ಗ್ರಾಮ ಸುರಕ್ಷಾ ಯೋಜನೆ | ದಿನವೊಂದಕ್ಕೆ 50 ರೂಪಾಯಿ ಕಟ್ಟಿ, ಮೆಚ್ಯುರಿಟಿ ಸಮಯದಲ್ಲಿ ಪಡೆಯಿರಿ 35 ಲಕ್ಷ!!!

ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಏನು ಎಂಬ ಚಿಂತೆ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ತಾವು ದುಡಿಯುವ ಮೊತ್ತದಲ್ಲಿ ಒಂದಷ್ಟನ್ನು ಭವಿಷ್ಯಕ್ಕೋಸ್ಕರ ಉಳಿಸುವುದು ಕೂಡ ಭವಿಷ್ಯದ ಭದ್ರತೆಗೆ ಉತ್ತಮ. ಹಾಗಾಗಿ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗ ಹೂಡಿಕೆ ಮಾಡುವಿದು ಎಲ್ಲಿ ಎಂಬುದು ಮುಖ್ಯವಾಗುತ್ತದೆ.

ಪೋಸ್ಟ್ ಆಫೀಸ್ ಈಗ ಹೆಚ್ಚು ಸುರಕ್ಷಿತ ಮತ್ತು ಹೆಚ್ಚಿನ ಆದಾಯ ತಂದುಕೊಡುವ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದುವೇ ‘ಗ್ರಾಮ ಸುರಕ್ಷಾ ಯೋಜನೆ’. ಈ ಯೋಜನೆಯ ಪ್ರಕಾರ, ದಿನಕ್ಕೆ 50 ರೂಪಾಯಿ ಅಥವಾ ತಿಂಗಳಿಗೆ 1500 ರೂಪಾಯಿಗಳನ್ನು ಕಟ್ಟಬೇಕಿದೆ. ಈ ಮೊತ್ತ ನೀವು ಕಟ್ಟಿದರೆ ಮೆಚ್ಯುರಿಟಿ ಸಮಯದಲ್ಲಿ ನಿಮಗೆ ಭರ್ಜರಿ ರಿಟರ್ನ್ಸ್ ಬರುತ್ತದೆ. ಈ ಯೋಜನೆಯ ಪ್ರಕಾರ, ನೀವು 35 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಇದರಲ್ಲಿ ಹೂಡಿಕೆ ಮಾಡಲಿಚ್ಛಿಸುವವರು ಕಡಿಮೆ ವಯಸ್ಸಿನಲ್ಲಿಯೇ ಇದನ್ನು ಸ್ಟಾರ್ಟ್ ಮಾಡಬಹುದು. ಅಂದರೆ, 19 ರಿಂದ 55 ವರ್ಷ ವಯಸ್ಸಿನ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು. ಇದರಿಂದ ಉತ್ತಮ ಲಾಭವನ್ನು ಗಳಿಸಬಹುದು.

ಸುರಕ್ಷಾ ಯೋಜನೆ ಅಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರೂಪಾಯಿ ಮತ್ತು ಗರಿಷ್ಠ 10 ಲಕ್ಷ ರೂಪಾಯಿ ಆಗಿರುತ್ತದೆ. ಪ್ರೀಮಿಯಂ ಅನ್ನು ಮೂರು ರೀತಿಯ ಪಾವತಿ ಅವಧಿಯ ಆಯ್ಕೆಗಳಲ್ಲಿ ಠೇವಣಿ ಇಡಬಹುದು. ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಹಣವನ್ನು ಪಾವತಿಸಬಹುದು. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಈ ಯೋಜನೆಯು ಹಣ ಪಾವತಿಗೆ 30 ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ಸಹ ನೀಡುತ್ತದೆ. ಇದು ಪಾಲಿಸಿದಾರರಿಗೆ ಉಪಯುಕ್ತವಾಗಿರುತ್ತದೆ.

