ದುನಿಯಾ ಇನ್ನು ದುಬಾರಿ | ನಾಳೆಯಿಂದ ಹಾಲು, ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಆಗಲಿದೆ ದುಬಾರಿ !

ದಿನಬಳಕೆಯ ವಸ್ತುಗಳ ಮೇಲೆ ಶೇ.5 ರಷ್ಟು ಜೆಎಸ್‍ಟಿ ಹೆಚ್ಚಳ ನಾಳೆ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ನಾಳೆಯಿಂದ ಹೊಸ ದುನಿಯಾ. ನೀವು ಆಯ್ಕೆ ಮಾಡಿಕೊಟ್ಟ ಸರ್ಕಾರ ಮಾಡಿದ್ದಾರೆ ನಿಮಗೆ ದುಬಾರಿ ದುನಿಯಾ !

ಏನೆಲ್ಲಾ ವಸ್ತುಗಳ ಬೆಲೆ ಏರಿಕೆ?

ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ದುಬಾರಿ.

ಪ್ಯಾಕ್ ಮಾಡಿದ ಮೀನು, ಮಾಂಸ, ಜೇನು, ಬೆಲ್ಲ, ತರಕಾರಿ, ಗೋಧಿ ಸೇರಿ ಹಲವು ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಲಿದೆ.

ಹೋಟೆಲ್ ರೂಂಗಳ ಬಾಡಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಹೆಚ್ಚಾಗಲಿದೆ. ಜುಲೈ 18 ರಿಂದಲೇ ಜಿಎಸ್‍ಟಿ ಅನ್ವಯವಾಗಲಿದೆ.

ಈ ಹಿಂದೆ ಇದ್ದ ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ ಅಧಿಸೂಚನೆ ಹೊರಡಿಸಿದೆ.

1,000 ರೂ.ಗಿಂತ ಕಡಿಮೆ ಇರುವ ಹೊಟೇಲ್ ಕೊಠಡಿಗಳ ನಿತ್ಯದ ಕೊಠಡಿಗಳಿಗೆ ಇದ್ದ ವಿನಾಯಿತಿ ರದ್ದಾಗಿದೆ. ಅವುಗಳ ಮೇಲೆ ಇನ್ನೂ ಶೇ.21ರಷ್ಟು ತೆರಿಗೆ ಬೀಳಲಿದೆ.

ನಿತ್ಯ 5,000ರೂ.ಗಿಂತ ಹೆಚ್ಚಿನ ಶುಲ್ಕವಿರುವ ಐಸಿಯು ಹೊರತುಪಡಿಸಿ, ಆಸ್ಪತ್ರೆ ಕೊಠಡಿಗಳ ಬಿಲ್‍ಗೆ ಇನ್ನು ನೀವು ಶೇ.5ರಷ್ಟು ಹೆಚ್ಚು ಜಿಎಸ್‍ಟಿ ತೆರಬೇಕಾಗುತ್ತದೆ. ಆ ಕಾರಣ ಆಸ್ಪತ್ರೆ ಖರ್ಚು ಕೂಡ ದುಬಾರಿಯಾಗಲಿದೆ. ಅಂಚೆ ಇಲಾಖೆಯ ಕೆಲವು ಸೇವೆಗಳು ಸಹ ದುಬಾರಿಯಾಗಲಿದೆ.

ಸೋಲಾರ್ ವಾಟರ್ ಹೀಟರ್, ಮುದ್ರಣ, ಬರಹ/ಚಿತ್ರಕಲೆಯ ಇಂಕ್, ಎಲ್‍ಇಡಿ ಬಲ್ಬ್, ಎಲ್‍ಇಡಿ ಲ್ಯಾಂಪ್, ಪ್ಯಾಕ್ ಮಾಡಿದ ಬ್ರ್ಯಾಡೆಂಡ್ ಭೂ ಪಟ, ಚಾರ್ಟ್, ಅಟ್ಲಾಸ್ ಬೆಲೆ ಕೂಡ ಹೆಚ್ಚಾಗಲಿದೆ. ಇನ್ನು ಜೀವ ರಕ್ಷಕ ಬ್ಲಡ್ ಬ್ಯಾಂಕ್‍ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯನ್ನು ಸರ್ಕಾರ ರದ್ದುಗೊಳಿಸಿದೆ.

Leave A Reply

Your email address will not be published.