯಾಟ್ಸ್ ಮನ್. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸುಶ್ಮಿತಾ ಸೇನ್ ಡೇಟಿಂಗ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಅವರು ಸಾಕಷ್ಟು ಸಮಯದವರೆಗೆ ಒಟ್ಟಿಗೆ ಇದ್ದರು ಎಂದು ಭಾವಿಸಲಾಗಿದೆ. ಅವರು ಮೊದಲು ಸ್ನೇಹಿತರಾದರು, ನಂತರ ಅವರು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಕೊನೆಯಲ್ಲಿ ಬಹುಶಹ ಇಬ್ಬರಿಗೂ ಬೋರ್ ಆಗಿರಬೇಕು, ಸಂಬಂಧ ಕಡಿದುಕೊಂಡಿತ್ತು.

ರಣದೀಪ್ ಹೂಡಾ
ಸುಶ್ಮಿತಾ ಸೇನ್ ಅವರ ಅತ್ಯಂತ ಪ್ರಸಿದ್ಧ ಸಂಬಂಧಗಳಲ್ಲಿ ಇದು ಒಂದು. ಸರಿಸುಮಾರು ಆಕೆಯ ವೃತ್ತಿಯಲ್ಲಿ ತೊಡಗಿ ಕೊಂಡಾಗ ಪರಿಚಿತನಾದ ವ್ಯಕ್ತಿ ಈತ. ಕರ್ಮ ಮತ್ತು ಹೋಳಿ ಚಿತ್ರೀಕರಣ ನಡೆಯುತ್ತಿರುವಾಗಲೇ ರಣದೀಪ್ ಹೂಡಾ ಮತ್ತು ಸುಶ್ಮಿತಾ ಡೇಟಿಂಗ್ ಆರಂಭಿಸಿದ್ದರು. ತಮ್ಮ ಬ್ರೇಕಪ್ ನಂತರವೂ ಇಬ್ಬರು ನಟರು ಆತ್ಮೀಯ ಸ್ನೇಹಿತರಾಗಿ ಉಳಿದಿದ್ದಾರೆ ಎನ್ನುವುದು ವಿಶೇಷ.

ವಿಕ್ರಮ್ ಭಟ್
ರಣ್ ಡೀಪ್ ಹೂಡಾ ನಂತರ ಎಂಟ್ರಿ ಕೊಟ್ಟವರು ಖ್ಯಾತ ನಿರ್ದೇಶಕ ವಿಕ್ರಂ ಭಟ್. 1996 ರಲ್ಲಿ “ದಸ್ತಕ್” ಚಿತ್ರೀಕರಣದ ಸಮಯದಲ್ಲಿ, ಸುಶ್ಮಿತಾ ಸೇನ್ ಮತ್ತು ವಿಕ್ರಮ್ ಭಟ್ ಪ್ರೀತಿಯಲ್ಲಿ ಬೀಳಲು ಪ್ರಾರಂಭಿಸಿದರು. ವಿಕ್ರಮ್ ಅವರ ಸಂಬಂಧದ ಸಮಯದಲ್ಲಿ ಅವರು ಈಗಾಗಲೇ ಮದುವೆಯಾಗಿದ್ದರಿಂದ ಅವರ ಕುಟುಂಬವನ್ನು ಬಿಟ್ಟು ಹೋಗಬೇಕಾಯಿತು. ಆಮೇಲೆ ಏನಾಯಿತೋ ಗೊತ್ತಿಲ್ಲ, ಈ ಸಂಬಂಧ ಕೂಡಾ ರುಚಿ ಕಳೆದುಕೊಂಡಿತ್ತು. ವಿಕ್ರಂ ಭಟ್ ಗೆ ಅತ್ತ ಕುಟುಂಬವು ಹೋಗಿ ಬಿಟ್ಟು ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ಸಂಜಯ್ ನಾರಂಗ್
ಸುಶ್ಮಿತಾ ಸೇನ್ ಅವರ ಈ ಸಂಬಂಧ ಮಾತ್ರ ತುಂಬಾ ಸಮಯ ಬಾಳಿಕೆ ಬಂದಿತ್ತು.  ಹೋಟೆಲ್ ಉದ್ಯಮಿ ಸಂಜಯ್ ನಾರಂಗ್ ಅವರೊಂದಿಗೆ ಪ್ರಣಯ ಸಂಬಂಧವನ್ನು ಹೊಂದಿದ್ದಳು. ಆಕೆ ವಿಕ್ರಮ್ ಭಟ್ ಜೊತೆ ಬೇರೆಯಾದ ನಂತರ, ಅವಳು ಅವನೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದಳು. ಇಬ್ಬರೂ ಬಹುಕಾಲದವರೆಗೆ ಹೋಟೆಲ್ ಊಟ ಸವಿದಿದ್ದಾರೆ ಅನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ತೆಮಾನವ್ ಮೆನನ್: ಅವರು 2011 ರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಮಾಜಿ ವಿಶ್ವ ಸುಂದರಿ ಚಿತ್ರ ನಿರ್ಮಾಪಕ ಮಾನವ್ ಮೆನನ್ ಜೊತೆ ಡೇಟಿಂಗ್ ಮಾಡಿದ್ದಳು. ಸುಶ್ಮಿತಾ ಸೇನ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವಾಗ ಆತ  ಡೇಟಿಂಗ್ ಶುರು ಮಾಡಿದ.