ಈ ಪಾಲಿಸಿಯ ಅಡಿಯಲ್ಲಿ ನೀವು ಹಣ ಪಾವತಿಸುವ ಅವಧಿಗಳನ್ನು 55, 58 ಮತ್ತು 60 ವರ್ಷಗಳವರೆಗೆ ಮಾತ್ರ ಇಡಲಾಗಿದೆ. ಅಂದರೆ, ನೀವು ನಿಮ್ಮ 19ನೇ ವಯಸ್ಸಿನಿಂದ 74ನೇ ವಯಸ್ಸಿನ ವರೆಗೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಅಂತಿಮವಾಗಿ 35 ಲಕ್ಷವನ್ನು ಪಡೆಯಬಹುದು. ವ್ಯಕ್ತಿಯೊಬ್ಬ 55 ವರ್ಷಗಳ ಅವಧಿಗೆ ತಿಂಗಳಿಗೆ 1,515 ರುಪಾಯಿಯನ್ನು, 58 ವರ್ಷಗಳ ಅವಧಿಗೆ ಪ್ರತಿ ತಿಂಗಳು 1,463 ಮತ್ತು 60 ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ 1,411 ಹಾಕಬಹುದು ಅಥವಾ ಪ್ರತಿದಿನ 50 ರುಪಾಯಿಯನ್ನು ಪಾವತಿಸಬಹುದು.

ಗ್ರಾಮ ಸುರಕ್ಷಾ ಯೋಜನೆಯಲ್ಲಿ 55 ವರ್ಷಗಳ ಅವಧಿಗೆ ಹಣ ತೊಡಗಿಸುವವರು ಮೆಚ್ಯುರಿಟಿ ವೇಳೆ 31.60 ಲಕ್ಷ ರೂಪಾಯಿಯನ್ನು ಪಡೆಯುವರು. 58 ವರ್ಷಗಳ ಅವಧಿಗೆ ಹಣ ಪಾವತಿಸುವವರು ಮುಕ್ತಾಯದ ವೇಳೆ 33.40 ಲಕ್ಷ ರೂಪಾಯಿ ಪಡೆದರೆ, 60 ವರ್ಷಗಳ ಕಾಲ ಪಾಲಿಸಿ ಪ್ರೀಮಿಯಂ ಪಾವತಿಸುವವರು ಕೊನೆಗೆ 34.60 ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ.

ಹಣ ಪಾವತಿಯು ಸಾಧ್ಯವಾಗುತ್ತಿಲ್ಲ ಅಥವಾ ಈ ಪಾಲಿಸಿ ಬೇಡ ಎನಿಸಿದಾಗ ಹೂಡಿಕೆಯ ದಿನದಿಂದ 3 ವರ್ಷಗಳ ನಂತರ ಯಾವುದೇ ವ್ಯಕ್ತಿಯು ತಮ್ಮ ಪಾಲಿಸಿಯನ್ನು ಹಿಂಪಡೆಯಬಹುದು. ಆದರೆ, 5 ವರ್ಷಗಳ ಅವಧಿಗೆ ಮೊದಲೇ ಪಾಲಿಸಿಯನ್ನು ಹಿಂಪಡೆದರೆ ಯಾವುದೇ ಬೋನಸ್ ಸಿಗುವುದಿಲ್ಲ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ 4 ವರ್ಷಗಳ ಬಳಿಕ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.

ಯೋಜನೆಯಡಿಯಲ್ಲಿ ಪಾವತಿಸಲಾದ ಒಂದು ಸಾವಿರ ರೂಪಾಯಿಗೆ ಪ್ರತಿ ವರ್ಷಕ್ಕೆ 60 ರೂಪಾಯಿ ಬೋನಸ್ ನೀಡಲಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಪೋಸ್ಟ್ ಆಫೀಸಿನ ಅಧಿಕೃತ ಪುಟವನ್ನು ಒಮ್ಮೆ ಪರಿಶೀಲಿಸಿ.

Leave A Reply

Your email address will not be published.