ಮಂಗಳೂರು : “ಗರ್ಲ್ಸ್ ಕಾನ್ಫರೆನ್ಸ್ ” ಮೆರವಣಿಗೆ ತಡೆಹಿಡಿದ ಪೊಲೀಸರು!

ಮಂಗಳೂರು : ಸಿಎಫ್‌ಐ ‘ಗರ್ಲ್ಸ್‌ ಕಾನ್ಫರೆನ್ಸ್‌’ ಮೆರವಣಿಗೆಗೆ ಅನುಮತಿ ನೀಡದ ಮಂಗಳೂರು ಪೊಲೀಸರು.*

ಮಂಗಳೂರು : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅವರ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮವೊಂದು ಮಂಗಳೂರು ನಗರದ ಪುರಭವನದಲ್ಲಿ ಏರ್ಪಡಿಸಿದ್ದ ‘ಗರ್ಲ್ಸ್‌ ಕಾನ್ಫರೆನ್ಸ್‌’ ಸಮಾವೇಶದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಮೆರವಣಿಗೆಯನ್ನು ಪೊಲೀಸರು ತಡೆಹಿಡಿದ ಘಟನೆಯೊಂದು ಶನಿವಾರ ನಡೆದಿದೆ.

ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದು, ನಂತರ ಪುರಭವನದಲ್ಲಿ ಸಮಾವೇಶ ನಡೆಸಲು ಸಿಎಫ್ಐ ಉದ್ದೇಶಿಸಿತ್ತು. ಆದರೆ ಸಮಾವೇಶಕ್ಕೆ ಮಾತ್ರ ಅನುಮತಿ ನೀಡಿದ್ದೇವೆ. ಮೆರವಣಿಗೆಗೆ ಅನುಮತಿ ನಾವು ನೀಡಿಲ್ಲ. ಹಾಗಾಗಿ ಮೆರವಣಿಗೆಯಲ್ಲಿ ಸಾಗಲು ಬಿಡುವುದಿಲ್ಲ’ ಎಂದು ನಗರ ಪೊಲೀಸರು ಹೇಳಿದ್ದಾರೆ.

ಇದಕ್ಕೊಪ್ಪದ ಸಿಎಫ್ಐ ಮುಖಂಡರು, ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಬಳಿಯ ಮಸ್ಜಿದ್ನೂರುನ್ನುಲ್‌ ಬಳಿಯಿಂದ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದರು. ಮಸೀದಿ ಬಳಿ ಸಾವಿರಾರು ಮಹಿಳಾ ಕಾರ್ಯಕರ್ತರು ಸೇರಿದ್ದರು. ಇದಕ್ಕೂ ಪೊಲೀಸರು ಅವಕಾಶ ನೀಡಲಿಲ್ಲ.

ಈ ವೇಳೆ ಸ್ಥಳಕ್ಕೆ ಬಂದ‌ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ‘ನಗರದಲ್ಲಿ ಮೆರವಣಿಗೆ ನಡೆಸುವುದಕ್ಕೆ ಯಾವ ಸಂಘಟನೆಗೂ ಅವಕಾಶ ನೀಡುತ್ತಿಲ್ಲ.

ನಿಮಗೆ ಪುರಭವನದಲ್ಲಿ ಸಮಾವೇಶ ನಡೆಸಲಷ್ಟೇ ಅನುಮತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸಲು ಅವಕಾಶ ಇಲ್ಲ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಲು ಮೂವರು ಬಾಲಕರು ಸಿಎಫ್ಐ ಬಾವುಟ ಹೊದ್ದುಕೊಂಡು ಸಜ್ಜಾಗಿದ್ದರು. ಇದನ್ನು ಗಮನಿಸಿದ ಪೊಲೀಸ್‌ಕಮಿಷನರ್, ಮಕ್ಕಳನ್ನು ಮೆರವಣಿಗೆಗೆ ಕರೆತಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಮಕ್ಕಳನ್ನು ಒಪ್ಪಿಸುವಂತೆ ಸೂಚಿಸಿದರು. ಮಕ್ಕಳನ್ನು ವಶಕ್ಕೆ ಪಡೆದಕೊಂಡು ಪೊಲೀಸರು, ಮೆರವಣಿಗೆ ರದ್ದಾದ ಬಳಿಕ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

Leave A Reply

Your email address will not be published.