ಅನಿಲ್ ಅಂಬಾನಿ: ದೈತ್ಯ ರಿಲಯನ್ಸ್ ಕಂಪನಿಯ ಧೀರು ಬೈ ಅಂಬಾನಿಯ ಎರಡನೆಯ ಮಗ ಅನಿಲ್ ಅಂಬಾನಿ ಕೂಡ ಸುಶ್ಮಿತಾ ಸೇನ್ ಅನಿಲ್ ಅಂಬಾನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದೂ ಎಂದು ಆಗ ಜೋರಾಗಿಯೇ ವದಂತಿ ಇತ್ತು. ಆಗ ಅನಿಲ ಅಂಬಾನಿ ಮತ್ತು ಆತನ ಪತ್ನಿ ಟೀನಾ ಅಂಬಾನಿ ಮತ್ತು ಅವರ ದಾಂಪತ್ಯ ದಲ್ಲಿ ವಿರಸಗಳಿದ್ದವು. ಅಂತಹ ಸಂದರ್ಭದಲ್ಲಿ ಅನಿಲ್ ಸುಶ್ಮಿತಾಳನ್ನು ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ. ಅಲ್ಲದೆ, ಅನಿಲ್ ಅಂಬಾನಿ ಆಕೆಗೆ 22 ಕ್ಯಾರೆಟ್ ನ ವಜ್ರದ ಉಂಗುರವನ್ನು ನೀಡಿದ್ದರು ಎಂಬ ವದಂತಿಗಳಿವೆ.

ಮುದಸ್ಸರ್ ಅಜೀಜ್: ಸುಶ್ಮಿತಾ ಸೇನ್ ಮತ್ತು ನಿರ್ದೇಶಕ ಮುದಸ್ಸರ್ ಅಜೀಜ್ ಅವರ ಸಂಬಂಧವು ಅಲ್ಪಕಾಲಿಕವಾಗಿತ್ತು. 2010 ರಲ್ಲಿ ದುಲ್ಹಾ ಮಿಲ್ ಗಯಾ ಸೆಟ್‌ನಲ್ಲಿ, ಅವರು ಸಂಬಂಧವನ್ನು ಪ್ರಾರಂಭಿಸಿದರು ಅದು ಶೀಘ್ರವಾಗಿ ಕೊನೆಗೊಂಡಿತು.

ಸಬೀರ್ ಭಾಟಿಯಾ: ಭಾರತೀಯ-ಅಮೆರಿಕನ್ ಮತ್ತು ಹಾಟ್‌ಮೇಲ್ ಅನ್ನು ಸ್ಥಾಪಿಸಿದ ಈ ಉದ್ಯಮಿ ಒಮ್ಮೆ ಸುಶ್ಮಿತಾ ಸೇನ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಆದರೆ ಸುಶ್ ಅವರ ಹಿಂದಿನ ಸಂಬಂಧಗಳಂತೆಯೇ, ಇದು ಕೂಡ ಬಹುಬೇಗನೆ ಅಂತಿಮವಾಗಿ ಕೊನೆಗೊಂಡಿತು.

ಬಂಟಿ ಸಜ್ದೇವ
ಅವರು ಸುಶ್ಮಿತಾ ಸೇನ್ ಅವರನ್ನು ಡೇಟಿಂಗ್ ಮಾಡಿದ್ದಾರೆ ಎಂದು ಸುದ್ದಿಯಲಿತ್ತು. ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಮತ್ತು ಬಂಟಿ ಸಜ್ದೆ ಮದುವೆಯಾಗಲಿದ್ದಾರೆ ಎಂಬ ವದಂತಿ ಇತ್ತು. ಆದಾಗ್ಯೂ, ಬಂಟಿ ಸಚಿವಾನ ಮತ್ತು ಸುಶ್ಮಿತಾ ಸೀನ್ ಮಧ್ಯದ ಅಫೇರ್ ದೊಡ್ಡ ಸುದ್ದಿ ಆಗಿತ್ತು. ಆದರೆ ಅವರ ಪ್ರಣಯ ಹೆಚ್ಚು ಕಾಲ ಬಾಳಲಿಲ್ಲ. ಅವರಿಬ್ಬರೂ ಬೇಗನೆ ಬೇರ್ಪಟ್ಟರು.

ರಿತಿಕ್ ಭಾಸಿನ್
ಮುಂಬೈ ರೆಸ್ಟೋರೆಂಟ್ ಮಾಲೀಕ ರಿತಿಕ್ ಭಾಸಿನ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಕ್ರಿಕೆಟ್ ಆಟಗಾರ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರ ವಿವಾಹದ ಸಮಯದಲ್ಲಿ ದಂಪತಿಗಳು ಒಟ್ಟಿಗೆ ಕಾಣಿಸಿಕೊಂಡರು. ಸಾಕಷ್ಟು ಹೆಚ್ಚು ಸಮಯ ಈ ಹೋಟೆಲಿಯರ್ ನ ಜೊತೆ ಸಮಯ ಕಳೆದಿದ್ದಳು ಸುಶ್ಮಿತಾ ಸೇನ್. ಇಲ್ಲೂ ಕೂಡ  ಹೋಟೆಲ್ ಊಟದ ರುಚಿ ಆಕೆಗೆ ಹಿಡಿಸಿತ್ತು ಅನ್ನಿಸುತ್ತದೆ. ಆದರೆ, ಕೊನೆಕೊನೆಗೆ ಹೋಟೆಲ್ ಊಟ ಬೋರ್ ಹೊಡೆಸಿತು. ಆಗ, 2017 ರಲ್ಲಿ ಸುಶ್ಮಿತಾ ಸೇನ್ ಮತ್ತು ರಿತಿಕ್ ಬೇರ್ಪಟ್ಟರು.

ರೋಹ್ಮನ್ ಶಾಲ್
ಈಗ ಸುಶ್ಮಿತಾ ಸೇನ್ ಮತ್ತು ಅವರ ಮಾಡೆಲ್ ಮಾಜಿ ಪಾಲುದಾರ ರೋಹ್ಮನ್ ಶಾಲ್ ಅವರು ಬೇರ್ಪಟ್ಟಿದ್ದಾರೆ. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂಪರ್ಕದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ ಮತ್ತು ಅವರು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ, 30ರ ಹರೆಯದ ಮಾಡೆಲ್‌ನೊಂದಿಗೆ ತಾನು ಮುರಿದುಬಿದ್ದಿದ್ದೇನೆ ಎಂಬ ವದಂತಿಗಳು, ಈಗ ಸುಶ್ಮಿತಾ ಸೇನ್ ಲಲಿತ್ ಮೋದಿಯ ಜೊತೆಗೆ ಸಾಂಗತ್ಯ ಬೆಳೆಸಿಕೊಂಡ ಕಾರಣ ಆ ವದಂತಿಗಳು ನಿಜ ಎಂದು ಪ್ರೂವ್ ಆಗಿವೆ.

ಈಗ ನಡೀತಿರೋದು ಭಾರತೀಯ ಕ್ರಿಕೆಟ್ ಮೈಲುಗಲ್ಲಾದ ಐಪಿಎಲ್ ನ ಜನಕ ಮತ್ತು ಅದನ್ನು ವೃತ್ತಿ ಪರವಾಗಿ ಮುಂದಕ್ಕೆ ತಂದ ಲಲಿತ್ ಮೋದಿ ಜತೆ ಆಕೆ ಕೂಡಿಕೆ ಮಾಡಿಕೊಂಡಿದ್ದಾಳೆ.
ಸುಶ್ಮಿತಾ ಅವರ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಲಲಿತ್ ಪೋಸ್ಟ್ ಮಾಡಿದ್ದಾರೆ, ಅವುಗಳಲ್ಲಿ ಕೆಲವು ಖಾಸಗಿ ಸಮಯದಲ್ಲಿ ಇಬ್ಬರನ್ನು ಒಟ್ಟಿಗೇ ತೋರಿಸಿವೆ.
“ಕುಟುಂಬಗಳೊಂದಿಗೆ ಸುತ್ತುತ್ತಿರುವ ಜಾಗತಿಕ ಪ್ರವಾಸದ ನಂತರ ಲಂಡನ್‌ಗೆ ಹಿಂತಿರುಗಿ #ಮಾಲ್ಡೀವ್ಸ್ #ಸಾರ್ಡಿನಿಯಾ – ನನ್ನ #ಬೆಟರ್‌ಹಾಫ್ @sushmitasen47. ಅಂತಿಮವಾಗಿ ಹೊಸ ಜೀವನಕ್ಕೆ ಹೊಸ ಆರಂಭ. ಚಂದ್ರನ ಮೇಲೆ,” ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಹಳೆಯ ಜೋಡಿ ಹೊಸ ಮಧು ಚಂದ್ರದ ಮೂಡ್ ನಲ್ಲಿದ್ದಾರೆ. ಬಹುಶಃ ಟ್ರೆಂಡ್ ನೋಡಿದರೆ, ಇದು ಕೊನೆಯಲ್ಲ, ಇಲ್ಲಿಗೆ ಇದು ನಿಲ್ಲೋ ಸಾಧ್ಯತೆ ಇಲ್ಲ !

error: Content is protected !!
Scroll to Top
%d bloggers like this: